Thursday, July 25, 2024

ಪ್ರಬುದ್ಧ ಕನ್ನಡ ಮನಸ್ಸುಗಳಿಗೆ ಮಲಾಲಿಗೆ ಮಾತು ಹಾಕಲು ಮನವಿ; ಬಸವರಾಜ ಚಿನಗುಡಿ

ಸುದ್ದಿ ಸದ್ದು ನ್ಯೂಸ್

ನಾಡಿನ ಪ್ರಬುದ್ದ ಕನ್ನಡ ಮನಸ್ಸುಗಳಿಗೆ ವಿನಮ್ರ ಮನವಿ.

ಕನ್ನಡದ ಬಗ್ಗೆ ಕಾಳಜಿ ಇರೋರು, ನಾಡು ನುಡಿಯ ಬಗ್ಗೆ ಕಕ್ಕುಲಾತಿ ಉಳ್ಳವರು, ಅಪ್ಪಟ ಕನ್ನಡದ ಬರವಣಿಗೆ, ಭಾಷಣಗಳನ್ನು ಮಾಡುತ್ತ ಸಾಹಿತಿಗಳು ಬರಹಗಾರರೇ ಅಭಿಮಾನದಿಂದ ಕನ್ನಡದ ಅಸ್ಮಿತೆಯನ್ನು ಪ್ರತಿಬಿಂಬಿಸುವ ಅಪರೂಪದ ಪ್ರಜ್ಞಾವಂತ ಓದುಗರನ್ನೋ ಪ್ರಬುದ್ದ ಬರಹಗಾರರನ್ನೋ ಸುದೀರ್ಘ ಇತಿಹಾಸ ಹೊಂದಿದ ಕನ್ನಡ ಸಾಹಿತ್ಯ ಪರಿಷತ್ತು ಅನ್ನೋ ಕನ್ನಡದ ಸ್ವಾಯತ್ತ ಸಂಸ್ಥೆಗೆ ಒಮ್ಮನಸ್ಸಿನಿಂದ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆ ಸ್ಥಾನಕ್ಕೆ ಅಲಂಕೃತರಾಗವಂತೆ ಅಭಿಮಾನದಿಂದ ಪ್ರೀತಿಯಿಂದ ವಿನಂತಿಸಿಕೊಳ್ಳುವ ಆ ದಿನಗಳು ಸದ್ಯ ಇಲ್ಲ. ಬಹುಶಃ ಮುಂದೆಯೂ ಆ ದಿನಗಳು ಬರಲಿಕ್ಕಿಲ್ಲ.

ಪರಿಷತ್ತು ಮತ್ತದರ ಅಧ್ಯಕ್ಷರಾದವರು ರಾಜಕೀಯದಿಂದ ತುಂಬ ದೂರ ಇದ್ದುಕೊಂಡು ಯಾವುದೇ ಪಕ್ಷದ ಸರ್ಕಾರವಿರಲಿ ಕನ್ನಡದ ಅಸ್ಮಿತೆಗೆ ಧಕ್ಕೆ ಉಂಟಾದಾಗ ಕೊರಳು ಪಟ್ಟಿ ಹಿಡಿದು ಪ್ರಶ್ನಿಸುವಂತ ದಕ್ಷ ಧೈರ್ಯಶಾಲಿ ನಿರ್ಬಿಢೆಯ ವ್ಯಕ್ತಿಯೊಬ್ಬರನ್ನು ಆ ಸ್ಥಾನಕ್ಕೆ ಕೂರಿಸಬೇಕಾಗಿರುವುದು ಇಂದಿನ ತುರ್ತುಗಳಲ್ಲಿ ಒಂದಾಗಿದೆ.

