Saturday, July 27, 2024

ನೇಗಿನಹಾಳ ಸರಾಯಿ ಅಂಗಡಿಯಲ್ಲಿ ಅಬಕಾರಿ ನಿಯಮಗಳ ಉಲ್ಲಂಘನೆ! ಅಧಿಕಾರಿಗಳು ಕಂಡು ಕಾಣದಂತೆ ಜಾಣ ಮೌನ

ಬೈಲಹೊಂಗಲ (ಡಿ.01): ತಾಲೂಕಿನ ನೇಗಿನಹಾಳ ಗ್ರಾಮದ ಸರಾಯಿ ಅಂಗಡಿಯಲ್ಲಿ ದಿನಾಲೂ ಒಂದಿಲ್ಲ ಒಂದು ರೀತಿ ಜಗಳ ಬಡಿದಾಟ ಸಾಮಾನ್ಯವಾಗಿ ಕಾಣಸಿಗುತ್ತವೆ.

ಹೌದು ಸುಮಾರು ಹತ್ತು ಸಾವಿರ ಜನಸಂಖ್ಯೆ ಹೊಂದಿದ ಗ್ರಾಮ ನೇಗಿನಹಾಳ.ಈ ಗ್ರಾಮದ ಆಸುಪಾಸು ಸುಮಾರು ಹತ್ತು ಸಾವಿರ ಜನಸಂಖ್ಯೆವುಳ್ಳ ಮರ‍್ನಾಲ್ಕು ಹಳ್ಳಿಗಳು ಬರುತ್ತವೆ.

ಈ ಗ್ರಾಮಗಳಲ್ಲಿಯ ಮದ್ಯಪ್ರಿಯರು ನೇಗಿನಹಾಳದ ಶ್ರಿದೇವಿ ಲಾಡ್ಜ್ ಹಾಗೂ ಬಾರ ಆಂಡ್ಯ ರೆಸ್ಟೋರೆಂಟ್(ಸಿ.ಎಲ್-7) ಮದ್ಯದಂಗಡಿಗೆ ಸರಾಯಿ ಕುಡಿಯಲು ಹೋಗುತ್ತಾರೆ. ಆದರೆ ವಿಪರ್ಯಾಸ ಏನೆಂದರೆ ಅಬಕಾರಿ ಇಲಾಖೆಯ ನಿಯಮಗಳನ್ನು ಅನುಸರಿಸದೆ ಸರಿಯಾದ ವ್ಯವಸ್ಥೆ ಇಲ್ಲದೆ ಅಂಗಡಿ ನಡೆಸುತ್ತಿದ್ದಾರೆ. ಇದರಿಂದ ನಿತ್ಯವೂ ಜಗಳ ಬಡಿದಾಟಗಳಾಗುತ್ತವೆ.

ಹೆಚ್ಚಿನ ದರಕ್ಕೆ ಮದ್ಯ ಮಾರಾಟ ಒಂದು ಕಡೆ ಆದರೆ ಇನ್ನೊಂದು ಕಡೆ ಅಲ್ಲಿಯ ಕೆಲ ಕುಡುಕರು ಐದು ಕೊಡು, ಹತ್ತು ಕೊಡು, ಇಪ್ಪತ್ತ್ ಕೊಡು ಇಲ್ಲಾ ನೈಂಟಿ ಕೊಡಿಸು ಕ್ವಾಟರ್ ಹೇಳು ಅಂತ ವಿಪರೀತ ಕಾಟ. ಕೊಡದಿದ್ದರೆ ಅವಾಚ್ಛ ಶಬ್ಧಗಳಿಂದ ನಿಂದನೆ ಗಲಾಟೆ ಜಗಳಗಳು ಆಗುತ್ತವೆ.ಇದರಿಂದ ಮರ್ಯಾದಸ್ತ ಮದ್ಯಪ್ರಿಯರಿಗೆ ಇರಿಸು-ಮುರಿಸು ಆಗುವುದಂತು ನಿಜ.

ಅಬಕಾರಿ ಇಲಾಖೆಯ ನಿಯಮಾನುಸಾರ ಸಿ.ಎಲ್.7 ಮದ್ಯದಂಗಡಿಯಲ್ಲಿ ಒಳ್ಳೆಯ ನೀರು, ತಿಂಡಿ ತಿನಿಸು,ಊಟ ವಸತಿ ಶೌಚಾಲಯ ವ್ಯವಸ್ಥೆಯೊಂದಿಗೆ ಸುಸಂಸ್ಕೃತ ಪರಿಚಾರಕರು ಇರಬೇಕು. ಆದರೆ ಸರಾಯಿ ಬಿಟ್ರೆ ಇಲ್ಲಿ ಅವು ಯಾವವು ಸಿಗುವುದಿಲ್ಲ.

ಇನ್ನು ಸಾರ್ವಜನಿಕ ಶಾಂತಿ ಅಥವಾ ಯಾವುದೇ ಅಪರಾಧದ ಗಲಭೆ ಅಥವಾ ಅಸ್ತವ್ಯಸ್ತತೆಗೆ ಸಂಬಂ ಧಿಸಿದಂತೆ ವ್ಯಕ್ತಿಗಳಿಗೆ ಅಬಕಾರಿ ನಿಯಮಗಳ ಪ್ರಕಾರ ಮದ್ಯವನ್ನು ನೀಡಬಾರದು. ಆದರೂ ಅವರ ವ್ಯಾಪಾರದ ದೃಷ್ಠಿಯಿಂದ ಇಲ್ಲಿ ಅತಂಹ ವ್ಯಕ್ತಿಗಳಿಗೆ ಪರೋಕ್ಷವಾಗಿ ಸಹಕಾರ ನೀಡುತ್ತಾರೆ.ಹೀಗಾಗಿ ದಿನಾಲೂ ಒಂದಿಲ್ಲ ಒಂದು ರೀತಿ ಜಗಳ ಬಡಿದಾಟ ಸಾಮಾನ್ಯ.

ಇಂತಹ ಘಟನೆಗಳಿಗೆ ಬೇಸತ್ತು ಕೆಲವು ವರ್ಷಗಳ ಹಿಂದೆ ಅಲ್ಲಿನ ಮಹಿಳಾ ಸಂಘದವರು, ಹಿರಿಯರು ಸೇರಿದಂತೆ ಗ್ರಾಮಸ್ತರು ಅಂಗಡಿ ಮುಚ್ಚುವಂತೆ ಆಗ್ರಹಿಸಿ ಬೈಲಹೊಂಗಲದ ಅಬಕಾರಿ ಇಲಾಖೆಗೆ ಮನವಿ ಸಲ್ಲಿಸಿದ್ದರು.

ಮದ್ಯದಂಗಡಿಯವರು ಅಬಕಾರಿ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ ವ್ಯಾಪಾರದಲ್ಲಿ ತೊಡಗಿದ್ದರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಕಂಡು ಕಾಣದಂತೆ ಜಾಣ ಮೌನ ವಹಿಸಿ,ಪರೋಕ್ಷವಾಗಿ ನಿಯಮ ಉಲ್ಲಂಘನೆಗೆ ಸಹಕಾರ ನೀಡುತ್ತಿದ್ದಾರೆ.

ಜಿಲ್ಲೆ

ರಾಜ್ಯ

error: Content is protected !!