Tuesday, May 28, 2024

ಹೆಕ್ಟೇರಿಗೆ ರೂ.50 ಸಾವಿರ ಪರಿಹಾರ ನೀಡುವಂತೆ ಕರ್ನಾಟಕ ರಾಜ್ಯ ರೈತ ಸಂಘ ಬೈಲಹೊಂಗಲ ಎ.ಸಿ ಮೂಲಕ ಸಿ.ಎಂ.ಗೆ ಮನವಿ

ಬೈಲಹೊಂಗಲ(ಡಿ.04): ರಾಜ್ಯದಲ್ಲಿ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿಯಾದ ಭಾರಿ ಮಳೆಗೆ ಬೆಳೆ ಹಾನಿಯಾಗಿದ್ದರಿಂದ ಪ್ರತಿಯೊಬ್ಬ ರೈತರಿಗೆ ಯಾವುದೇ ಅರ್ಜಿ ತೆಗೆದುಕೊಳ್ಳದೆ ಪ್ರತಿ ಹೆಕ್ಟೇರಿಗೆ ರೂ.50 ಸಾವಿರ ಪರಿಹಾರ ನೀಡುವಂತೆ ಕರ್ನಾಟಕ ರಾಜ್ಯ ರೈತ ಸಂಘ ಬೈಲಹೊಂಗಲ ಉಪವಿಭಾಗಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಕರ್ನಾಟಕ ರಾಜ್ಯ ಕಂಡ ಅತ್ಯಂತ ಸರಳತೆಯ ಮುಖ್ಯಮಂತ್ರಿಗಳ ಸಾಲಿನಲ್ಲಿ ತಾವೂ ಒಬ್ಬರು ಎನ್ನುವುದಕ್ಕೆ ರೈತ ಸಮುದಾಯವೇ ಹರ್ಷ ವ್ಯಕ್ತಪಡಿಸುತ್ತಿದೆ ಏಕೆಂದರೆ ತಾವು ಅಧಿಕಾರ
ವಹಿಸಿದ ಕೂಡಲೆ ರೈತರ ಮಕ್ಕಳಿಗೆ ಶಿಷ್ಯವೇತನ ನೀಡುವ ಮೂಲಕ ಮಹತ್ತರ ಬದಲಾವಣೆಗೆ ಬುನಾದಿ ಹಾಕಿದ್ದೀರಿ.

ಆದರೆ ಈ ವರ್ಷವೂ ಅತಿಯಾದ ಮಳೆಯಿಂದ ರಾಜ್ಯದ ರೈತರು ಕಂಗಾಲಾಗಿದ್ದು ಅವರ ಜೀವನಕ್ಕೆ ರಾಜ್ಯ ಸರ್ಕಾರ ಆಸರೆಯಾಗಬೇಕಾಗಿದೆ. ಮುಂಗಾರು ಬೆಳೆಯಲಿ ಅತಿಯಾದ ಮಳೆ ಒಂದು ಕಡೆಯಾದರೆ ಹಿಂಗಾರು ಬಿತ್ತನೆ ನಂತರ ಬಿದ್ದ ಅಕಾಲಿಕ ಮಳೆಯಿಂದ ಕಡಲೆ, ಕುಸುಬೆ, ಜೋಳ, ಗೋದಿ ಹೀಗೆ ಎಲ್ಲ ಬೆಳೆಗಳು ನೆಲಕಚ್ಚಿವೆ ಇನ್ನು ಕಬ್ಬು ಬೆಳೆದ ಬೆಳೆಗಾರ ಕಾರ್ಖಾನೆಗಳಿಗೆ ಕಬ್ಬು ಕಳಿಸಲಾಗಿದೆ ಪರಿತಪಿಸುವಂತಾಗಿದೆ.

ರೈತ ಸಂಘದ ಸದಸ್ಯರು ಮನವಿ ಸಲ್ಲಿಸುತ್ತಿರುವುದು.

ಆದ್ದರಿಂದ ರಾಜ್ಯ ಸರ್ಕಾರ ಬೆಳೆಗಳ ಮೇಲೆ ರೈತರನ್ನು ವಿಂಗಡಿಸದೆ ಎಲ್ಲಾ ರೈತರಿಗೂ ಪ್ರತಿ ಹೆಕ್ಟೇರ್ ಜಮೀನಿಗೆ ಕನಿಷ್ಠ 50 ಸಾವಿರ ರೂಪಾಯಿ ಪರಿಹಾರ ನೀಡಬೇಕು. ಅಲ್ಲದೆ ಪರಿಹಾರಕ್ಕಾಗಿ ರೈತರ ಕಡೆಯಿಂದ ಅರ್ಜಿ ತೆಗೆದುಕೊಳ್ಳುವುದು ಅರ್ಜಿಗೆ ಪಹಣಿ ಪತ್ರಿಕೆ ಬ್ಯಾಂಕ್ ಪಾಸ್ ಬುಕ್ ಆಧಾರ್ ಕಾರ್ಡ್ ಫೋಟೋ ಲಗಿತಿಸುವಂತೆ ಗ್ರಾಮ ಲೆಕ್ಕಾಧಿಕಾರಿಗಳು ತಿಳಿಸುತ್ತಿದ್ದಾರೆ. ಇದರಿಂದ ರೈತರು ಸುಖಾಸುಮ್ಮನೆ ಅಲೆದಾಡುವಂತಾಗಿದೆ.