ಕಾಲಾಂತರದಲ್ಲಿ ನನ್ನ ಅಲ್ಪ ತಿಳುವಳಿಕೆ ಪ್ರಕಾರ ಪರಿಷತ್ತು ಕೂಡ ರಾಜಕೀಯದ ಒಳಸುಳಿಗೆ ಸಿಲುಕಿದ್ದು ದುರಂತದ ಸಂಗತಿ. ಮಠಗಳು ಸಂಘ ಸಂಸ್ಥೆಗಳು ಮುಂದಾಲೋಚನೆ ಇಟ್ಟುಕೊಂಡೇ ತಮ್ಮ ತಮ್ಮ ಸಂಸ್ಥೆಗಳ ಕಾರ್ಮಿಕರನ್ನು ಪರಿಷತ್ತಿಗೆ ಸದಸ್ಯರನ್ನಾಗಿ ಮಾಡಿದ್ದು ಆ ಸದಸ್ಯರು ಮಾಲೀಕರ ಮರ್ಜಿಯಲ್ಲಿರುವುದರಿಂದ ಅನಿವಾರ್ಯವಾಗಿ ಮಾಲೀಕರು ಅಥವಾ ಆ ಸಂಸ್ಥೆಯನ್ನು ಮುನ್ನಡೆಸುತ್ತಿರುವ ಮಠಾಧೀಶರ ನಿರ್ಣಯಕ್ಕೆ ಬದ್ದರಾಗುವ ಮೂಲಕ ಏಕವ್ಯಕ್ತಿತ್ವಕ್ಕೆ ಮತ ನೀಡುವ ಮೂಲಕ ಅವರಿಗೆ ಬೇಕಾದ ವ್ಯಕ್ತಿಯನ್ನು ಆ ಸ್ಥಾನದಲ್ಲಿ ಕೂರಿಸುತ್ತ ನಡೆದಿರುವುದು ತೆರೆದಿಟ್ಟ ಸತ್ಯ.

ಅಧ್ಯಕ್ಷರಾದವರು ಕೇವಲ ಪ್ರಚಾರದ ಸಲುವಾಗಿ ಸಾಹಿತ್ಯ ಸಮ್ಮೇಳನಗಳನ್ನು ವೈಯಕ್ತಿಕ ಪ್ರಚಾರಕ್ಕಾಗಿ ಅವರಿಗೆ ಬೇಕಾದ ನಾಯಕರ ಜೈ ಘೋಷಗಳಿಗಾಗಿ ವಿಜೃಂಭಣೆಯ ಜಾತ್ರೆಗಳಂತೆ ಸಮ್ಮೇಳನಗಳನ್ನು ನಡೆಸಿದ್ದು ನೋಡಿದೀವಿ.

ಪ್ರತಿಭಾವಂತ ಬರಹಗಾರರನ್ನು ಕವಿಗಳನ್ನು ಹುಡುಕಿ ಪ್ರೋತ್ಸಾಹಿಸದೇ ಚುನಾವಣೆಯಲ್ಲಿ ಜೈಕಾರ ಕೂಗಿರುವವರನ್ನೋ ಹಿಂಬಾಲಕರು ಸೂಚಿಸಿದವರನ್ನೋ ವೇದಿಕೆಗೆ ಆಹ್ವಾನಿಸಿ ಬಿಢೆ ತೀರಿಸುವ ಋಣಭಾರ ತೀರಿಸಿದ ಸಂದರ್ಭಗಳನ್ನು ಕಣ್ಣಾರೆ ಕಂಡಿರುವೆ.

ಇದು ತೆರೆದಿಟ್ಟ ಸತ್ಯ ಆದರೂ ಯಾರೊಬ್ಬರೂ ಈ ಬಗ್ಗೆ ಚಕಾರ ಎತ್ತಲಿಕ್ಕಿಲ್ಲ ಅವರಿಗೆಲ್ಲ ನಿರಾಸಕ್ತಿ ಭಯ. ನನಗೆ ಯಾರ ಹಂಗೂ ಇಲ್ಲ. ಆತ್ಮ ರತಿಗಾಗಿ ಬರವಣಿಗೆ ಮಾಡುವ ನನಗೆ ಈ ಮೇಲಿನ ಅನುಭವಗಳು ಸ್ವತಃ ಆಗಿವೆ ಮತ್ತು ಹತ್ತಿರದವರಿಂದ ಕೇಳಿರುವೆ.

