Friday, September 20, 2024

ಸರಕಾರಿ ನೌಕರರ ಸಂಘದ ಬೆಳಗಾವಿ ಜಿಲ್ಲಾಧ್ಯಕ್ಷನ ಬದಲಾವಣೆಗೆ ಆಗ್ರಹ

ಬೆಳಗಾವಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಜಗದೀಶಗೌಡ ಪಾಟೀಲರ  ದಬ್ಬಾಳಿಕೆ ಹಾಗೂ ದುರ್ನಡತೆ ವಿರೋದಿಸಿ ಜಿಲ್ಲಾ ನೌಕರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು ಕೆಂದಾಯ ಇಲಾಖೆಯ ಬ್ಯಾಂಕಿನ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದರು

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಬೆಳಗಾವಿ ಜಿಲ್ಲಾಧ್ಯಕ್ಷ ಜಗದೀಶಗೌಡ ಪಾಟೀಲ ಅನೇಕ ವಿಷಯಗಳಲ್ಲಿ ಅವ್ಯವಹಾರಗಳನ್ನು ಮಾಡಿ ಜಿಲ್ಲಾ ನೌಕರ ಸಂಘದ ಹೆಸರನ್ನು ಹಾಳುಮಾಡಿ ತನ್ನ ವೈಯಕ್ತಿಕ ಹಿತಾಸಕ್ತಿಯನ್ನು ಬೆಳೆಸಿಕೊಂಡಿರುತ್ತಾರೆ. ನಿರ್ಣಾಯಕವಾದ ನಿರ್ಧಾರಗಳನ್ನು ಪದಾಧಿಕಾರಿಗಳೊಂದಿಗೆ ಚರ್ಚಿಸದೆ ಜಗದೀಶ ಪಾಟೀಲ ಸ್ವಂತ ನಿರ್ಧಾರಗಳನ್ನು ತೆಗೆದುಕೊಂಡು ನಂತರ ಸಭೆಯಲ್ಲಿ ತಾವೇ ತಮಗೆ ಬೇಕಾದ ರೀತಿಯಲ್ಲಿ ಮಂಡನೆ ಮಾಡುತ್ತಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದ್ಯಸ್ಯರು ಸಂಘದ ಹಿತವಲ್ಲದ ದೃಷ್ಟಿಯಿಂದ ಒಪ್ಪಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣಮಾಡಿ ಅನುಮೋದನೆ ಪಡೆಯುತ್ತಾ ಬಂದಿರುತ್ತಾರೆ.

ಅಲ್ಲದೆ ಸಂಘದಲ್ಲಿ ವಿರೋಧ ವ್ಯಕ್ತಪಡಿಸುವ ಪದಾಧಿಕಾರಿಗಳನ್ನು ಹಾಗೂ ಸದಸ್ಯರನ್ನು ಅವ್ಯಾಚ್ ಶಬ್ದಗಳಿಂದ ನಿಂದಸಿ ಅನುಚಿತವಾಗಿ ವರ್ತಿಸಿ ಅವರನ್ನು ಅಗೌರವಗಳೊಂದಿಗೆ ನಡೆದುಕೊಳ್ಳುತ್ತಿದ್ದಾರೆ ಅಲ್ಲದೆ ಸಂಘದ ಸದಸ್ಯರಿಗೆ ದೂರವಾಣಿ ಕರೆಮಾಡಿ ದಬ್ಬಾಳಿಕೆಯ ಜೊತೆಗೆ ಜೀವ ಬೆದರಿಕೆ ಮಾಡುತ್ತಿದ್ದಾರೆ ನಮ್ಮೆಲ್ಲರಿಗೂ ಈತನಿಂದ ಜೀವಕ್ಕೆ ಅಪಾಯವಿದೆ. ತಾವು ಒಂದು ವೇಳೆ ನನಗೆ ವಿರುದ್ಧ ಮಾಡಿದರೆ ಸರಕಾರದ ಮಟ್ಟದಲ್ಲಿ ಎಲ್ಲ ರಾಜಕೀಯ ವ್ಯಕ್ತಿಗಳ ಹಾಗೂ ಉನ್ನತ್ತ ಮಟ್ಟದ ಅಧಿಕಾರಿಗಳ ನೇರ ಸಂಪರ್ಕ ಇದೆ. ನಿಮ್ಮನ್ನು ಬೇರೆ ಜಿಲ್ಲೆಗಳಿಗೆ ತಕ್ಷಣವೇ ವರ್ಗಾವಣೆ ಮಾಡಿಸುತ್ತೇನೆಂದು ಬೇದರಿಕೆಯನ್ನು ಹಾಕಿ ತಮ್ಮ ವಿರುದ್ದ ಮಾತನಾಡದಂತೆ ಮಾಡುತಿದ್ದಾರೆ.

ನೌಕರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು

ಜಗದೀಶ ಪಾಟೀಲ ಸಂಘದ ವತಿಯಿಂದ ನೀಡಲಾದ ವ್ಯಾಪಾರ ಮಳಿಗೆಗಳ ಬಾಡಿಗೆಯಲ್ಲಿಯು ಸಹ ಅವ್ಯವಹಾರ ಮಾಡಿರುತ್ತಾರೆ ಇವರು ಸಭೆಯಲ್ಲಿ ಒಂದು ರೀತಿ ಬಾಡಿಗೆನ್ನು ನಿರ್ಧರಿಸಿ ಅವರಿಂದ ಬೇರೆ ರೀತಿಯಲ್ಲಿ ಬಾಡಿಗೆಯನ್ನು ವಸೂಲು ಮಾಡುತ್ತಾ ಅವ್ಯವಹಾರವನ್ನು ಮಾಡಿರುತ್ತಾರೆ.

ಸಂಘದ ಆವರಣದಲ್ಲಿ ಅನೇಕ ಕೆಟ್ಟ ಕೆಲಸಗಳನ್ನು ಮಾಡುತ್ತಾ ಸಂಘದ ಆಸ್ತಿಯನ್ನು ತಮ್ಮ ಸ್ವಂತ ಆಸ್ತಿ ಎಂಬಂತೆ ಬಳಸಿಕೋಳ್ಳುತಾರೆ.ನೌಕರರ ಹೆಸರಿನಲ್ಲಿ ಗೃಹ ನಿರ್ಮಾಣ ಸಂಘವನ್ನು ನಿರ್ಮಿಸಿ ನೌಕರರಿಂದ ಹಣವನ್ನು ಪಡೆದು ಅವರಿಗೆ ನಿಗದಿ ಪಡೆಸಿದ ಅವಧಿಯೋಳಗೆ ನಿವೇಶನವನ್ನು ಹಂಚಿಕೆಮಾಡದೆ, ಕಾಲಹರಣ ಮಾಡುತ್ತಾ ಬಂದಿರುತ್ತಾರೆ. ಅಲ್ಲದೆ ಗೃಹ ನಿರ್ಮಾಣ ಸಂಘದಲ್ಲಿಯೂ ಸಹ ಅನೇಕ ಅವ್ಯವಹಾರಗಳನ್ನು ಮಾಡಿದ್ದಾರೆ.

