Saturday, July 27, 2024

ಬಸವಣ್ಣಗ ಬಿಟ್ಟಿಲ್ಲ ಮ್ಯೂಸಿಕ್ ಡೈರೆಕ್ಟ್ರ್‌ನ ಬಿಡ್ತಾರು: ಸಿದ್ದರಾಮ ತಳವಾರ

ಬಸವಣ್ಣಗ ಬಿಟ್ಟಿಲ್ಲ ಮ್ಯೂಸಿಕ್ ಡೈರೆಕ್ಟ್ರ್ ಬಿಡ್ತಾರು?..

ಈ ಅಸ್ಪೃಶ್ಯತೆ ಬಗ್ಗೆ ಈ ಜಾತೀಯತೆ ಬಗ್ಗೆ ಮತ್ತೀ ಸಮಾನತೆ ಬಗ್ಗೆ ಸ್ವತಃ ಅನುಭವಿಸಿದವರಿಗಿಂತ ಅದನ್ನ ನೋಡಿದವರು ಅದನ್ನ ವಿರೋಧಿಸಿದವರು ಅದಕ್ಕ ಸಂಬಂಧಾನ ಇಲ್ದವ್ರು ಸಾರ್ವಜನಿಕವಾಗಿ ಮಾತಾಡಿದಾಗ ಆ ಕ್ಶಣಕ್ಕೆ ಅವರಿಗೆ ಯಾವುದೋ ಒಂದು ಥರದ ಸಮಾಧಾನ ಅನ್ನಿಸಿದ್ರೂ ಆ ನಂತರದಲ್ಲಿ ಅವರ ಫಜೀತಿ ಹೇಳೋದ ಬ್ಯಾಡ.ಈ ವ್ಯವಸ್ಥೆಯಾಚೆಗಿನವರು ಮಾತಾಡಿದಾಗಲೆಲ್ಲ ಒಂದು ದೊಡ್ಡ ಗುಲ್ಲೇಳುವುದು ಸಹಜ ಅದರಲ್ಲಿ ಹಂಸಲೇಖರ ಈ ಒಂದು ಹೇಳಿಕೆ ಸ್ಯಾಂಪಲ್ ಅಷ್ಟೇ!

12 ನೇ ಶತಮಾನದಲ್ಲಿ ಸ್ವತಃ ಬಸವಣ್ಣ ತಾನು ಬ್ರಾಹ್ಮಣನಾಗಿದ್ದೂ ತನ್ನ ಸಮುದಾಯದವರು ದಲಿತರ ವಿಷಯದಲ್ಲಿ ಹೊಂದಿದ್ದ ನಿಲುವು (ಬ್ರಾಹ್ಮಣ್ಯ)ವನ್ನು ವಿರೋಧಿಸಿ ಊರ ಹೊರಗಿಡಲಾಗಿದ್ದ ದಲಿತರನ್ನು ಮುಖ್ಯವೇದಿಕೆಗೆ ತರುವ ನಿಟ್ಟಿನಲ್ಲಿ ಪಟ್ಟ ಪರಿಶ್ರಮ ಆ ನಂತರದಲ್ಲಿ ಅವರು ಅನುಭವಿಸಿದ ನೋವು, ಆ ಯಾತನೆ ಆ ಕಲ್ಯಾಣದಲ್ಲಿ ನಡೆದ ಕ್ರಾಂತಿ ಅವರ ಆತ್ಮಹತ್ಯೆ ಹ್ಮ ಅದೊಂದು ಹೃದಯ ವಿದ್ರಾವಕ ಒಂದು ಇತಿಹಾಸ.

ಈ ಮೀಸಲಾತಿ/ ಜಾತೀಯತೆ ಬೇಕಿಲ್ಲ ಎಲ್ಲರೂ ಸಮಾನರು ಅನ್ನೋ ವರ್ಗ ಒಂದು ಕಡೆ ಈ ಜಾತೀಯತೆಯನ್ನು ಜೀವಂತವಾಗಿರಿಸಿಕೊಂಡೇ ಸಮಾಜದ ಮುಖ್ಯವಾಹಿನಿಗೆ ತಮ್ಮನ್ನು ತಾವು ಪರಿಚಯಿಸಿಕೊಳ್ಳುವ ವರ್ಗ ಒಂದು ಕಡೆ.

ಇತ್ತೀಚಿನ ದಿನಗಳಲ್ಲಿ ದಲಿತೇತರರು ಕೆಲ ಸಂದರ್ಭದಲ್ಲಿ ದಲಿತರನ್ನು ಹೆಗಲ ಮೇಲೆ ಕೈ ಹಾಕಿಕೊಂಡು ತಿರುಗಾಡುತ್ತ ಅವರದೇ ಕೇರಿಯಲ್ಲಿ ಸಹಬೋಜನ ಮಾಡುವ ಮೂಲಕ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಂಡರೆ ಕೆಲವರು ದಲಿತ ಕೇರಿಯಲ್ಲಿ ಪ್ರಚಾರಕ್ಕಾಗಿ ವಸತಿ ಮಾಡುವ ಮೂಲಕ ಸುದ್ದಿಯಾದರು. ಪರಿಣಾಮ ಕೇರಿ ಕೇರಿಯಾಗಿಯೇ ಉಳಿದಿದೆ ಹೊರತು ಈ ವರೆಗೂ ಮೇಲ್ದರ್ಜೆಗೇರಲೇ ಇಲ್ಲ.

