Friday, April 19, 2024

ಪ್ರತಿಮೆಗಳಿಗೆ ಅವಮಾನಿಸಿದವರ ವಿರುದ್ಧ ಸರ್ಕಾರ ಶಿಸ್ತು ಕ್ರಮ ಜರುಗಿಸಬೇಕು:ನಿವೃತ್ತ ಸೈನಿಕ ವೀರೂ

ಬೈಲಹೊಂಗಲ: ಸಂಗೊಳ್ಳಿ ರಾಯಣ್ಣ ಹಾಗೂ ಶಿವಾಜಿ ಮಹಾರಾಜರು ಇಬ್ಬರೂ ಮಹಾನ್‌ ನಾಯಕರೇ. ಅವರ ಪ್ರತಿಮೆಗಳಿಗೆ ಅವಮಾನಿಸಿದವರ ವಿರುದ್ಧ ಸರ್ಕಾರ ಶಿಸ್ತು ಕ್ರಮ ಜರುಗಿಸಬೇಕು ಎಂದು ನಿವೃತ್ತ ಸೈನಿಕ ವೀರೂ ದೊಡವೀರಪ್ಪನವರ ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಭಾರತ ಎಂದರೆ ಸರ್ವಜನಾಂಗದ ಶಾಂತಿಯ ತೋಟವಿದ್ದಂತೆ. ಐಕ್ಯತೆಯೇ ಭಾರತಾಂಬೆಯ ಮೂಲಮಂತ್ರ. ಹಾಗಾಗಿ ಕನ್ನಡ ಹಾಗೂ ಮರಾಠಿ ಭಾಷಿಕರು ತಮ್ಮಲ್ಲಿನ ಭೇಧ–ಭಾವವನ್ನು ಮನದಿಂದ ತೆಗೆದು ಹಾಕಿ, ನಾವೆಲ್ಲರೂ ಒಂದೇ ಎಂಬುದನ್ನು ಸಾರಬೇಕು. ಆಗ ಸುಂದರ ಹಾಗೂ ಸುಸಂಸ್ಕೃತ ಸಮಾಜ ಕಟ್ಟಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

‘ನನ್ನ ಸೇವಾವಧಿಯಲ್ಲಿ ಹಲವು ರಾಜ್ಯಗಳ ಸೈನಿಕರೊಂದಿಗೆ ಕೆಲಸ ಮಾಡಿದ್ದೇನೆ. ಆದರೆ, ನಮ್ಮ ಸ್ನೇಹಕ್ಕೆ ಎಂದಿಗೂ ಅವರ ಭಾಷೆಯಾಗಲಿ ಅಥವಾ ಧರ್ಮವಾಗಲಿ ಅಡ್ಡಿಬಂದಿಲ್ಲ. ಅದು ತಿಳಿದಿಯೂ ಇಲ್ಲ. ಗ್ರಾಮೀಣ ಭಾಗದಲ್ಲಿ ಇಂದಿಗೂ ಅದೇ ಪರಿಸರವಿದೆ. ಇದನ್ನು ಎಲ್ಲರೂ ಕಾಯ್ದುಕೊಂಡು ಹೋಗಬೇಕು. ಸಮಾಜದಲ್ಲಿ ಸಹಬಾಳ್ವೆಯಿಂದ ಬಾಳಿ ಯುವಪೀಳಿಗೆಯಲ್ಲಿ ಸಾಮರಸ್ಯ ಬೆಳೆಸಬೇಕು’ ಎಂದು ಮನವಿ ಮಾಡಿದ್ದಾರೆ.

ಜಿಲ್ಲೆ

ರಾಜ್ಯ

error: Content is protected !!