Saturday, July 27, 2024

“ಪೊಲೀಸರಿಗೆ ಕೈತುಂಬ ಸಂಬಳ ಕೊಟ್ಟರೂ ಎಂಜಲು ಕಾಸು ತಿಂದು ಬದುಕುತ್ತಿದ್ದಾರೆ”: ಸಚಿವ ಅರಗ ಜ್ಞಾನೇಂದ್ರ

ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ತಮ್ಮ ನಿವಾಸದ ಕಚೇರಿಯಿಂದ ಚಿಕ್ಕಮಗಳೂರು ಜಿಲ್ಲೆಯ ಪೊಲೀಸ್​ ಅಧಿಕಾರಿಗೆ ಕರೆ ಮಾಡಿದ ಸಚಿವ ಆರಗ ಜ್ಞಾನೇಂದ್ರ, ಯೋಗ್ಯತೆ ಇಲ್ಲ ಅಂದಮೇಲೆ ಸಮವಸ್ತ್ರ ಬಿಚ್ಚಿಟ್ಟು ಮನೆ ಕಡೆ ಹೋಗಲಿ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಪೊಲೀಸರ ವರ್ತನೆ ವಿರುದ್ಧ ಕೆಂಡಾಮಂಡಲರಾದ ಗೃಹ ಸಚಿವ ಅರಗ ಜ್ಞಾನೇಂದ್ರ ಪೊಲೀಸ್​ ಅಧಿಕಾರಿಗೆ ಕರೆ ಮಾಡಿ ಹಿಗ್ಗಾ ಮುಗ್ಗಾ ಕ್ಲಾಸ್​ ತೆಗೆದುಕೊಂಡಿದ್ದಾರೆ. ಪ್ರತಿನಿತ್ಯ ಮನೆಯ ಕೊಟ್ಟಿಗೆಯಿಂದ ತಲವಾರು ತೋರಿಸಿ ದನ ಕರಗಳನ್ನು ಕೊಂಡು ಹೋಗುತ್ತಿದ್ದಾರೆ, ಈ ಮಾಹಿತಿ ಪೋಲಿಸರಿಗೆ ಗೊತ್ತಿದ್ದು ಸುಮ್ಮನಾಗಿದ್ದಾರೆ ಇದರ ಕೇಸ್ ಸ್ಟಡಿ ಮಾಡಿ ನನಗೆ ಹೇಳಬೇಕು.

ಯಾವ ಕಾರಣಕ್ಕೆ ಗೋಕಳ್ಳರನ್ನು ಬಿಡುಗಡೆ ಮಾಡಿದರೂ ಎಂದು ನನಗೆ ಹೇಳಬೇಕು.ಸರ್ಕಲ್ ಇನ್ಸ್‌ಪೆಕ್ಟರ್ ನಿಮಗೆ ಮಿಸ್‌ಗೈಡ್ ಮಾಡಿದ್ದರೆ. ನಾಳೆಯಿಂದ ಒಂದು ವಾಹನ ಕೂಡಾ ಮೂವ್ ಆಗಬಾರದು ಎಂದು ಅಸಮಾಧಾನ ಹೊರಹಾಕಿದ್ದಾರೆ.

ಪಕ್ಷದ ಕಾರ್ಯಕರ್ತರ ಎದುರಲ್ಲೇ ಪೊಲೀಸ್​ ಅಧಿಕಾರಿಗೆ ಕರೆ ಮಾಡಿ, ಪೊಲೀಸರಿಗೆ ಕೈತುಂಬ ಸಂಬಳ ಕೊಡುತ್ತಿದ್ದೇವೆ, ಯಾವನಿಗೂ ಸಂಬಳದಲ್ಲಿ ಬದುಕಬೇಕೆಂದು ಇಲ್ಲ. ಎಲ್ಲರೂ ಎಂಜಲು ಕಾಸು ತಿಂದು ಬದುಕುತ್ತಿದ್ದಾರೆ.

ಯೋಗ್ಯತೆ ಇಲ್ಲದೇ ಇದ್ರೆ ಯೂನಿಫಾರ್ಮ್ ಬಿಚ್ಚಿಟ್ಟು ಹೋಗಲಿ ಎಂದು ಗೃಹಸಚಿವ ಅರಗ ಜ್ಞಾನೇಂದ್ರ ಆಕ್ರೋಶ ಹೊರಹಾಕಿದ್ದಾರೆ. ಹೊಸ ಕಾನೂನು ಮಾಡಿ ಸರ್ಕಾರ ನಿಮ್ಮ ಕೈಗೆ ಕೊಟ್ಟಿದೆ. ನೀವು ಕೆಲಸ ಮಾಡಲ್ಲ ಅಂದ್ರೆ ನಾವು ಯಾಕೆ ಕಾನೂನು ತರಬೇಕು? ನಿಮ್ಮ ಪೊಲೀಸರು ಲಂಚ ತಿಂದುಕೊಂಡು ಬಿದ್ದಿದ್ದಾರೆ.

ಪೊಲೀಸರಿಗೆ ಆತ್ಮಗೌರವ ಬೇಡ್ವಾ? ಕೆಟ್ಟು ಹಾಳಾಗಿ ಹೋಗಿದ್ದಾರೆ ಪೊಲೀಸರು ಎಂದು ಗೃಹ ಸಚಿವ ಅರಗಜ್ಞಾನೇಂದ್ರ ಫೋನ್‌ನಲ್ಲಿ ಮಾತನಾಡುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಕುರಿತಾಗಿ ಹಲವು ಚರ್ಚೆಗಳು ನಡೆಯುತ್ತಿವೆ.

ಜಿಲ್ಲೆ

ರಾಜ್ಯ

error: Content is protected !!