Saturday, July 27, 2024

ಬೆಳಗಾವಿ ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆ: ಮಂಗಲಾ ಮೆಟಗುಡ್ ಗೆ ಒಲಿದ ಜಿಲ್ಲಾಧ್ಯಕ್ಷ ಗಾದಿ

ಸುದ್ದಿ ಸದ್ದು ನ್ಯೂಸ್

ಬೆಳಗಾವಿ:21: ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡಿದ್ದು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಮಂಗಲಾ ಮೆಟಗುಡ್ ಅವರಿಗೆ ಎರಡನೇ ಬಾರಿ ಅಧ್ಯಕ್ಷ ಗಾದಿ ಒಲಿದು ಬಂದಿದ್ದು ಮತದಾರರು ಮಂಗಲಾಗೆ ಜೈ ಅಂದಿದ್ದಾರೆ. 

ಬೆಳೆಗ್ಗೆ ಯಿಂದ ನಡೆದ ಮತದಾನದಲ್ಲಿ ಚಲಾವಣೆಯಾದ ಮತಗಳಲ್ಲಿ ಶೇ 80% ರಷ್ಟು ಮತಗಳನ್ನು ಪಡೆಯುವ ಮೂಲಕ ಮಂಗಲಾ ಮೆಟಗುಡ್ ಅವರು 4789 ಮತಗಳನ್ನು ಪಡೆದು ಜಯಭೇರಿ ಬಾರಿಸಿದ್ದಾರೆ. ಸಹ ಸ್ಪರ್ಧಿಗಳಾದ ಖಾನಪ್ಪನವರ 700 ಹಾಗೂ ರವೀಂದ್ರ ತೋಟಗೇರ 200 ಮತ ಪಡೆದಿದ್ದಾರೆ. 

ಒಟ್ಟಾರೆ ಮತದಾನ ನೀರಸವಾಗಿದ್ದು ಶೇ 45% ರಷ್ಟು ಮತದಾನವಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಎರಡನೇ ಬಾರಿ ಸ್ಪರ್ಧೆ ಮಾಡಿದ ಕಾರಣಕ್ಕೆ ಮಂಗಲಾ ಮೆಟಗುಡ್ ಅವರ ಬಗ್ಗೆ ಅಸಮಾಧಾನ ವ್ಯಕ್ತವಾಗಿತ್ತು ಆದಾಗ್ಯೂ ಮಂಗಲಾ ಮೆಟಗುಡ್ ಅವರು ಬಹುಮತ ಪಡೆಯುವ ಮೂಲಕ ಮತ್ತೊಮ್ಮೆ ಬೆಳಗಾವಿ ಜಿಲ್ಲಾ ಕಸಾಪ ಚುಕ್ಕಾಣಿಯನ್ನು ಹಿಡಿದಿದ್ದಾರೆ.

ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ 25 ಆಕಾಂಕ್ಷಿಗಳಲ್ಲಿ ರಾಜಶೇಖರ ಮುಲಾಲಿ, ಮಹೇಶ್ ಜೋಶಿ, ಹಾಗೂ ಸಿ.ಕೆ.ರಾಮೇಗೌಡ  ಮಧ್ಯೆ ನೇರಾನೇರ ಸ್ಪರ್ಧೆ ನಡೆದಿದ್ದು ಇದೇ 24 ರಂದು ಫಲಿತಾಂಶ ಹೊರಬೀಳಲಿದೆ.

ಯುವ ಉತ್ಸಾಹಿ ಭ್ರಷ್ಟಾಚಾರ ವಿರೋಧಿ ಸಂಘಟನೆ ಮೂಲಕ ಹೆಸರು ಮಾಡಿದ ರಾಜಶೇಖರ ಮುಲಾಲಿ ಅವರಿಗೆ ಜಿಲ್ಲೆಯಾದ್ಯಂತ ಹೆಚ್ಚಿನ ಮತಗಳು ಚಲಾವಣೆಯಾಗಿರುವ ಬಗ್ಗೆ ಚರ್ಚೆಯಾಗುತ್ತಿದೆ. ಮಹೇಶ ಜೋಶಿ ಅವರು ಕೂಡ ಜಿಲ್ಲೆಯಲ್ಲಿ ಹೆಚ್ಚು ಮತಗಳನ್ನು ಪಡೆಯುವ ನಿರೀಕ್ಷೆ ಇದ್ದು ಗೆಲುವಿನ ದಾರಿಯಲ್ಲಿ ಇಬ್ಬರೂ ಪ್ರತಿಸ್ಪರ್ಧಿಗಳಾಗಿದ್ದಾರೆ.

ಜಿಲ್ಲೆ

ರಾಜ್ಯ

error: Content is protected !!