Friday, September 20, 2024

ಕರ್ತವ್ಯಲೋಪ ಶಿಕ್ಷಕ ಎಸ್. ಬಿ. ಹಲಸಗಿ ಅಮಾನತ್ತು: ಡಿಡಿಪಿಐ ಆದೇಶ

ಕಿತ್ತೂರು (ಅ.24) ತಾಲೂಕಿನ ಕಾದರವಳ್ಳಿ ಎಸ್. ವಿ. ಕೆ. ಸರಕಾರಿ ಪ್ರೌಢ ಶಾಲೆಯ ಆಂಗ್ಲ ಭಾಷಾ ಶಿಕ್ಷಕರಾದ ಎಸ್. ಬಿ. ಹಲಸಗಿ ಪದೇ ಪದೇ ಶಾಲೆಗೆ ಗೈರು ಹಾಜರಾಗುತ್ತಿರುವುದು ಮತ್ತು ಶೈಕ್ಷಣಿಕ ಚಟುವಟಿಕೆಗಳಲ್ಲಿ ನಿರಾಸಕ್ತಿ ತೋರಿದ ಹಿನ್ನೆಲೆಯಲ್ಲಿ  ಸೇವೆಯಿಂದ ಅಮಾನತ್ತುಗೊಳಿಸಿದ ಪ್ರಕರಣ ಬೆಳಕಿಗೆ ಬಂದಿದೆ.

ಎಸ್. ವಿ. ಕೆ. ಸರಕಾರಿ ಪ್ರೌಢ ಶಾಲೆ ಕಾದರವಳ್ಳಿ ಶಾಲೆಯ ಆಂಗ್ಲ ಭಾಷಾ ಶಿಕ್ಷಕರಾದ ಎಸ್. ಬಿ. ಹಲಸಗಿ ವಿದ್ಯಾರ್ಥಿಗಳಿಗೆ ಸರಿಯಾಗಿ ಪಾಠ ಭೋದನೆ ಮಾಡದೇ ಪದೇ ಪದೇ ಗೈರ ಹಾಜರಾಗುತ್ತ, ಹೊರಗಡೆ ಅಡ್ಡಾಡುತ್ತ, ಅನ್ಯ ವಿಷಯದ/ಸಾಹಿತ್ಯ ಪರಿಷತ್ ಪ್ರಚಾರ/ಶಿಕ್ಷಕರ ಸಂಘಟನೆ ಮುಂತಾದ ಕೆಲಸಗಳನ್ನು ಮಾಡುತ್ತ ಶಾಲೆಗೆ ಬಂದು ತರಗತಿ ಪಾಠ ಮಾಡುವಲ್ಲಿ ನಿಷ್ಕಾಳಜಿ ತೋರುತ್ತಿವುದನ್ನು ಶಾಲೆಯ ಮುಖ್ಯೋಪಾದ್ಯಾಯರಿಗೆ ವಿದ್ಯಾರ್ಥಿಗಳು ತಮ್ಮ ಅಳಲು ತೋಡಿಕೊಂಡಿದ್ದರು.

ಈ ವಿಷಯವನ್ನು ಮುಖ್ಯ ಶಿಕ್ಷಕರಿಗೆ ಯಾರೂ ಹೇಳಿದ್ದೀರಿ ಎಂದು ವಿದ್ಯಾರ್ಥಿಗಳಿಗೆ ಎಸ್. ಬಿ. ಹಲಸಗಿ ಪ್ರಶ್ನಿಸಿ ಆಣೆ ಮಾಡಿ ಹೇಳಿರಿ , ನಿಮ್ಮನ್ನು ಫೇಲ್ ಮಾಡುತ್ತೇನೆ, ಇಂಟರ್ನಲ್ ಅಂಕ ಕಡಿಮೆ ಹಾಕುತ್ತೇನೆ ಎಂದು ಬೆದರಿಕೆ ನೀಡಿ ಹಾಗೂ ಆಂಗ್ಲ ವಿಷಯ ಸರಿಯಾಗಿ ಬೋಧನೆ ಮಾಡುತ್ತಿದ್ದೇನೆಂದು ಮಕ್ಕಳಿಗೆ ತೀರ್ವವಾಗಿ ಹೆದರಿಸಿ ಬೆದರಿಸಿ ಮಾನಸಿಕ ಹಿಂಸೆ ಕಿರುಕುಳ ಕೊಟ್ಟಿದ್ದರು. 

