Thursday, September 19, 2024

ಮದುವೆಯಾಗುವುದಾಗಿ ನಂಬಿಸಿ ಕಾರಿನಲ್ಲಿ ಸೆಕ್ಸ್! ಕೆಲಸ ಮುಗಿದ ಮೇಲೆ ನಂಬರ್ ಬ್ಲಾಕ್

ಬೆಳಗಾವಿ (ನ.30)  ಮ್ಯಾಟ್ರಿಮೋನಿಯಲ್ ಪೋರ್ಟಲ್ ಮೂಲಕ ಪರಿಚಯವಾದ ಹುಡುಗಿಗೆ ವಂಚಿಸಿದ ಆರೋಪದ ಮೇಲೆ ಬಂಧಿತನಾದ 31 ವರ್ಷದ ವ್ಯಕ್ತಿಯನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಪರಿಚಯವಾದ ವ್ಯಕ್ತಿ ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ನಂತರ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಇದಾದ ನಂತರ ಮೊಬೈಲ್ ನನ್ನ ನಂಬರ್ ಬ್ಲಾಕ್ ಮಾಡಿದ್ದ ಎಂದು ಹುಡುಗಿ ಆರೋಪಿಸಿದ್ದಾಳೆ.

ಆರೋಪಿಯನ್ನು ಬೆಳಗಾವಿಯ ಕುಂಪಟಗಿರಿ ನಿವಾಸಿ ಪ್ರಶಾಂತ ಭಾವರಾವ್ ಪಾಟೀಲ್ ಎಂದು ಗುರುತಿಸಲಾಗಿದೆ. ಮ್ಯಾಟ್ರಿಮೋನಿಯಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸಂಪರ್ಕ ಸಾಧಿಸಿದ ನಂತರ ಅವನು ಈ ರೀತಿ ಅನೇಕ ಮಹಿಳೆಯರಿಗೆ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬರುತ್ತಿದೆ.  ಈ ಹಿಂದೆಯೇ ಈತನ ಬಂಧನ ಮಾಡಲಾಗಿತ್ತು. 2018 ರಲ್ಲಿ ಸಶಸ್ತ್ರ ಪಡೆಗಳಿಂದ ತಲೆ ತಪ್ಪಿಸಿಕೊಂಡು ಅಲೆಯುತ್ತಿದ್ದ ಎಂದು ಸಿನ್ಹಗಡ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ. 2018 ರಿಂದ ಈ ವರ್ಷದ ನವೆಂಬರ್ 20 ರವರೆಗೆ ಪುಣೆ, ಲಾತೂರ್ ಮತ್ತು ಅಹ್ಮದ್‌ನಗರದಲ್ಲಿ ಈತನ ಮೇಲೆ ಒಟ್ಟು ಐದು ಪ್ರಕರಣಗಳನ್ನು ದಾಖಲಿಸಲಾಗಿದೆ.

ತಾಣೊಬ್ಬ ಸೇನಾ ಅಧಿಕಾರಿ ಎಂದು ಆಸಾಮಿ ಯುವತಿಯ ಪರಿಚಯ ಮಾಡಿಕೊಂಡಿದ್ದಾನೆ.  ಅಲ್ಲಿಂದ ಮುಂದೆ ಇಬ್ಬರು ಭೇಟಿಯಾಗಿದ್ದು ಹುಡುಗಿಯನ್ನು ನಂಬಿಸಿ ಆಕೆ ಜತೆ ಲೈಂಗಿಕ ಸಂಪರ್ಕ ನಡೆಸಿದ್ದಾನೆ. ಇದಾದ ಮೇಲೆ ನಂಬರ್ ಬ್ಲಾಕ್ ಮಾಡಿದ್ದ ಎಂದು ಯುವತಿ ಆರೋಪಿಸಿದ್ದಾಳೆ.

ನವೆಂಬರ್ 18 ರಂದು ದಗ್ದುಶೇತ್ ಗಣಪತಿ ದೇವಸ್ಥಾನದಲ್ಲಿ ಹುಡುಗಿ ಮತ್ತು ಪಾಟೀಲ್ ಭೇಟಿಯಾಗಿದ್ದಾರೆ. ಈ ವೇಳೆ ಸೇನೆಯ ಸಮವಸ್ತ್ರದಲ್ಲಿ ಆಸಾಮಿ ಕಾಣಿಸಿಕೊಂಡಿದ್ದ. ಅಲ್ಲಿಂದ ಮಾತುಕತೆಗೆಂದು ಹತ್ತಿರದ ವಸತಿಗೃಹಕ್ಕೆ ಕರೆದುಕೊಂಡು ಹೋಗಿದ್ದಾನೆ. ಮದುವೆಯಾಗುವ ಭರವಸೆ ನೀಡಿದ್ದಾನೆ. ನಂತರ ಕಾರ್ ನಲ್ಲಿಯೇ ಒತ್ತಾಯಪೊರ್ವಕವಾಗಿ ನನ್ನ ಮೇಲೆ ಎರಗಿದ್ದಾನೆ ಎಂದು ಯುವತಿ ದೂರಿನಲ್ಲಿ ಹೇಳಿದ್ದಾಳೆ.

ಇದಾದ ನಂತರ ನಂಬರ್ ಬ್ಲಾಕ್ ಮಾಡಿದ್ದು ಸಂಪರ್ಕಕ್ಕೆ ಸಿಗದೆ ಓಡಾಡುತ್ತಿದ್ದ.  ಯುವಕ ತನಗೆ ಮೋಸ ಮಾಡಿದ್ದು ಅಜ್ಞಾತವಾಗಿದ್ದಾನೆ ಎಂಬುದನ್ನು ಅರಿತ ಯುವತಿ ದೂರು ದಾಖಲಿಸಿದ್ದಾಳೆ. 

ಜಿಲ್ಲೆ

ರಾಜ್ಯ

error: Content is protected !!