ಯಾರಾದರೂ ಇವರ ವಿರುದ್ದ ಮಾತನಾಡಿದರೆ ಅವರಿಗೆ ಜೀವ ಬೇದರಿಕೆ ಹಾಕುತ್ತಾ ನಿಮ್ಮನು ಬೇರೆ ಜಿಲ್ಲೆಗೆ ವರ್ಗಾವಣೆ ಮಾಡುತ್ತೇನೆಂದು ಬೇದರಿಕೆ ಹಾಕಿ ಕಾರ್ಯಕಾರಿ ಸಮಿತಿ ಸದಸ್ಯರನ್ನು ತಮ್ಮ ಹತ್ತೊಟಿಯಲ್ಲಿ ಇಟ್ಟುಕೊಳ್ಳಲು ಅನ್ಯಮಾರ್ಗದಲ್ಲಿ ನಡೆದುಕೊಳ್ಳುತ್ತಿದ್ದಾರೆ.
ಗೃಹ ನಿರ್ಮಾಣ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆ ಮತ್ತು ನೌಕರರ ಸಂಘದ ವತಿಯಿಂದ ಮಕ್ಕಳ ಪ್ರತಿಭಾ ಪುರಸ್ಕಾರ ಸಮಾರಂಭಗಳನ್ನು ಮಾಡಿ ಎರಡು ಸಂಘಗಳಲ್ಲಿ ಖರ್ಚು ವೆಚ್ಚಗಳ ಲೆಕ್ಕ ತೋರಿಸುತಾರೆ. ಎಂದು ಆರೋಪಿಸಿದರು.

ಸಭೆಯಲ್ಲಿ ಪಾಲ್ಗೊಂಡ ಸಂಘದ ಪದಾಧಿಕಾರಿಗಳು

ಈ ಎಲ್ಲ ಕಾರಣಗಳಿಂದ ಜಿಲ್ಲಾ ನೌಕರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ತಾಲೂಕಾ ಅಧ್ಯಕ್ಷರು ಮನ ನೊಂದು ಸಂಘದ ಹಿತ ದೃಷ್ಟಿಯಿಂದ ಇವರನ್ನು ಜಿಲ್ಲಾ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯಲು ಅರ್ಹತೆಯನ್ನು ಹೊಂದಿರುವುದಿಲ್ಲವೆಂದು ಖಂಡಿಸಿ ಅವರನ್ನು ಬದಲಾವಣೆ ಮಾಡಲೇಬೇಕು ಅವರು ಮಾಡಿದ ಅವ್ಯವಹಾರಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಎಸ್ ಷಡಾಕ್ಷರಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಈ ವೇಳೆ ಬೈಲಹೊಂಗಲ ತಾಲೂಕಾಧ್ಯಕ್ಷ ಶಿವಾನಂದ ಕುಡಸೋಮನ್ನವರ, ಖಾನಾಪೂರ ತಾಲೂಕಾಧ್ಯಕ್ಷ ಯಳ್ಳೂರ, ಅಥಣಿ ತಾಲೂಖಾಧ್ಯಕ್ಷ ರಾಮಣ್ಣ ಧರಿಗೌಡರ, ಮೂಡಲಗಿ ತಾಲೂಕಾಧ್ಯಕ್ಷ ಆನಂದ ಹಜ್ಯಾಗೋಳ, ಗೋಕಾಕ ತಾಲೂಕಾಧ್ಯಕ್ಷ ಬಸವರಾಜ ಮುರಗೋಡ, ಸವದತ್ತಿ ತಾಲೂಕಾಧ್ಯಕ್ಷ ಆನಂದ ಮೂಗಬಸವ, ಬೆಳಗಾವಿ ನಗರ ಚುನಾಯಿತ ಸದಸ್ಯರಾದ ಆಸಿಫ್ ಅತ್ತಾರ, ಅಶೋಕ ಮನ್ನಿಕೇರಿ, ಬಸವರಾಜ ರಾಯವ್ವಗೋಳ, ಶಂಕರ ಗೋಕಾವಿ, ಸಂಗಮೇಶ ಖನ್ನನಾಯ್ಕರ್, ಎಸ್.ಡಿ ಗಂಗಣ್ಣವರ ಸೇರಿದಂತೆ ಇನ್ನು ಅನೇಕರು ಇದ್ದರು.

 

 

ಜಿಲ್ಲೆ

ರಾಜ್ಯ

error: Content is protected !!