ಅಷ್ಟಕ್ಕೂ ದಲಿತರಿಗೆ ಬೇಕಿರುವುದು ಆರ್ಥಿಕ ಭದ್ರತೆ ಉದ್ಯೋಗ ಭದ್ರತೆ ಸ್ವಂತ ಉದ್ದಿಮೆಗೆ ಅಗತ್ಯ ಬಂಡವಾಳ ಅವರ ಮಕ್ಕಳಿಗೆ ಅಗತ್ಯ ಶಿಕ್ಷಣ ಇದನ್ನು ಆಳುವ ಸರ್ಕಾರ ಮಾಡಬೇಕು ಅನ್ನೋ ಸುಲಭ ದಾಳ ಉರುಳಿಸುವ ಚಿಂತಕರು ನಾಯಕರು ತಾವು ಮಾತ್ರ ಯಾವೊಬ್ಬ ದಲಿತ ಯುವಕನನ್ನೋ ನಾಯಕನನ್ನೋ ಬೆಳೆಸುವ ಗೋಜಿಗೂ ಹೋಗುವುದಿಲ್ಲ.

ದಲಿತ ಹೆಸರಿನಿಂದ ಆಯ್ಕೆಯಾದ ರಾಜಕಾರಣಿಗಳು ತಮ್ಮ ಕುಟುಂಬದ ಏಳಿಗೆ ಬಯಸುವವರೇ ಹೊರತು ಸಮಾಜದ ಅಭಿವೃದ್ದಿ ಅವರಿಗೆ ಬೇಕಿಲ್ಲ. ದಲಿತ ಸಮಾಜ ಆರ್ಥಿಕವಾಗಿ ಬಲಗೊಂಡರೆ ಈ ಉಳ್ಳವರ ಹೆಸರಿನಲ್ಲಿ ಜೈಕಾರ ಹಾಕೋದಕ್ಕೆ ಬರೋರು ಯಾರು? ಈ ಮೀಸಲಾತಿ ಅನ್ನೋ ಅಂಬೇಡ್ಕರ್ ವರದಾನವೇ ಉಳ್ಳವರ ಪಾಲಿನ ಮರಣ ಶಾಸನದಂತಾದ ಈ ಸಂದರ್ಭದಲ್ಲಿ ದಲಿತರನ್ನು ಆರ್ಥಿಕವಾಗಿ ಇನ್ನಷ್ಟು ಹೀಗೆಯೇ ಇಟ್ಟುಕೊಳ್ಳಬೇಕಾದ ದರ್ದು ಅವರಿಗೂ ಇದೆ.

ಸರ್ಕಾರಿ ನೌಕರಿಗಳು ಇತ್ತೀಚೆಗೆ ತುಂಬ ಕಷ್ಟಕರವಾಗಿದ್ದು ಗೌಪ್ಯ ಸಂಗತಿಯೇನಲ್ಲ. ಮೆರಿಟ್ಟುಗಳ ಮೇಲೆ ನಿಂತಿರುವ ಇಂದಿನ ನೌಕರಿಗಳು ಎಲ್ಲೋ ಒಬ್ಬರು ಇಬ್ಬರು ಪಡೆದುಕೊಂಡರೆ ಅದೂ ಇದ್ದುಳ್ಳ ದಲಿತ ಕುಟುಂಬದ ಮಕ್ಕಳಿಗೆ ಸಿಗುತ್ತಿರುವುದು ಸುಳ್ಳಲ್ಲ. ಅವರ ಅಪ್ಪ ಅವ್ವ ಈಗಾಗಲೇ ಸರ್ಕಾರಿ ನೌಕರಿ ಇರೋರು ಅವರ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸುವ ಮೂಲಕ ಆ ಕುಟುಂಬ ಮತ್ತೇ ಮೀಸಲಾತಿ ಅಡಿಯಲ್ಲಿ ನೌಕರಿ ಗಿಟ್ಟಿಸಿಕೊಳ್ಳುವ ಮೂಲಕ ಮೂಲ ಬಡ ದಲಿತರು ಪುನಃ ಆರ್ಥಿಕವಾಗಿ ಅತ್ಯಂತ ಕೆಳ ಮಟ್ಟದಲ್ಲಿ ಉಳಿಯುವಂತಾಗಿದೆ.

