Thursday, September 12, 2024

ಮುರುಗೇಶ ನಿರಾಣಿ ಅವರಿಗೆ ಸಾಧನೆಗೆ ಗೌರವ ಡಾಕ್ಟರೇಟ್ ಗೌರವ

ಸುದ್ದಿ ಸದ್ದು ಚನ್ನಮ್ಮನ ಕಿತ್ತೂರು

ಮಹಾರಾಷ್ಟ್ರದ ಕರಾಡದ ಕೃಷ್ಣಾ ಇನಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಡಿಮ್ಡ್ ವಿಶ್ವವಿದ್ಯಾಲಯ ವತಿಯಿಂದ ಕೈಗಾರಿಕಾ ಸಚಿವ ಮುರುಗೇಶ ನಿರಾಣಿಯವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರಧಾನ ಮಾಡಲಾಯಿತು.
ನಿರಾಣಿಯವರು ಕರ್ನಾಟಕ, ಮಹಾರಾಷ್ಟ್ರ ರಾಜ್ಯಗಳಲ್ಲಿ ಮಾಡಿದ ಕೈಗಾರಿಕಾ ಅಭಿವೃದ್ಧಿ, ಸಮಾಜಸೇವೆಯನ್ನು ಗುರ್ತಿಸಿ ಪ್ರತಿಷ್ಠಿತ ಡಾಕ್ಟರೇಟ್ ಗೌರವವನ್ನು ಪ್ರಧಾನ ಮಾಡಲಾಗಿದೆ.

ಗ್ರಾಮೀಣ ಪ್ರದೇಶದಿಂದ ಬಂದ ಅವರು ನಿಜವಾದ ಅರ್ಥದಲ್ಲಿ ಹಳ್ಳಿಯ ಪ್ರತಿಭೆಯಾಗಿದ್ದಾರೆ. ಅವರ ಕೊಡುಗೆ ಕೈಗಾರಿಕಾ ರಂಗಕ್ಕೆ ಅಪೂರ್ವವಾಗಿದೆ ಎಂದು ಮಹಾರಾಷ್ಟ್ರದ ವಿರೋಧ ಪಕ್ಷದ ನಾಯಕ ದೇವೇಂದ್ರ ಫಡ್ನವಿಸ್ ಹೇಳಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಚಿವ ಮುರಗೇಶ ನಿರಾಣಿ ಅವರು ಈ ಪುರಸ್ಕಾರದಿಂದ ನನ್ನ ಜವಾಬ್ದಾರಿ ಹೆಚ್ಚಾಗಿದೆ. ಮಹಾರಾಷ್ಟ್ರದಲ್ಲಿ ಸ್ಥಗಿತಗೊಂಡಿರುವ ಕೃಷಿ ಕೈಗಾರಿಕೆಗಳ ಪುನರಾರಂಭಕ್ಕೆ ಮಹಾರಾಷ್ಟ್ರದ ನಾಯಕರು ಆಮಂತ್ರಿಸಿದ್ದಾರೆ. ದೇಶದ ಯಾವುದೇ ಕಾರ್ಖಾನೆಗಳ ಬಾಗಿಲು ಮುಚ್ಚಬಾರದು ಎನ್ನುವುದು ನನ್ನ ಹಂಬಲ. ಕೃಷಿ, ನೀರಾವರಿ, ಕೈಗಾರಿಕೆಗಳು ಜಗತ್ತಿನ ಜೀವಾಳ. ಈ ಉದ್ದೇಶದಿಂದ ನಾನು ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಪ್ರಶಸ್ತಿ ಸ್ವಿಕರಿಸಿ ಮಾತನಾಡತ್ತಿರುವ ಸಚಿವ ನಿರಾಣಿ

ಈ ವೇಳೆ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಡಾ. ಭಾಗವತ್ ಕರಾಡ, ಬಿಜೆಪಿ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಚಂದ್ರಕಾಂತ ದಾದಾ ಪಾಟೀಲ, ವಿಶ್ವವಿದ್ಯಾಲಯ ಕುಲಪತಿ ಡಾ. ಸುರೇಶ ಭೋಸಲೆ, ಡಾ. ವೇದಪ್ರಕಾಶ ಮಿಶ್ರಾ, ಡಾ. ಪ್ರಮೀಳಾ ಶರ್ಮಾ, ಡಾ. ಎಂ.ವ್ಹಿ. ಘೋರ್ಪಡೆ, ಡಾ. ಆರ್.ಕೆ. ಗೋಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕುಟುಂಬದ ಸದಸ್ಯರು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾಗಿದ್ದು

ಸಿ. ಎಂ. ಅಭಿನಂದನೆ: ಸಚಿವ ಮುರುಗೇಶ ನಿರಾಣಿಯವರ ಸಾಧನೆಯನ್ನು ಗುರುತಿಸಿ ಮಹಾರಾಷ್ಟ್ರದ ವಿ.ವಿ. ಡಾಕ್ಟರೇಟ್ ಪ್ರಧಾನ ಮಾಡಿರುವುದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಪುಟದ  ಸಚಿವರು, ಶಾಸಕರು ಸೇರಿದಂತೆ ಇನ್ನೂ ಅನೇಕರು ಅಭಿನಂದಿಸಿದ್ದಾರೆ.

ಜಿಲ್ಲೆ

ರಾಜ್ಯ

error: Content is protected !!