Wednesday, July 24, 2024

ಡಿಸೆಂಬರ 4 ಕಿತ್ತೂರ ವಿಜಯೋತ್ಸವದ ರೂವಾರಿ ಗುರಿಕಾರ‌ ಅಮಟೂರ ಬಾಳಪ್ಪನವರ ಹುತಾತ್ಮ ದಿವಸ

ಸುದ್ದಿ ಸದ್ದು ನ್ಯೂಸ್

1824 ಅಕ್ಟೋಬರ್ 23 ರಂದು ಸೂರ್ಯ ಮುಳಗದ ಸಾಮ್ರಾಜ್ಯ ಕಿತ್ತೂರ ರಾಣಿ ಚನ್ನಮ್ಮನವರ ನೇತ್ರತ್ವದಲ್ಲಿ ಅಸ್ತಂಗತವಾಗುವಂತೆ ಮಾಡಿ ಜಗತ್ತಿನ ಇತಿಹಾಸದಲ್ಲಿ ಬ್ರಿಟಿಷ್‌‌ರನ್ನು ಓರ್ವ ಮಹಿಳೆಯ ನೇತ್ರತ್ವದಲ್ಲಿ ಸೆದೆಬಡಿದಿರುವುದು ಜಗತ್ತಿನ ಮೊದಲ ಇತಿಹಾಸ.

ಈ ದಿಗ್ವಿಜಯದ ಹಿಂದೆ ರಾಣಿ ಚನ್ನಮ್ಮಾಜೀಯವರ ಪ್ರೇರಣೆಯಿಂದ ಅಸಂಖ್ಯಾತ ವೀರ ಯೋಧರ ತ್ಯಾಗ ಬಲಿದಾನದ ಕಥೆ ಇದೆ. ಇವೇಲ್ಲ ವೀರಯೋದರ ಸಾಲಿನಲ್ಲಿ ಮೇಲುಪಂಕ್ತಿಯಲ್ಲಿ ನಿಲ್ಲುವ ಚನ್ನಮ್ಮಾಜಿಯವರ ಅಂಗರಕ್ಷಕ ಅಮಟೂರ ಬಾಳಪ್ಪನವರು.

ಅಮಟೂರ ಬಾಳಪ್ಪನವರು‌ ಇವತ್ತಿನ ಬೈಲಹೊಂಗಲ ತಾಲೂಕಿನ ಅಮಟೂರ ಗ್ರಾಮದವರು. ಇವರು ದೊರೆ ಮಲ್ಲಸರ್ಜನ_ಅಂಗರಕ್ಷಕನಾಗಿ ಕಾರ್ಯನಿರ್ವಾಹಿಸಿ ನಂತರ ಚನ್ನಮ್ಮಾಜೀಯ ಅಂಗ ರಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದ 1824 ಅಕ್ಟೋಬರ್‌ 23 ರಂದು ಜಾನ್ ಥ್ಯಾಕರೆ ಕಿತ್ತೂರು ಕೋಟೆಯ ದ್ವಾರದ ಕಾವಲು ಸಿಬ್ಬಂದಿಯನ್ನು ಬದಲಾವಣೆ ಮಾಡಲು ಆದೇಶಿಸಿದಾಗ ಕಿತ್ತೂರು ಸೈನ್ಯ ನಿರಾಕರಿಸಿತು.ಆಗ ಥ್ಯಾಕರೆ ತನ್ನ ಪಿರಂಗಿದಳದ ಮುಖ್ಯಸ್ಥರಾದ ಕ್ಯಾಪ್ಟನ ಬ್ಲಾಕ್, ಕ್ಯಾಪ್ಟನ್ ಸಿವೆಲ್ ಇವರಿಗೆ ಆದೇಶಿಸಿದ..ಆಗ ಥ್ಯಾಕರೆ ರಾಣಿ ಚನ್ನಮ್ಮಾಜಿಯತ್ತ ದೃಷ್ಟಿಹರಿಸಿ ಚನ್ನಮ್ಮಾಜೀಯ ಮೆಲೆ ಬಂದೂಕು ಎತ್ತುವುದನ್ನು ಗಮನಿಸಿದ ಅಮಟೂರ ಬಾಳಪ್ಪ ಥ್ಯಾಕರೆಯನ್ನು ತನ್ನ ಬಂದೂಕಿನಿಂದ ಹೊಡೆದುರುಳಿಸಿದ.

