Thursday, July 18, 2024

ಕನ್ನಡ ಧ್ವಜ್ ವನ್ನು ಸುಟ್ಟುಹಾಕಿದ ಕಾರ್ಯಕರ್ತರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ

 ಹುಬ್ಬಳ್ಳಿ: ಕನ್ನಡ ಧ್ವಜ್ವನ್ನು ಸುಟ್ಟು ಹಾಕಿದ ಮಹಾರಾಷ್ಟ್ರ ದ ಮರಾಟಿಗರನ್ನುಬಂದಿಸಿ ಅವರ ಮೇಲೆ ಕಾನೂನು

ಕ್ರಮವನ್ನು ತೆಗೂಡುಕೊಳ್ಳುವಂತೆ ಒತ್ತಾಯಿಸಿ ಮಹಾರಾಷ್ಟ್ರ ಸಿ ಎಂ ಠಾಕ್ರೆ ಬಾವ ಚಿತ್ರವನ್ನು ಸುಟ್ಟು ಹಾಕಿ ಹುಬ್ಬಳ್ಳಿಯಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದರು.

ನಗರದ ಸಂಗೊಳ್ಳಿರಾಯಣ್ಣ ವೃತದಲ್ಲಿ ಪ್ರತಿಭಟನೆ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿ ಕರ್ನಾಟಕ ಗಡಿ ಭಾಗದ ವಿಷಯವನ್ನು ಇಟ್ಟುಕೊಂಡು ಸುಮಾರು ವರ್ಷಗಳಿಂದ ಮರಾಠಿಗರು ಕನ್ನಡಿಗರಿಗೆ ಅಪಮಾನ ಹಾಗು ನಾಡದ್ರೋಹ ಕೆಲಸವನ್ನು ಮಾಡುತ್ತಿದ್ದಾರೆ ಮತ್ತೆ ಈಗ ಕರ್ನಾಟಕದ ಕನ್ನಡ ಭಾವುಟವನ್ನು ಸುಟ್ಟು ಹಾಕಿದ ಪುಂಡರನ್ನು ಕೂಡಲೇ ಬಂಧಿಸಿ ಸರ್ಕಾರ ಇವರ ಮೇಲೆ ಕಾನೂನು ಕ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಆಗ್ರಹ ಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕರವೆ ಜಿಲ್ಲಾ ಅದ್ಯಕ್ಷ ಮಂಜುನಾಥ ಲೂತಿಮಠ ನಾಡ್ ಧ್ವಜ್ ಸುಟ್ಟು ಹಾಕಿದ ಪುಂಡರ್ ಮೇಲೆ ಸರ್ಕಾರ ಕ್ರಮ ತೆಗೂಡುಕೊಳ್ಳದೆ ಇದ್ದರೆ ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯಾದೆಂತ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಜಿಲ್ಲೆ

ರಾಜ್ಯ

error: Content is protected !!