Tuesday, May 28, 2024

ವೈರ್‌ನಿಂದ ಮಗುವಿನ ಕತ್ತು ಹಿಸುಕಿ ಕೊಂದ ಮಲತಾಯಿ

ವಿಜಯಪುರ: ಮೊಬೈಲ್ ಚಾರ್ಜರ್ ವೈರ್‌ನಿಂದ ಮಗುವಿನ ಕತ್ತು ಹಿಸುಕಿ ಮಲತಾಯಿಯೇ ಹತ್ಯೆ ಮಾಡಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.ತಾಲೂಕಿನ ಮಿಂಚನಾಳ ತಾಂಡಾದಲ್ಲಿ ಈ ಘಟನೆ ನಡೆದಿದೆ.

ಮೊಬೈಲ್ ಚಾರ್ಜರ್‌ ವೈರ್ ನಿಂದ ಕತ್ತು ಹಿಸುಕಿ ಹತ್ಯೆಗೈಯಲು ಮಲತಾಯಿ ಪ್ರಯತ್ನಿಸಿದ್ದಾಳೆ. ಘಟನೆಯಲ್ಲಿ ಇಬ್ಬರು ಮಕ್ಕಳಲ್ಲಿ ಸುಮಿತ್ ವಿನೋದ ಚವ್ಹಾಣ್ (5) ಅಸುನೀಗಿದ್ದಾನೆ. ಸಂಪತ್ ವಿನೋದ್ ಚವ್ಹಾಣ್ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಮಲತಾಯಿ ಸವಿತಾ ಹತ್ಯೆ ಮಾಡಿದ್ದಾರೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ವಿನೋದ್ ಮೊದಲನೆ ಹೆಂಡತಿ ಶಾರುಬಾಯಿ ಕಳೆದ ನಾಲ್ಕು ತಿಂಗಳ ಹಿಂದೆ ಮೃತಪಟ್ಟಿದ್ದಳು. ನಂತರ ವಿನೋದ್, ಸವಿತಾಳನ್ನು ಎರಡನೇ ಮದುವೆಯಾಗಿದ್ದರು. ಕೊಲೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ವಿಜಯಪುರ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಜಿಲ್ಲೆ

ರಾಜ್ಯ

error: Content is protected !!