Sunday, September 8, 2024

ಮಕ್ಕಳ ಶಿಕ್ಷಣ, ಆರೈಕೆ ಮತ್ತು ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು ಬಹಳ ಮುಖ್ಯ; ಭಾವನಾ ಕಂಬಿ

ಸುದ್ದಿ ಸದ್ದು ನ್ಯೂಸ್

ಚನ್ನಮ್ಮನ ಕಿತ್ತೂರು: ಪಟ್ಟಣದ ದಿವ್ಯ ಚೇತನ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಆಚರಿಸಲಾಯಿತು.

ಈ ವೇಳೆ ಶಾಲೆಯ ಪ್ರಧಾನ ಗುರುಮಾತೆ ಭಾವನಾ ಕಂಬಿ ಮಾತನಾಡಿ ಮೊದಲು ಭಾರತದಲ್ಲಿ ನವೆಂಬರ್ 20ರಂದು ಸಾರ್ವತ್ರಿಕವಾಗಿ ಮಕ್ಕಳ ದಿನಾಚರಣೆ ಆಚರಿಸಲಾಗುತ್ತಿತ್ತು ನಂತರ

ನಮ್ಮ ದೇಶದ ಮೊದಲ ಪ್ರಧಾನಮಂತ್ರಿ ಜವಾಹರಲಾಲ್‌ ನೆಹರೂ ರವರ ಮಕ್ಕಳ ಮೇಲೆ ಬಹಳ ಕಾಳಜಿ ಮತ್ತು ಮಕ್ಕಳಿಗಾಗಿ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿರುವ ಹಿನ್ನೆಲೆಯಲ್ಲಿ ಜವಾಹರಲಾಲ್‌ ನೆಹರೂ ರವರ ಮರಣಾನಂತರ ಅವರ ಜನ್ಮದಿನದ ಸವಿನೆನಪಿಗಾಗಿ ನವೆಂಬರ್ 14 ರಂದು ಮಕ್ಕಳ ದಿನಾಚರಣೆ ಆಚರಣೆ ಮಾಡಲು ಪ್ರಾರಂಭವಾಯಿತು.

                      ಶಾಲೆಯ ಮಕ್ಕಳೊಂದಿಗೆ ಶಾಲಾ ಶಿಕ್ಷಕರು

ನವೆಂಬರ್ 14 ರಂದು ಮಕ್ಕಳ ದಿನ ಆಚರಣೆ ಮಾಡುವುದರ ಜೊತೆಗೆ ಮಕ್ಕಳ ಶಿಕ್ಷಣ, ಮಕ್ಕಳ ಆರೈಕೆ ಮತ್ತು ಮಕ್ಕಳ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು ಬಹಳ ಮುಖ್ಯ ಎಂದರು.

ಕಳೆದ ಎರಡು ವರ್ಷಗಳಿಂದ ಕೋವಿಡ್-19 ಕಾರಣ ಶಾಲೆಗಳು ಸಂಪೂರ್ಣ ಕಾರ್ಯನಿರ್ವಹಿಸದ ಕಾರಣ ಆಚರಣೆ ಮಾಡಿರಲಿಲ್ಲ ಈ ವರ್ಷ ಸರ್ಕಾರದ ನಿಯಮಾವಳಿಗಳ ಪ್ರಕಾರ ನಮ್ಮ ಶಾಲೆಯಲ್ಲಿ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು ಮಕ್ಕಳು ಸ್ವಾತಂತ್ರ ಹೋರಾಟಗಾರರ ವೇಷದಲ್ಲಿ ನೋಡುಗರ ಮನ ತಣಿಸಿದರು.

ಈ ವೇಳೆ ಶಾಲಾ ಶಿಕ್ಷಕರು ಮಕ್ಕಳು ಮತ್ತು ಪಟ್ಟಣದ ನಾಗರೀಕರು ಇದ್ದರು.

ಜಿಲ್ಲೆ

ರಾಜ್ಯ

error: Content is protected !!