Thursday, July 25, 2024

ಸಲಾಂ ರಾಕಿ ಭಾಯ್ ವಿಡಿಯೋ ಸಾಂಗ್’ ಬಿಡುಗಡೆ

ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್ ಅವರ ಕೆಜಿಎಫ್ 1 ಮಾಡಿದ ಅಬ್ಬರ ನಮ್ಮೆಲ್ಲರಿಗೂ ಗೊತ್ತಿದೆ. ‌ಇದೀಗ ಪಾರ್ಟ್ 2 ಮೂಲಕ ಅದೇ ಅಬ್ಬರ ಮುಂದುವರಿಸೋಕೆ ರಾಕಿ ಭಾಯ್ ಸಜ್ಜಾಗಿದ್ದು, ಅದಕ್ಕೆ ಮುನ್ನಡಿಯಾಗಿ ಹೊಂಬಾಳೆ ಪ್ರೊಡಕ್ಷನ್ ‘ಸಲಾಂ ರಾಕಿ ಭಾಯ್ ವಿಡಿಯೋ ಸಾಂಗ್’ ಅನ್ನು ಬಿಡುಗಡೆ ಮಾಡಿದೆ.

‘ತಡೆಯೋಕೆ ಇವನನ್ನ ತರಬೇಕು ಎಲ್ಲಿಂದ ಸೈನ್ಯಾನ? ತಡೆಯೋಕೆ ಸಾಧ್ಯನಾ ಧುಮ್ಮಿಕ್ಕಿ ಬರುವಂತ ಅಲೆಯನ್ನ? ಸಲಾಮ್ ರಾಕಿ ಭಾಯ್’ ಎಂಬ ಅಡಿಬರಹದೊಂದಿಗೆ ವಿಡಿಯೋ ಸಾಂಗ್ ಕುರಿತು ಹೊಂಬಾಳೆ ಪ್ರೊಡಕ್ಷನ್ ಕೂ ಮಾಡಿದೆ.


ವಿಡಿಯೋದ ಕೊನೆಯಲ್ಲಿ ಸಿನಿಮಾ ಬಿಡುಗಡೆಯ ಬಗ್ಗೆ ತಿಳಿಸಲಾಗಿದ್ದು, ಮುಂದಿನ ವರ್ಷ ಏಪ್ರಿಲ್ 14ರಂದು ಕೆಜಿಎಫ್ ಚಾಪ್ಟರ್-2 ಸಿನಿಮಾ ಎಲ್ಲೆಡೆ ತೆರೆಕಾಣಲಿದೆ.

ಇತ್ತೀಚೆಗಷ್ಟೇ ಕೆಜಿಎಪ್​ ನಿರ್ದೇಶಕ ಪ್ರಶಾಂತ್ ನೀಲ್ ಕೆಜಿಎಫ್​ ಚಾಪ್ಟರ್-2ನಲ್ಲಿ ಅಧೀರನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಬಾಲಿವುಡ್​ ನಟ ಸಂಜಯ್​ದತ್​ ಅವರ ಡಬ್ಬಿಂಗ್ ಮುಕ್ತಾಯಗೊಳ್ಳುವ ಮೂಲಕ ಎಲ್ಲಾ ಭಾಷೆಗಳ ಡಬ್ಬಿಂಗ್ ಕೆಲಸ ಮುಕ್ತಾಯಗೊಂಡಿದೆ. ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಜಿಲ್ಲೆ

ರಾಜ್ಯ

error: Content is protected !!