ಹೀಗಾಗಿ ಈ ಎಲ್ಲ ಸ್ತರದಲ್ಲಿಯೂ ದಲಿತರಿಗೆ ಒಳ್ಳೆಯ ಅವಕಾಶಗಳು ದೊರೆಯುವಂತಾಗಬೇಕು ಈ ಅನಿಷ್ಟ ಪದ್ಧತಿ ತೊಲಗಬೇಕು ಅನ್ನೋ ಹಂಸಲೇಖರಂತಹ ದಲಿತೇತರರ ಮಾತುಗಳು ಕೆಲವರಿಗೆ ಖಾರದಂತಾಗುವುದು ಸರಳ.

ಒಟ್ಟಾರೇ ಅಸ್ಪೃಶ್ಯತೆ/ದಲಿತರು/ ಮಿಸಲಾತಿ /ಸಮಾನತೆ ಈ ತರಹದ ಶಬ್ದಗಳು ಸದಾ ಸಮಾಜದಲ್ಲಿ ಜೀವಂತವಾಗಿರಬೇಕು ಅನ್ನೋ ನಾಟಕೀಯ ಡಾಂಭಿಕ ಮನಸ್ಥಿತಿಯುಳ್ಳವರಿಗೆ ಹಂಸಲೇಖರಂತಹ ನಿಸ್ಪೃಹ ಮೇಧಾವಿಗಳ ನೇರ ಮಾತು ಚುಚ್ಚುವುದರಲ್ಲಿ ತಪ್ಪೇನಿಲ್ಲ.

ಪೇಜಾವರರಂತಹ ಹಿರಿಯರು ಕೂಡ ಈ ಅಸಮಾನತೆ ಅಸ್ಪೃಶ್ಯತೆಯನ್ನು ಒಂದು ಹಂತದಲ್ಲಿ ವಿರೋಧಿಸಿದವರೇ ಆದರೂ ಸಮುದಾಯದ ಕಟ್ಟುಪಾಡು ಅವರನ್ನು ಎಲ್ಲೋ ಒಂದು ಕಡೆ ಈ ವಿಚಾರಗಳಿಂದ ತೆಪ್ಪಗಿರುವಂತೆ ಮಾಡಿದ್ದು ಮುಚ್ಚಿಡುವಂತದ್ದೇನಲ್ಲ. ತೋರಿಕೆಗೆ ದಲಿತರ ಕೇರಿಗೆ ಪ್ರವೇಶ ಮಾಡುವ ಮೂಲಕ ಸಾಧಿಸಿದ್ದಾದರೂ ಏನು? ಸಹಪಂಕ್ತಿ ಭೋಜನ ಮಾಡಿದರೆ ಸಮಾನತೆ ಬಂದು ಬಿಡುತ್ತೇ ಅನ್ನೋಕೆ ದಲಿತರೇನು ಇಮ್ಯೆಚ್ಯುರ್ ಮೆಂಟ್ಯಾಲಿಟಿ ಯವರಲ್ಲ. ಅಂಬೇಡ್ಕರ್ ಅವರು ಅವರ ಜೀವನವನ್ನೇ ಪಣಕ್ಕಿಟ್ಟು ಅಸಮಾನತೆ ಅನಿಷ್ಟ ಪದ್ದತಿಗಳನ್ನು ವಿರೋಧಿಸಿ ಖಾಯಂ ಔಷಧಿ ಕೊಡುವ ನಿಟ್ಟಿನಲ್ಲಿ ಕಾನೂನಿನ ಚೌಕಟ್ಟಿನ ಮುಲಾಮು ಸವರಿದ್ದಾರೆ. ಒಂದು ಹಂತದಲ್ಲಿ ಇಲ್ಲಿಯವರೆಗೂ ದಲಿತರಲ್ಲಿ ಸ್ವಾಭಿಮಾನ ಹುಟ್ಟಿಸಿದ್ದು ಈ ಸ್ವಾಭಿಮಾನದ ಹೆದರಿಕೆಗಾಗಿ ದಲಿತೇತರರು ಬಾಯಿ ಬಿಟ್ಟರೆ ಈ ಸಮಾನತೆ ಮೀಸಲಾತಿ ದಲಿತರು ನಮ್ಮವರು ಅನ್ನೋ ನಾಟಕೀಯ ಮಾತುಗಳಿಗೆ ಚರ್ಚೆ ಹುಟ್ಟು ಹಾಕ್ತಾರೆ ಅಷ್ಟೇ. ಅಷ್ಟಕ್ಕೂ ಹಂಸಲೇಖ ಅವರು ಯಾರ ಕ್ಷಮೆ ಯಾಚಿಸುವ ಅವಶ್ಯಕತೆ ಇದ್ದಿರಲಿಲ್ಲ.

ಲೇಖಕರು

ಸಿದ್ದರಾಮ ತಳವಾರ , ದಾಸ್ತಿಕೊಪ್ಪ

ಜಿಲ್ಲೆ

ರಾಜ್ಯ

error: Content is protected !!