ಹೀಗಾಗಿ ಯಾರ ಹಂಗಿಲ್ಲದೇ ತಮ್ಮ ಪಾಡಿಗೆ ತಾವು ಬರವಣಿಗೆ ಕೆಲಸದಲ್ಲಿ ತೊಡಗಿದ ಪ್ರಬುದ್ದತೆಯ ಕನ್ನಡದ ಕಾಳಜಿಯುಳ್ಳ ಮತದಾರರು ನಿಜವಾಗಲೂ ಅಧಿಕಾರದ ಲಾಲಸೆಗಾಗಿ ಸ್ಪರ್ಧೆ ಮಾಡಿದವರು ಯಾರು ನಿಸ್ವಾರ್ಥತೆಯ ಕಾರಣಕ್ಕೆ ಸ್ಪರ್ಧೆ ಮಾಡಿದವರಾರು ಅನ್ನೋ ಸ್ಪಷ್ಟ ತಿಳುವಳಿಕೆಯಿಂದ ತಮ್ಮ ಅಮೂಲ್ಯವಾದ ಮತವನ್ನು ನೀಡಿ.

ರಾಜ್ಯಮಟ್ಟದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ರಾಜಶೇಖರ ಮುಲಾಲಿ ಅವರನ್ನು ನಾಲ್ಕೈದು ಬಾರಿ ನಿರ್ಭಿಢೆಯಿಂದಲೇ ಪ್ರಶ್ನಿಸುವ ಮೂಲಕ ಮನವರಿಕೆ ಮಾಡಿಕೊಂಡಿರುವೆ ಮತ್ತು ನನ್ನಂತ ಯಕಶ್ಚಿತ ನನ್ನು ನಿರ್ಲಕ್ಷ್ಯ ಮಾಡದೇ ನನ್ನ ಅರಿಕೆಗಳನ್ನು ಆಲಿಸಿ ಹಲವಾರು ವಿಷಯಗಳನ್ನು ನನ್ನೊಂದಿಗೆ ಚರ್ಚಿಸಿ ವಿನಮ್ರತೆಯಲ್ಲೇ ಮತ ನೀಡುವಂತೆ ಕೋರಿದ ಪರಿಣಾಮ ಈ ಸಲ ನಾನು ಅವರಿಗೆ ಮನಸ್ಸು ತುಂಬಿ ಅವರಿಗೆ ಬೆಂಬಲಿಸಿರುವೆ.

ಅವರನ್ನು ಹೊರತು ಪಡಿಸಿ ಈವರೆಗೆ ನನ್ನನ್ನು ಬೇರೆ ಯಾರೂ ಖುದ್ದು ಸಂಪರ್ಕ ಮಾಡಿಲ್ಲವಾದ್ದರಿಂದ ಬೇರೆಯವರ ಬಗ್ಗೆ ನನ್ನ ಯಾವ ಅಭಿಪ್ರಾಯವು ಇಲ್ಲ. ಇದು ನನ್ನ ವೈಯಕ್ತಿಕ ಅಭಿಪ್ರಾಯ ಆಗಿದ್ದು ಅನ್ಯಥಾ ಭಾವಿಸದೇ ದಯವಿಟ್ಟು ರಾಜಶೇಖರ ಮುಲಾಲಿ ಅವರಂತ ನಿಸ್ವಾರ್ಥ ಕನ್ನಡ ಪ್ರೇಮಿಗೆ (ಮತದಾನ ಕ್ರಮ ಸಂ. 10)ಮತ ನೀಡಿ ಹಾರೈಸುವಂತೆ ಸಮಸ್ತ ನಾಡಿನ ಕಸಾಪ ಮತದಾರರು ಪರವಾಗಿ ವಿನಂತಿಸಿಕೊಳ್ಳುವೆ.

ಬಸವರಾಜ ಚಿನಗುಡಿ ಮಾಜಿ ಗೌರವ ಕಾರ್ಯದರ್ಶಿ ಕಸಾಪ ಕಿತ್ತೂರು

ಜಿಲ್ಲೆ

ರಾಜ್ಯ

error: Content is protected !!