Saturday, July 20, 2024

ಮೇಟ್ಯಾಲ ಗ್ರಾಮದಲ್ಲಿ  ಗುರುಬಸವ ಅಮೃತ ಶಿಲಾ ಪುತ್ಥಳಿ ಮೆರವಣಿಗೆ ಹಾಗೂ ಗುರುಬಸವ ಮಂಟಪ ಉದ್ಘಾಟನಾ ಸಮಾರಂಭ ಜರುಲಿದೆ.

ಸುದ್ದಿ ಸದ್ದು ನ್ಯೂಸ್‌  

ವರದಿ: ಬಸವರಾಜ ಚಿನಗುಡಿ

ಚನ್ನಮ್ಮನ ಕಿತ್ತೂರು: ಸಮೀಪ ಮೇಟ್ಯಾಲ ಗ್ರಾಮದಲ್ಲಿ ಡಿಸೆಂಬರ್‌ 10 ರಂದು ಗುರುಬಸವ ಅಮೃತ ಶಿಲಾ ಪುತ್ಥಳಿ ಮೆರವಣಿಗೆ ಹಾಗೂ 11 ರಂದು ಗುರುಬಸವ ಮಂಟಪ ಉದ್ಘಾಟನಾ ಸಮಾರಂಭ ಜರುಗಲಿದೆ.

ಸಮಾರಂಭದ ದಿವ್ಯ ನೇತೃತ್ವವನ್ನು ಕೂಡಲಸಂಗಮ ಬಸವಧರ್ಮಪೀಠದ ಪೂಜ್ಯಶ್ರೀ ಮಹಾಜಗದ್ಗುರು ಮಾತೆ ಡಾ. ಗಂಗಾದೇವಿ ಅವರು ಹಾಗೂ  ದಿವ್ಯ ಸಾನಿಧ್ಯವನ್ನು ಗದಗ-ಡಂಬಳ  ತೋಂಟದಾರ್ಯ ಸಂಸ್ಥಾನ ಮಠದ ಪೂಜ್ಯ ಶ್ರೀ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು, ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪ್ರಥಮ ಜಗದ್ಗುರು ಪೀಠದ ಪೂಜ್ಯ ಶ್ರೀ ಜಗದ್ಗುರು ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು, ಇಳಕಲ್ಲ ಚಿತ್ತರಗಿ ವಿಜಯಮಹಾಂತೇಶ್ವರ ಸಂಸ್ಥಾನ ಮಠದ ಪೂಜ್ಯ ಶ್ರೀ ಗುರು ಮಹಾಂತ ಮಹಾಸ್ವಾಮಿಗಳು, ಮುಂಡರಗಿ ಮತ್ತು ಬೈಲೂರ ತೋಂಟದಾರ್ಯ ಶಾಖಾಮಠ ಹಾಗೂ ನಿಷ್ಕಲ ಮಂಟಪದ ಪೂಜ್ಯ ಶ್ರೀ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮಿಗಳು, ಚನ್ನಮ್ಮನ ಕಿತ್ತೂರು ರಾಜಗುರು ಸಂಸ್ಥಾನ ಕಲ್ಮಠದ ಪೂಜ್ಯ ಶ್ರೀ ಮಡಿವಾಳ ರಾಜಯೋಗಿಂದ್ರ ಮಹಾಸ್ವಾಮಿಗಳು, ಬೆಳಗಾವಿ ನಾಗನೂರ ರುದ್ರಾಕ್ಷಿಮಠದ ಪೂಜ್ಯ ಶ್ರೀ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು, ನೇಗಿನಹಾಳ  ಜಗದ್ಗುರು ಮಡಿವಾಳೇಶ್ವರ ಮಠದ  ಪೂಜ್ಯ ಶ್ರೀ ಬಸವ ಸಿದ್ಧಲಿಂಗ ಮಹಾಸ್ವಾಮಿಗಳು, ನಿಚ್ಚಣಕಿ ಜಗದ್ಗುರು ಮಡಿವಾಳೇಶ್ವರ ಮಠದ ಪೂಜ್ಯ ಶ್ರೀ ಪಂಚಾಕ್ಷರಿ ಮಹಾಸ್ವಾಮಿಗಳು ವಹಿಸಲಿದ್ದಾರೆ.

