Saturday, July 27, 2024

ಮಗಳ ಗರ್ಭಿಣಿಗೆ ಕಾರಣವಾದವರನ್ನು ಹುಡುಕಿಕೊಡಿ! ದೂರಿಗೆ ಸುಸ್ತಾದ ಪೋಲೀಸರು

ಕೊಪ್ಪಳ (ನ.28): ಅಪ್ರಾಪ್ತೆ ಪುತ್ರಿ ಗರ್ಭಿಣಿಯಾಗಿದ್ದು ಇದಕ್ಕೆ ಕಾರಣವಾದವರನ್ನು ಹುಡುಕಿ ಕಾನೂನು ಅಡಿಯಲ್ಲಿ ಶಿಕ್ಷೆಗೆ ಗುರಿಪಡಿಸಿ ಎಂದು ಪಾಲಕರೊಬ್ಬರು ಇಲ್ಲಿನ ಪೊಲೀಸರಿಗೆ ವಿಚಿತ್ರ ದೂರನ್ನು ಕೊಟ್ಟಿದ್ದಾರೆ. ಈ ಪ್ರಕರಣದಿಂದ ಇದೀಗ ಕೊಪ್ಪಳ ಜಿಲ್ಲೆಯ ಕಾರಟಗಿ ಪೊಲೀಸರು ಇಕ್ಕಟ್ಟಿಗೆ ಸಿಲುಕಿದ್ದಾರೆ. 

ಪಟ್ಟಣದ ವಾರ್ಡ್ 22ರಲ್ಲಿ ವಾಸಿಸುವ ಪಾಲಕರೊಬ್ಬರು ತಮ್ಮ 17 ವರ್ಷದ ಬಾಲಕಿ ಕಾಲೇಜಿಗೆ ತೆರಳುತ್ತಿದ್ದಳು. ನ.23ರಂದು ದಿಢೀರ್ ಹೊಟ್ಟೆ ನೋವಿನಿಂದ ನರಳುತ್ತಿದ್ದ ಬಾಲಕಿಯನ್ನ ತಕ್ಷಣವೇ ಚಿಕಿತ್ಸೆಗಾಗಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಿಸಲಾಗಿತ್ತು. ಅಲ್ಲಿ ತಮ್ಮ ಮಗಳು 7 ತಿಂಗಳ ಗರ್ಭಿಣಿಯೆಂದು ಬೆಳಕಿಗೆ ಬಂದಿದೆ. ನಂತರ ನ.25ರ ಮಧ್ಯಾಹ್ನ ಬಾಲಕಿಗೆ ಹೆರಿಗೆಯಾಗಿ ಹೆಣ್ಣು ಮಗು ಜನನವಾಗಿ ಮೃತಪಟ್ಟಿದೆ.  

ಇಡೀ ಘಟನೆಯಿಂದ ಕಂಗಾಲದ ಅಪ್ರಾಪ್ತೆಯ ಪಾಲಕರು ಗರ್ಭಕ್ಕೆ ಕಾರಣ ಕೇಳಿದರೆ, ಆಕೆ ಮೌನಕ್ಕೆ ಶರಣಾಗಿದ್ದಾಳೆ. ಇದರಿಂದ ಪಾಲಕರು ದಿಕ್ಕು ತೋಚದೆ ಇಲ್ಲಿನ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ತಮ್ಮ ಅಪ್ರಾಪ್ತೆ ಬಾಲಕಿಯ ಗರ್ಭದಾರಣೆಗೆ ಕಾರಣವಾದವರನ್ನು ಪತ್ತೆ ಮಾಡಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಬಾಲಕಿಯ ತಂದೆ ಮತ್ತು ತಾಯಿ ನವೆಂಬರ್ 25 ರಂದು ದೂರು ನೀಡಿದ್ದರು.

ಈ ಸಂಬಂಧ ಕಾರಟಗಿ ಪೊಲೀಸರು ಫೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ಗರ್ಭಧಾರಣೆ ಮಾಡಿದವರ ಪತ್ತೆ ಹಚ್ಚುವ ಕಾರ್ಯ ಪಜೀತಿಗೀಡುಮಾಡಿತ್ತು.

ಆದರೂ ಆರೋಪಿಯನ್ನು ಪತ್ತೆ ಹಚ್ಚಿ ನವೆಂಬರ್ 27 ರಂದು ಬಂಧಿಸಿದ್ದಾರೆ.

ಜಿಲ್ಲೆ

ರಾಜ್ಯ

error: Content is protected !!