Saturday, June 15, 2024

ಪಟ್ಟಣ ಪಂಚಾಯತಿ ಚುನಾವಣೆಗೆ ಆಫ್ ಅಭ್ಯರ್ಥಿಗಳು ಕಣಕ್ಕೆ ಲಗ್ಗೆ.

ಬೆಳಗಾವಿ:ಕಿತ್ತೂರು ಮತ್ತು ಎಂ.ಕೆ ಪಟ್ಟಣ ಪಂಚಾಯತಿಗಳ ಚುನಾವಣೆ ನಡೆಯುತ್ತಿರುವ ಹಿನ್ನೆಲೆ ನಮ್ಮ ಆಮ್ ಆದ್ಮಿ ಪಕ್ಷದಿಂದ ಎರಡು ಪಟ್ಟಣ ಪಂಚಾಯತಗಳಿಗೆ ಆಮ್ ಆದ್ಮಿ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಸಲು ಸಂಪೂರ್ಣ ಸಿದ್ದತೆ ಮಾಡಿಕೊಂಡಿದ್ದೆವೆ ಎಂದು ಚನ್ನಮ್ಮನ ಕಿತ್ತೂರು ವಿಧಾನಸಭಾ ಮತಕ್ಷೇತ್ರದ ಮುಖಂಡರಾದ ಆನಂದ ಹಂಪಣ್ಣವರ ಕನ್ನಡ ಸಾಹಿತ್ಯ ಭವನದಲ್ಲಿ ಪತ್ರಿಕಾಗೊಷ್ಟಿ ಯಲ್ಲಿ ತಿಳಿಸಿದರು.

 ಎರಡು ಪಟ್ಟಣ ಪಂಚಾಯತಗಳ ಎಲ್ಲಾ ವಾರ್ಡುಗಳಿಗೆ ಆಮ್ ಆದ್ಮಿ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಸಲು ನಾವು ಸಿದ್ದರಿದ್ದು, ಕೆಲವೆ ದಿನಗಳಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದರು.

ಅರವಿಂದ್ ಕೇಜ್ರಿವಾಲ ಅವರ ಪಾರದರ್ಶಕ ಆಡಳಿತಕ್ಕೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ. ಅದೆ ರೀತಿ ಸ್ಥಳೀಯ ಮಟ್ಟದಲ್ಲಿ ಕೂಡ ಪಾರದರ್ಶಕ ಮತ್ತು ಭ್ರಷ್ಟಾಚಾರ ಮುಕ್ತ ಸಮಗ್ರ ಅಭಿವೃದ್ಧಿ ಆಡಳಿತಕ್ಕಾಗಿ ನಾವು ಪಟ್ಟಣ ಪಂಚಾಯತ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಸುತ್ತಿದ್ದೆವೆ ಎಂದು  ಆನಂದ ಹಂಪಣ್ಣವರ ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ವಿಜಯ ಪಾಟೀಲ್, ಕಾರ್ಯದರ್ಶಿ ಕಲಾರಕೊಪ್ಪ,ಅಬ್ದುಲ್ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

ಜಿಲ್ಲೆ

ರಾಜ್ಯ

error: Content is protected !!