ಶರಣ‌ ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾದ ಮಹಾಪ್ರಧಾನ ಕಾರ್ಯದರ್ಶಿ ಶರಣ ಡಾ. ಶಿವಾನಂದ ಜಾಮದಾರ, ಹಿರಿಯ ಪತ್ರಕರ್ತ ಶರಣ ಚಂದ್ರಗೌಡ ಪಾಟೀಲ, ಬೆಳಗಾವಿ ಲಿಂಗಾಯತ ಧರ್ಮ ಮಹಾಸಭಾದ  ರಾಜ್ಯ ಉಪಾಧ್ಯಕ್ಷ ಶರಣ ಕೆ ಬಸವರಾಜ, ಜಾಗತಿಕ ಲಿಂಗಾಯತ ಮಹಾಸಭಾದ ಬೆಳಗಾವಿ ಜಿಲಾಧ್ಯಕ್ಷ ಶರಣ ಬಸವರಾಜ ರೊಟ್ಟಿ, ರಾಷ್ಟ್ರೀಯ ಬಸವ ಸೇನೆಯ ರಾಜ್ಯಾಧ್ಯಕ್ಷ ಶರಣ ಶಂಕರ ಗುಡಸ, ಲಿಂಗಾಯತ ಧರ್ಮ ಮಹಾಸಭಾದ  ಗೌರವಾಧ್ಯಕ್ಷ ಶರಣ ಕಲ್ಲಪ್ಪ ಕುಗಟಿ ಮುಖ್ಯ ಅತಿಥಿ ಸ್ಥಾನವನ್ನು ವಹಿಸಲಿದ್ದಾರೆ.

ಬೆಳಗಾವಿ ರಾಷ್ಟ್ರೀಯ ಬಸವದಳದ ಅಧ್ಯಕ್ಷ ಶರಣ ಶರಣ ಅಶೋಕ ಬೆಂಡಿಗೇರಿ, ಬಸವ ಕೇಂದ್ರದ ಸಂಚಾಲಕ  ಜಿ.ಬಿ ಹಳ್ಯಾಳ, ಲಿಂಗಾಯತ ಧರ್ಮದ ಹೋರಾಟಗಾರರಾದ ಶರಣೆ ಅನ್ನಪೂರ್ಣ ಹೀರಲಿಂಗನ್ನವರ, ಶರಣ ಉದಯಕುಮಾರ ರ‍ರ್ಜಿಗಿಮಠ, ಬೆಳಗಾವಿ ರಾಷ್ಟ್ರೀಯ ಬಸವದಳದ ಉಪಾಧ್ಯಕ್ಷ ಶರಣ ಸುದೀರ ವಾಲಿ, ರಾಷ್ಟ್ರೀಯ ಬಸವದಳದ ಯುವ ಮುಖಂಡ  ಶರಣ ಬಸವರಾಜ ಜಿಗಜಿನ್ನಿ, ಬೈಲಹೊಂಗಲ ಜಾಗತಿಕ ಲಿಂಗಾಯತ ಮಹಾಸಭಾದ ಉಪಾಧ್ಯಕ್ಷ ಶರಣ ವಿರೇಶ ಹಲಕಿ, ತಡಕೋಡ ರಾಷ್ಟ್ರೀಯ ಬಸವದಳದ ಮುಖಂಡರಾದ  ಶರಣ ಈರಣ್ಣಾ ಗಾಮನ್ನವರ ಶರಣ ಗುರುದೇವ ಕಿತ್ತೂರಮಠ ಅತಿಥಿಗಳಾಗಿ  ಆಗಮಿಸಲಿದ್ದಾರೆ.

