Thursday, July 25, 2024

ಏನಿದು ಕ್ರಿಪ್ಟೋಕರೆನ್ಸಿ ಮತ್ತು ಬಿಟ್‌ಕಾಯಿನ್ ?

ಕ್ರಿಪ್ಟೋಕರೆನ್ಸಿ ಎಂದರೆ ಡಿಜಿಟಲ್ ಅಥವಾ ವರ್ಚುವಲ್ ಕರೆನ್ಸಿ. ಈ ಕರೆನ್ಸಿಗಳು ಕೈಯಲ್ಲಿ ಹಿಡಿಯುವ ನೋಟಿನ ರೂಪದಲ್ಲಿ ಇರೋದಿಲ್ಲ. ಡಿಜಿಟಲ್ ಹಣದ ರೂಪದಲ್ಲಿ(ಗೂಗಲ್ ಪೇ, ಫೋನ್ ಪೇ ನಲ್ಲಿ ಇರುವ ಹಾಗೆ) ನಮ್ಮ ಕ್ರಿಪ್ಟೋ ಎಕ್ಸ್‌ಚೇಂಜ್ ಅಕೌಂಟಲ್ಲಿ ಇರುತ್ತವೆ.

ಬ್ಲಾಕ್‌ ಚೈನ್’ ಎಂಬ ಟೆಕ್ನಾಲಜಿ ಬಳಸಿ ಕ್ರಿಪ್ಟೋಕರೆನ್ಸಿಗಳಿಗೆ ಡಿಜಿಟಲ್ ರಕ್ಷಣೆ ನೀಡಲಾಗುತ್ತದೆ.
ಸರ್ಕಾರ,ಬ್ಯಾಂಕ್ ಅಥವಾ ಇತರ ಮೂರನೇ ವ್ಯಕ್ತಿಯಂತಹ ಮಧ್ಯವರ್ತಿ ಇಲ್ಲದೆ ವ್ಯಕ್ತಿಗಳು ಪರಸ್ಪರ ನೇರವಾಗಿ ವ್ಯವಹರಿಸಲು ಈ ಟೆಕ್ನಾಲಜಿ ಸುರಕ್ಷಿತ ಮಾರ್ಗವನ್ನು ಮಾಡಿಕೊಡುತ್ತದೆ.

ಕ್ರಿಪ್ಟೋಕರೆನ್ಸಿಗಳ ನೆಟ್ವರ್ಕ್, ವಿಕೇಂದ್ರೀಕೃತ ನಿಯಂತ್ರಣ (Decentralized) ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತದೆ.
ವಿಕೇಂದ್ರೀಕೃತ ನಿಯಂತ್ರಣ‘, ಅಂದರೆ ಅದು ಒಬ್ಬ ವ್ಯಕ್ತಿ, ಬ್ಯಾಂಕ್ ಅಥವಾ ಯಾವುದೇ ದೇಶದ ಸರ್ಕಾರದಿಂದ ನಿಯಂತ್ರಿಸಲ್ಪಡುವುದಿಲ್ಲ.

ಬಿಟ್ ಕಾಯಿನ್, ಕ್ರಿಪ್ಟೋಕರೆನ್ಸಿಗಳಲ್ಲೇ ಅತ್ಯಂತ ಜನಪ್ರಿಯ ಮತ್ತು ಮೊದಲನೆಯ ಕ್ರಿಪ್ಟೋಕರೆನ್ಸಿ. ಇದು ಪ್ರಾರಂಭವಾಗಿದ್ದು 2009 ರಲ್ಲಿ, ಇದನ್ನು ಸತೋಶಿ ನಕಾಮೊಟೊ ಅನ್ನೋ ಪ್ರೋಗ್ರಾಮರ್ ಅಥವಾ ಒಂದು ಗ್ರೂಪ್ ಬಿಟ್ ಕಾಯಿನ್ ಅನ್ನು ಪಬ್ಲಿಷ್ ಮಾಡುತ್ತಾರೆ.