ಪದೇ ಪದೇ ಹೊರಗಡೆ ಹೋಗುವುದು ಶೈಕ್ಷಣಿಕ ಕಾರ್ಯ ಚಟುವಟಿಕೆ ಮಾಡದೇ ಕರ್ತವ್ಯ ನಿರ್ಲಕ್ಷತೆ ಎಸಗುತ್ತಿರುವುದು ಮತ್ತು ಶಿಕ್ಷಕರಿಂದ ಆಗುತ್ತಿರುವ ಕಿರುಕುಳ/ ಮಾನಸಿಕ ಹಿಂಸೆ ಹಾಗೂ ಇಲಾಖೆ ನಿಗದಿ ಪಡಿಸಿದ ಪಾಠ ಭೋದನೆ ಆಗದೇ ಮಕ್ಕಳಲ್ಲಿ ಆತಂಕದ ವಾತಾವರಣ ಸೃಷ್ಟಿಸಿ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗುತ್ತಿರುವ ಬಗ್ಗೆ ಗ್ರಾಮದ ನಾಗರಿಕರು ಹಾಗೂ ಪಾಲಕ ಪೋಷಕರು,ವಿದ್ಯಾರ್ಥಿಗಳು ಕಿತ್ತೂರ
ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದರು.

ಇದರ ಬಗ್ಗೆ ಮುಖ್ಯ ಶಿಕ್ಷಕರು ಕಾರಣ ಕೇಳಿ ನೋಟಿಸ ನೀಡಿದ್ದರು. ಇದಕ್ಕೆ ಸರಿಯಾಗಿ ಉತ್ತರವನ್ನು ನೀಡದೇ ಮುಖ್ಯ ಶಿಕ್ಷಕರನ್ನೆ ಪ್ರಶ್ನಿಸುವ ರೀತಿಯಲ್ಲಿ ಉತ್ತರಿಸಿರುತ್ತಾರೆ. ಹಾಗೂ ನವೆಂಬರ್ 15 ರಂದು ವಿದ್ಯಾರ್ಥಿಗಳಿಂದ ವೈಯಕ್ತಿಕ ಮಾಹಿತಿಗಾಗಿ ಖಾಲಿ ಹಾಳೆಯಲ್ಲಿ ವಿದ್ಯಾರ್ಥಿಗಳ ಸಹಿ ಪಡೆದಿರುವುದು ಶಿಕ್ಷಕರ ನಡುವಳಿಕೆ ಸಂಶಯಾಸ್ಪದವಾಗಿದೆ.

ಈ ಕಾರ್ಯವೈಖರಿ ಕುರಿತು ವರದಿ ಸಲ್ಲಿಸಿದ ಹಿನ್ನೆಲೆಯಲ್ಲಿ ಕಿತ್ತೂರ ಕ್ಷೇತ್ರ ಶಿಕ್ಷಣಾಧಿಕಾರಿ ಶಿಫಾರಸ್ಸಿನಂತೆ ಸದರಿ ಶಿಕ್ಷಕರು ಸರಕಾರಿ ಸೇವೆಗೆ ವ್ಯತಿರಿಕ್ತವಾಗಿ ನಡೆದುಕೊಂಡು ಕರ್ನಾಟಕ ರಾಜ್ಯ ನಾಗರಿಕ ಸೇವಾ (ನಡತೆ) ನಿಯಮಗಳು, 2020 ರ ನಿಯಮ 3 ಹಾಗೂ ವಿದ್ಯಾರ್ಥಿಗಳಿಗೆ ಬೆದರಿಕೆ ನೀಡಿ ಮಾನಸಿಕ ಹಿಂಸೆ ನೀಡಿರುವ ಆಪಾದನೆ ಕುರಿತಂತೆ ಮಕ್ಕಳ ಹಕ್ಕು ಕಾಯಿದೆ 2009 ರ 4 ನಿಯಮ 17ನ್ನು ಮತ್ತು 24 (1)(ಎ)(ಬಿ), (ಸಿ).(ಡಿ) ಮತ್ತು (ಎಫ್) ರಂತೆ ಶಿಕ್ಷಕರ ಕರ್ತವ್ಯಗಳನ್ನು ನಿರ್ವಹಿಸದೇ ಉಲ್ಲಂಘಿಸಿರುವುದು ಸ್ಪಷ್ಟವಾಗಿ ಕಂಡು ಬಂದ ಪ್ರಯುಕ್ತ 1957ರ ಕರ್ನಾಟಕ ಸರಕಾರಿ ನೌಕರರ ಸೇವಾ ನಿಯಮಗಳ ನಿಯಮ 10ರನ್ವಯ ಇಲಾಖಾ ವಿಚಾರಣೆ ಬಾಕಿ ಇಟ್ಟು ಬೆಳಗಾವಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ನವೆಂಬರ್ 23 ರಂದು ಸೇವೆಯಿಂದ  ಅಮಾನತ್ತಿನಲ್ಲಿಟ್ಟು ಆದೇಶ ಹೊರಡಿಸಿದ್ದಾರೆ.

 

ಜಿಲ್ಲೆ

ರಾಜ್ಯ

error: Content is protected !!