ಭೂಮಿ ದಾಸೋಹಿಗಳಾದ ಶರಣ ಪುಂಡಲೀಕಪ್ಪ ಅಸುಂಡಿ, ಶರಣೆ  ಪಾರ್ವತೆವ್ವ ಅಸುಂಡಿ, ಮಹಾದಾಸೋಹಿಗಳಾದ ಶರಣ ಚನ್ನಬಸಪ್ಪ ಮಾಳಗಿ, ಶರಣ ಶೇಖಪ್ಪ ಅಸುಂಡಿ, ಶರಣ ಮಹಾದೇವಪ್ಪ ನಂದಿಹಳ್ಳಿ ಸೇರಿದಂತೆ ಮೆಟ್ಯಾಲ ಗ್ರಾಮದ ಹಿರಿಯರಾದ ಶರಣ ಅಡಿವೆಪ್ಪ ಕೋಟಿ, ಶರಣ ಮಲ್ಲಪ್ಪ ಮಾಳಗಿ,  ಶರಣ ವೀರಭದ್ರಯ್ಯಾ ಹಿರೇಮಠ,  ಶರಣ ಬಸಲಿಂಗಪ್ಪ ಕುರಿ,  ಶರಣ ರುದ್ರಪ್ಪ ಕರಿಕಟ್ಟಿ,  ಶರಣ ದೇಮಪ್ಪ ಕಡಸಗಟ್ಟಿ, ಶರಣ ಬಸಪ್ಪ ಶಿವಪೂಜೆ, ಶರಣ ಬಸಪ್ಪ ಗರ್ಜೂರ, ಶರಣ ಭೀಮಪ್ಪ ಮರಿಗೌಡ್ರ, ಶರಣ ದೇಮಪ್ಪ ಪೂಜೇರ, ಶರಣ ಯಲ್ಲಪ್ಪ ಕಿಲಾರಿ, ಶರಣ ಬಸಪ್ಪ ಕಮ್ಮಾರ, ಶರಣ ನಾಗಪ್ಪ ವೆಂಕಟಪ್ಪನವರ, ಶರಣ ನಾಗಪ್ಪ ಹಡಪದ, ಶರಣ ಸಿದ್ದಪ್ಪ ಮಾಳಗಿ, ಶರಣ ವಿರುಪಾಕ್ಷಪ್ಪ ಸನದಿ, ಶರಣ ಭೀಮಶೇಪ್ಪ ಹಳಬರ, ಶರಣ ಯಲ್ಲಪ್ಪ ಹರಿಜನ ಉಪಸ್ಥಿತಿರಿರಲಿದ್ದಾರೆ ಎಂದು ಲಿಂಗಾಯತ ಧರ್ಮ ಮಹಾಸಭಾ, ರಾಷ್ಟ್ರೀಯ ಬಸವದಳ, ಜಾಗತಿಕ ಲಿಂಗಾಯತ ಮಹಾಸಭಾ, ಬಸವ ಕೇಂದ್ರ, ರಾಷ್ಟ್ರೀಯ ಬಸವಸೇನಾ, ಲಿಂಗಾಯತ ಅಭಿವೃದ್ಧಿ ಸಂಸ್ಥಯ ಪದಾಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಈ ಕಾರ್ಯಕ್ರಮಕ್ಕೆ ಸಮಸ್ತ ಬಸವಾಭಿಮಾನಿಗಳು, ಶರಣರು, ಚನ್ನಮ್ಮನ ಕಿತ್ತೂರು ನಾಡಿನ ಸಮಸ್ತ ಬಸವಪರ  ಸಂಘಟನೆಗಳು, ವಿವಿಧ ಸಂಘಸಂಸ್ಥೆಗಳು, ಪ್ರವಚನಕಾರರು, ವಚನ ಗಾಯಕರು ಸೇರಿದಂತೆ ಇನ್ನೂ ಅನೇಕರು ಭಾಗವಹಿಸಲಿದ್ದು ನಾಡಿನ ಸರ್ವರೂ ಗುರುಬಸವ ಅಮೃತ ಶಿಲಾ ಪುತ್ಥಳಿ ಮೆರವಣಿಗೆ ಹಾಗೂ ಗುರುಬಸವ ಮಂಟಪ ಉದ್ಘಾಟನೆ ಸಮಾರಂಭಕ್ಕೆ ಆಗಮಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

 

ಜಿಲ್ಲೆ

ರಾಜ್ಯ

error: Content is protected !!