Tuesday, May 28, 2024

ಸಿಐಡಿ ತಂಡದಿಂದ ಗಾಂಜಾ ಮಾರಾಟಗಾರನ ಮೇಲೆ ದಾಳಿ

ಬೆಳಗಾವಿ (ನ.27) :ಜಿಲ್ಲೆಯ ರಾಯಬಾಗ ತಾಲ್ಲೂಕಿನ ಕಂಚಕರವಾಡಿ ಗ್ರಾಮದ ಜಮೀನೊಂದರ ಮನೆಯ ಮುಂದೆ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬರನ್ನು ಬಂಧಿಸಿ ಗಾಂಜಾ ಗಿಡಗಳನ್ನು ಪೋಲಿಸರು ವಶಪಡಿಸಿಕೊಂಡಿದ್ದಾರೆ.

ಕಂಚಕರವಾಡಿ ಗ್ರಾಮದ ಸಿದ್ರಾಮ ಮಾರುತಿ ತೋಳೆ ಬಂಧಿತ ಆರೋಪಿ.ಈತನಿಂದ ಸುಮಾರು ರೂ.1,46,250 ಕಿಮ್ಮತ್ತಿನ 9 ಕೆ‌.ಜಿ 750 ಗ್ರಾಂ ಹಸಿ ಗಾಂಜಾ ಗಿಡಗಳನ್ನು ಮತ್ತು ನಗದು ಹಣ ರೂ.130 ಜಪ್ತುಮಾಡಲಾಗಿದೆ.ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಖಚಿತ ಮಾಹಿತಿ ಮೇರೆಗೆ ಸಿಐಡಿ ಬೆಳಗಾವಿ ಘಟಕದ ಡಿಟೆಕ್ಟಿವ್ ಸಬ್ ಇನ್ಸ್‌ಪೆಕ್ಟರ್‌ ಲಕ್ಷ್ಮಣ ಹುಂಡರದ,ಎನ್‌ಡಿಸಿ, ಸಿಐಡಿ ಬೆಳಗಾವಿ ಘಟಕದ ಸಿಬ್ಬಂದಿಗಳಾದ ಜಗದೀಶ ಎಂ ಬಾಗನವರ, ಜಿ.ಆರ್.ಶಿರಸಂಗಿ, ಚಿದಂಬರ ಚಟ್ಟರಕಿ, ಜಾವೀದ ನಗಾರಿ ಮತ್ತು ರಾಯಬಾಗ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಬಾಳೇಶ ಶೆಟ್ಟೆಪ್ಪನವರ, ಎಸ್.ಎಸ್.ಚೌದ್ರಿ ಅವರನ್ನು ಒಳಗೊಂಡ ತಂಡ ದಾಳಿ ನಡೆಸಿದೆ.

 

 

ಜಿಲ್ಲೆ

ರಾಜ್ಯ

error: Content is protected !!