ವಾಸ್ತವಿಕವಾಗಿ ಪ್ರತಿಯೊಬ್ಬ ರೈತರು ಪಹಣಿ ಪತ್ರಿಕೆಗಳಿಗೆ ಆಧಾರ್ ಕಾರ್ಡ್ ಜೋಡಣೆ ಯಾಗಿದ್ದು ಅಲ್ಲದೆ ಬ್ಯಾಂಕ್ ಪಾಸ್ ಬುಕ್ ಸಹಿತ ಜೋಡಣೆಯಲ್ಲಿದ್ದು, ಪ್ರತಿಯೊಬ್ಬ ರೈತರ ಸಂಖ್ಯೆಗಳು ಬಂದಿದ್ದು ಅಲ್ಲದೆ ತೆರಿಗೆ ರಹಿತ ಸರಕಾರಿ ನೌಕರರಲ್ಲದ ರೈತರಿಗೆ ನೇರವಾಗಿ ಕಿಸಾನ್ ಸಮ್ಮಾನ್ ಹಣ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಜಮೆ ಆಗುತ್ತಿದ್ದು, ಇಂತಹ ಸಂದರ್ಭದಲ್ಲಿ ರೈತರಿಂದ ಮತ್ತೊಮ್ಮೆ ದಾಖಲೆಗಳನ್ನು ತೆಗೆದುಕೊಳ್ಳುವುದು ಕಾಗದರಹಿತ ಆಡಳಿತಕ್ಕೆ ಕಪ್ಪುಚುಕ್ಕಿ ಯಾದಂತೆ ಆಗುತ್ತದೆ. ಆದ್ದರಿಂದ ತಕ್ಷಣ ಈ ವ್ಯವಸ್ಥೆಯನ್ನು ರದ್ದುಗೊಳಿಸಿ ಬೆಳಗಾವಿ ಜಿಲ್ಲೆಯಾದ್ಯಂತ ಭಾರಿ ಮಳೆಗೆ ಹಾನಿಯಾದ ಎಲ್ಲ ರೈತರ ಖಾತೆಗಳಿಗೆ ಪರಿಹಾರ ಹಣ ಜಮೆ ಮಾಡಬೇಕು.

ಸರಕಾರ ರೈತರ ಅಲೆದಾಟ ಹಾಗೂ ಅನಾವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕಬೇಕೆಂದು ಸಮಸ್ತ ರೈತರ ಪರವಾಗಿ ಕರ್ನಾಟಕ ರಾಜ್ಯ ರೈತ ಸಂಘದ ಸದಸ್ಯರು ಬೈಲಹೊಂಗಲ ಉಪವಿಭಾಗಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ.ಮತ್ತು ಈ ಬಗ್ಗೆ ಮಾನ್ಯ ಕೃಷಿ ಸಚಿವರಿಗೆ ಹಾಗೂ ಕೃಷಿ, ಕಂದಾಯ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಜಿಲ್ಲೆಯ ಪ್ರತಿಯೊಬ್ಬ ರೈತರಿಗೆ ತಕ್ಷಣ ಪರಿಹಾರ ಹಣ ನೀಡಬೇಕೆಂದು ಆಗ್ರಹಿಸಿದ್ದಾರೆ

ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಕಮತ,ಬೆಳಗಾವಿ ಜಿಲ್ಲಾ ಅಧ್ಯಕ್ಷ ಗೋಪಾಲ ಮರಬಸಪ್ಪನವರ, ಪದಾಧಿಕಾರಿಗಳಾದ ಮಹಾಂತೇಶ ವಿವೇಕಿ, ಎಫ್ ಎಸ್ ಸಿದ್ದನಗೌಡರ, ಸುರೇಶ ಹೊಳಿ,ಮಹಾದೇವ ಕಲಭಾಂವಿ ,ಸಂಜು ಹಾವಣ್ಣವರ, ಮಡಿವಾಳಪ್ಪ ಹೊಳಿ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.

 

ಜಿಲ್ಲೆ

ರಾಜ್ಯ

error: Content is protected !!