Saturday, July 27, 2024

ಪಾಠ ಮಾಡೋ ಪೋಲಿ ಶಿಕ್ಷಕನ ‘ಕಿಸ್​’ ಪುರಾಣ ಬಯಲು

ಹಾವೇರಿ, (ಡಿ.01): ಇಲ್ಲೊಬ್ಬ ಶಿಕ್ಷಕ ಪಾಠ ಮಾಡು ಅಂದ್ರೆ ಇಲ್ಲ ನನಗೆ ಮೊದಲು ಕಿಸ್ ಕೊಡು ಎಂದು ವಿದ್ಯಾರ್ಥಿನಿಗೆ ಪೀಡುಸುತ್ತಿರುವುದು ಬೆಳಕಿಗೆ ಬಂದಿದೆ.

ಹೌದು.. ‘ಮುತ್ತು ಕೊಡು, ಪ್ಲೀಸ್​ ಕಿಸ್​ ಮಾಡೇ..’ ಎಂದು ಪ್ರೌಢ ಶಾಲೆ  ಶಿಕ್ಷಕ ವಿದ್ಯಾರ್ಥಿನಿಗೆ ಪೀಡಿಸುತ್ತಾ ಮೊಬೈಲ್​ಗೆ ಕಳುಹಿಸಿದ್ದ ಅಶ್ಲೀಲ ಮೆಸೇಜ್​ಗಳು ವೈರಲ್​ ಆಗಿವೆ.

 ‘ಮುತ್ತು ಕೊಡು, ಪ್ಲೀಸ್​ ಕಿಸ್​ ಮಾಡೇ..’ ಎಂದು ವಿದ್ಯಾರ್ಥಿನಿಗೆ ಪೀಡಿಸುತ್ತಾ ಮೊಬೈಲ್​ಗೆ ಕಳುಹಿಸಿದ್ದ ವಾಟ್ಸಪ್‌ ಅಶ್ಲೀಲ ಮೆಸೇಜ್​ಗಳು ವೈರಲ್​ ಆಗಿವೆ. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡ ಗ್ರಾಮದಲ್ಲಿರುವ ಶಾಲಾ ಶಿಕ್ಷಕನ ವಿರುದ್ಧ ಈ ಗಂಭೀರ ಆರೋಪವೊಂದು ಕೇಳಿ ಬಂದಿದೆ.  

ಪ್ರತಿನಿತ್ಯ ವಿದ್ಯಾರ್ಥಿನಿಗೆ ಮಾತೆತ್ತಿದರೆ ಕಿಸ್ ಕೊಡು ಎಂದು ಸಂದೇಶ ಕಳುಹಿಸುತ್ತಿದ್ದ ಪೋಲಿ ಶಿಕ್ಷಕನ ವಿರುದ್ಧ ಗ್ರಾಮಸ್ಥರು ಆಕ್ರೋಶ ಪ್ರತಿಭಟನೆ ನಡೆಸಿದ್ದು, ಆತನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ದೇವರಗುಡ್ಡದ ಹೈಸ್ಕೂಲ್​ನ ಶಿಕ್ಷಕ ಮಲ್ಲಪ್ಪ ತಳವಾರ ಎಂಬಾತ ಕಳೆದ ವರ್ಷ ಆನ್​ಲೈನ್​ ಕ್ಲಾಸ್​ ನೆಪದಲ್ಲಿ ವಿದ್ಯಾರ್ಥಿನಿಯ ಮೊಬೈಲ್​ ನಂಬರ್​ ಪಡೆದಿದ್ದ. ಆನ್​ಲೈನ್​ ಪಾಠ ಮಾಡುವ ನೆಪದಲ್ಲಿ ಪ್ರತಿನಿತ್ಯ ಚಾಟ್ ಮಾಡುತ್ತಿದ್ದ ಶಿಕ್ಷಕ, ಮಾತೆತ್ತಿದರೆ ಕಿಸ್ ಕೊಡು ಎಂದು ಪೀಡಿಸುತ್ತಿದ್ದ. ಈತ ಮಾಡಿರುವ ಚಾಟಿಂಗ್​ನ ಸ್ಕ್ರೀನ್ ಶಾರ್ಟ್​ಗಳು ಎಲ್ಲೆಡೆ ವೈರಲ್ ಆಗಿವೆ.

ವಿದ್ಯಾರ್ಥಿನಿ ಜತೆ ಅಸಭ್ಯವಾಗಿ ವರ್ತಿಸುತ್ತಿದ್ದ ಶಿಕ್ಷಕನ್ನು ಬಂಧಿಸಬೇಕು. ಕೆಲಸದಿಂದ ಅಮಾನತು ಮಾಡಬೇಕು ಎಂದು ಆಗ್ರಹಿಸಿ ಬುಧವಾರ ಬೆಳಗ್ಗೆ ಗ್ರಾಮಸ್ಥರು ಶಾಲೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ, ಶಾಲೆಗೆ ಬೀಗ ಜಡಿದು ಆಕ್ರೋಶ ಹೊರ ಹಾಕಿದ್ದಾರೆ. ಈ ಬಗ್ಗೆ ರಾಣೇಬೆನ್ನೂರು ಗ್ರಾಮೀಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.

 

ಜಿಲ್ಲೆ

ರಾಜ್ಯ

error: Content is protected !!