Thursday, September 19, 2024

ಬೂದಿಹಾಳ ಸರಕಾರಿ ಪ್ರೌಢಶಾಲೆಯಲ್ಲಿ ಮಕ್ಕಳ ಹಬ್ಬ

ಬೈಲಹೊಂಗಲ: ಮಕ್ಕಳು ಸಮಯ ವ್ಯರ್ಥ ಮಾಡದೇ ಗುರಿಯತ್ತ ಗಮನ ಹರಿಸಬೇಕು ಎಂದು ಮುಖ್ಯಶಿಕ್ಷಕ ಎನ್.ಆರ್ ಠಕ್ಕಾಯಿ ಹೇಳಿದರು. ತಾಲೂಕಿನ ಬೂದಿಹಾಳದ ಸರಕಾರಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಮಕ್ಕಳ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಮಕ್ಕಳ ಹಬ್ಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಾವು ಎಷ್ಟೇ ದೊಡ್ಡವರಾದರೂ ಮಕ್ಕಳಲ್ಲಿರುವ ಮುಗ್ಧತೆ, ಕುತೂಹಲ, ಹುಮ್ಮಸ್ಸು, ಕ್ರಿಯಾಶೀಲತೆ ಎಂದಿಗೂ ಕಡಿಮೆಯಾಗಬಾರದು ಎಂದು ಅವರು ಅಭಿಪ್ರಾಯಪಟ್ಟರು.

ಜವಾಹರಲಾಲ್ ನೆಹರೂ ಅವರ ಬಾವಚಿತ್ರಕ್ಕೆ ಪೂಜೆ ಸಲ್ಲಿಸಿ ವಿದ್ಯಾರ್ಥಿಗಳು ಮಾತನಾಡಿದರು. ವೇದಿಕೆ ಮೇಲೆ ಸಿಂಧೂ ಕುಲಕರ್ಣಿ, ರಾಜೇಶ್ವರಿ ಸೊಗಲದ, ಚೈತ್ರಾ ಸೊಗಲದ, ಲಕ್ಷ್ಮೀ ತಡಸಲೂರ, ಪೂಜಾ ಸೊಗಲದ, ಅಭಿಲಾಷ ಹೊಂಗಲ, ಪ್ರಕಾಶ ಕುರಿ, ದರ್ಶನ ಅಂಗಡಿ, ಅಕ್ಷಯ ನರೇಂದ್ರಮಠ ಉಪಸ್ಥಿತರಿದ್ದರು.

ಶಾಲೆಯಲ್ಲಿ ಏರ್ಪಡಿಸಿದ ಪುರಾತನ ವಸ್ತುಗಳ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿ ಲಭ್ಯವಿರುವ ಹಳೆಯ ದೂರವಾಣಿ, ಕೃಷಿ ಉಪಕರಣಗಳು, ಮನೆಬಳಕೆಯ ವಸ್ತುಗಳು, ನಾಣ್ಯಗಳು, ರೇಡಿಯೋ, ಲಾಟೀನು, ಶ್ಯಾವಿಗೆ ಮಾಡುವ ಹಲಗೆ, ಅಡಕತ್ತರಿ, ವಾಕ್ಮನ್, ಕನ್ನಡಕ ಇತ್ಯಾದಿ ವಸ್ತುಗಳನ್ನು ತಂದು ಪ್ರದರ್ಶಿಸಿದರು.

ವಿದ್ಯಾರ್ಥಿಗಳಿಗೆ ಮೆಹಂದಿ ಸ್ಪರ್ಧೆ, ಕೇಶ ವಿನ್ಯಾಸ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಮಕ್ಕಳಿಗಾಗಿ ಹಗ್ಗ ಜಗ್ಗಾಟ, ಸಂಗೀತ ಕುರ್ಚಿ, ಪ್ಲಾಸ್ಟಿಕ್ ಕಪ್ ಪಿರಾಮಿಡ್, ಬಿಂದಿ ಹಚ್ಚುವುದು, ಅಕ್ಷರ ಲೇಪನ, ರಿಂಗ್ ಎಸೆತ, ಬುಟ್ಟಿಯಲ್ಲಿ ಚೆಂಡು ಹಾಕುವುದು ಇತ್ಯಾದಿ ವಿವಿಧ ಮನರಂಜನಾ ಆಟಗಳನ್ನು ಹಮ್ಮಿಕೊಳ್ಳಲಾಗಿತ್ತು. ಎಲ್ಲ ಮಕ್ಕಳು ಭಾಗವಹಿಸಿ ಖುಷಿ ಪಟ್ಟರು.

ಕಾರ್ಯಕ್ರಮದಲ್ಲಿ ಶಿಕ್ಷಕರಾದ ಪಿ.ಎಸ್ ಗುರುನಗೌಡರ, ಎ.ಎಚ್.ಪಾಟೀಲ, ಎಸ್.ಬಿ.ಭಜಂತ್ರಿ, ಎಸ್.ವಿ. ಬಳಿಗಾರ, ಐ.ಎಸ್ ಮುದಗಲ್, ಎಚ್.ವಿ.ಪುರಾಣಿಕ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ತನುಜಾ ಬಡಿಗೇರ ಸ್ವಾಗತಿಸಿದರು. ಸಾವಿತ್ರಿ ಹೊಂಗಲ ನಿರೂಪಿಸಿದರು. ಮಲ್ಲವ್ವ ಅಳಗೋಡಿ ವಂದಿಸಿದರು.

ಜಿಲ್ಲೆ

ರಾಜ್ಯ

error: Content is protected !!