ಜಗತ್ತಿನ ಇತಿಹಾಸದಲ್ಲಿ ಬ್ರಿಟಿಷ್_ಸರಕಾರದ ಜಿಲ್ಲಾಧಿಕಾರಿ ಹಂತದ ಅಧಿಕಾರಿಯ ಪ್ರಾಣ ಹರಣ ಮಾಡಿರುವುದು ಕಿತ್ತೂರು ಸಂಸ್ಥಾನದ ಅಮಟೂರ ಬಾಳಪ್ಪ ಎಂಬ ಶೂರನಿಂದ. ಅಂದಿನ ಧಾರವಾಡ ಜಿಲ್ಲಾದಿಕಾರಿ ಎಂದರೆ ಇಂದಿನ ಧಾರವಾಡ ಗದಗ ಹಾವೇರಿ ಬೆಳಗಾವಿ ಬಿಜಾಪುರ ಬಾಗಲಕೋಟ ಉತ್ತರ ಕನ್ನಡ ಕಾರವಾರ ಮತ್ತ ಸಿರ್ಸಿ ಜಿಲ್ಲೆಯನ್ನೂಳಗೂಂಡ ಜಿಲ್ಲೆಯ ಪ್ರಥಮ ಅಧಿಕಾರಿ. ಈ ಅಧಿಕಾರಿಯ ಪ್ರಾಣ ಹರಣ ಮಾಡಿದ ಕಾರಣ ಕಿತ್ತೂರು ಉತ್ಸವ ಆಚರಣೆ, ಕಿತ್ತೂರ ಬಂಡಾಯದ ಇತಿಹಾಸ ಇತಿಹಾಸದಲ್ಲಿ ಅಜರಾಮರ ಸ್ಥಾನ ಪಡೆದಿದೆ. ನಂತರ ಅಮಟೂರ ಬಾಳಪ್ಪನವರಂತೆ ಸಂಗೂಳ್ಳಿ ರಾಯಣ್ಣ, ಬಿಚ್ಚುಗತ್ತಿ ಚನ್ನಬಸಪ್ಪ, ಗಂಟೆ ಭರಮಣ್ಣ, ಸರದಾರ ಗುರುಸಿದ್ದಪ್ಪ ಸೇರಿದಂತೆ ಇತರರು ಈ ಶೌರ್ಯ ಇತಿಹಾಸ‌ ಮುಂದುವರೆಸುವರು.

ಆದರೆ ಎಲ್ಲ ಬೆಳವಣಿಗೆಗೆ ಕಾರಣಿಭೂತರಾದ ಅಮಟೂರ ಬಾಳಪ್ಪನವರಿಗೆ ಇತಿಹಾಸದಲ್ಲಿ ಮತ್ತು ವರ್ತಮಾನ ದಿನಗಳಲ್ಲಿ ಗೌರವ ಸಿಗದೇ ಇರುವ ಕಾರಣ ಇತಿಹಾಸ ಪ್ರಿಯರು, ಈ ಭಾಗದ ಯುವ ಜನಾಂಗ ಇದರ ಕುರಿತು ಅಸಮಾಧಾನ ಹೊಂದಿದೆ.

ಕಾರಣ ಅಮಟೂರ ಬಾಳಪ್ಪನವರ ಹೆಸರು ಮತ್ತು ಜಗತ್ತಿನ ಇತಿಹಾಸದಲ್ಲಿ ಜಿಲ್ಲಾದಿಕಾರಿ ಹಂತದ ಬ್ರಿಟಿಷ್ ಅದಿಕಾರಿಯನ್ನು ಹೋಡೆದುರುಳಿಸಿದ ದೇಶದ ಮೊದಲ ಶೂರ ಸೈನಿಕ ಎಂಬವುದನ್ನು ಇತಿಹಾಸದಲ್ಲಿ ದಾಖಲಿಸಿ ಜನರ ಮನದ ರಾಷ್ಟ್ರದ ಭಕ್ತಿಯನ್ನ ಗೌರವಿಸಬೇಕು.

ವೀರಯೋಧ ಅಮಟೂರ ಬಾಳಪ್ಪನವರ ಪ್ರತಿಮೆ

1824 ನವೆಂಬರ 30 ರಿಂದ ಡಿಸೆಂಬರ 5 ರವರೆಗೆ ನಡೆದ ಎರಡನೆಯ ಯುದ್ದದಲ್ಲಿ ಬ್ರಿಟಿಷ ಅಧಿಕಾರಿ ಮತ್ತು ಮುಂಬೈ ಪ್ರಾಂತ್ಯದ ಕಮೀಷನರ್ ಚಾಪ್ಲಿನ್ ನಿಂದ 1824 ಡಿಸೆಂಬರ 4 ರಂದು ಹತನಾದ ವೀರಯೋಧ ಅಮಟೂರ ಬಾಳಪ್ಪ.

ಅಮಟೂರ ಬಾಳಪ್ಪನವರ ಪ್ರಾಮಾಣಿಕ ಶೌರ್ಯ, ಸಾಹಸ,ನೈಜ ದೇಶಭಕ್ತಿ ನಮಗೆಲ್ಲ ಆದರ್ಶವಾಗಿರಲಿ .ಅವರ ಸ್ಮರಣೆಗಾಗಿ ಈ ಅಕ್ಷರ ನುಡಿನಮನಗಳು.

 

ಲೇಖನ: ಮಹೇಶ.ನೀ.ಚನ್ನಂಗಿ ಕೆಇಎಸ್.          ಮುಖ್ಯ ಶಿಕ್ಷಕರು. ಚನ್ನಮ್ಮನ ಕಿತ್ತೂರ.              ಮೋಬೈಲ್ ನಂ: 9740313820

ಜಿಲ್ಲೆ

ರಾಜ್ಯ

error: Content is protected !!