ನಾವು ಹಣವನ್ನು ನೋಡುವ ವಿಧಾನವನ್ನೇ ಬಿಟ್ ಕಾಯಿನ್ ಬದಲಾಯಿಸಿದೆ.ಈಗ ಸಾವಿರಾರು ಕ್ರಿಪ್ಟೋ ಕರೆನ್ಸಿಗಳು ಚಾಲ್ತಿಯಲ್ಲಿವೆ.(ಬಿಟ್‌ಕಾಯಿನ್, ಎಥೆರಿಯಮ್, ರಿಪ್ಪಲ್, ಸೋಲಾನಾ, ಕಾರ್ಡಾನೊ)

ಸೆಂಟ್ರಲ್ ಬ್ಯಾಂಕಿಂಗ್ ಮತ್ತು ಬಿಟ್ ಕಾಯಿನ್ ಡೀ ಸೆಂಟ್ರಲೈಸ್

ಜಗತ್ತಿನ ಎಲ್ಲಾ ರಾಷ್ಟ್ರಗಳು ಈಗ ಹೊಂದಿರುವುದು ಕೇಂದ್ರೀಕೃತ (Centralized) ಬ್ಯಾಂಕಿಂಗ್ ಸಿಸ್ಟಂ. ಭಾರತದಲ್ಲಿರುವ ವ್ಯಕ್ತಿ ಅಮೆರಿಕಾದಲ್ಲಿರುವ ವ್ಯಕ್ತಿಗೆ ಹಣ ಕಳುಹಿಸಬೇಕು ಎಂದರೆ ಮೊದಲು ಬ್ಯಾಂಕಿಗೆ ಹೋಗಬೇಕು. ಭಾರತದ ರೂಪಾಯಿಯನ್ನು ಮೊದಲು ಅಮೆರಿಕಾದ ಡಾಲರ್ ಗೆ ಬದಲಿಸಬೇಕು. ಇದಕ್ಕಾಗಿ ಒಂದಷ್ಟು ಫೀಸ್(ಶುಲ್ಕ) ಪಾವತಿಸಬೇಕು. ಆನಂತರ ಇಲ್ಲಿನ ಬ್ಯಾಂಕ್ ನಿಂದ ಅಮೆರಿಕಾದಲ್ಲಿರುವ ಬ್ಯಾಂಕ್ ಗೆ ರವಾನಿಸಬೇಕು. ಅದಕ್ಕೂ ಫೀಸ್ (ಶುಲ್ಕ) ಪಾವತಿಸಬೇಕು. ಬಿಟ್ ಕಾಯಿನ್ ನಲ್ಲಿ ಅದ್ಯಾವ ಶುಲ್ಕಗಳು ಇರುವುದಿಲ್ಲ. ನೀವು ಕಳುಹಿಸಬೇಕಾದ ವ್ಯಕ್ತಿಯ ವಾಲೆಟ್ ಅಡ್ರೆಸ್ ಗೆ ಕಳಹಿಸಿದರೆ ಅವರಿಗೆ ತಲುಪುತ್ತೆ.

ಈಗಿರುವ ಕೇಂದ್ರೀಕೃತ(Centralised) ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಇಬ್ಬರ ನಡುವಿನ ವಹಿವಾಟಿಗೂ ಮೂರನೆಯವರ ( ಬ್ಯಾಂಕ್ ) ಮಧ್ಯಸ್ತಿಕೆ ಅಗತ್ಯ. ಆದರೆ, ಬಿಟ್ ಕಾಯಿನ್ ವಹಿವಾಟಿನಲ್ಲಿ ಇದರ ಅಗತ್ಯವೇ ಇಲ್ಲ. ಇಲ್ಲಿ ಅನಾವಶ್ಯಕ ಶುಲ್ಕ ಪಾವತಿಸುವ ಅಗತ್ಯವಿಲ್ಲ. ಬಿಟ್ ಕಾಯಿನ್ ಯಾವುದೇ ಒಂದು ದೇಶಕ್ಕೆ ಸೀಮಿತವಾಗದ ಕಾರಣ, ಇದಕ್ಕೆ ವಿಶ್ವದಾದ್ಯಂತ ಏಕ ರೂಪದ ಬೆಲೆಯೇ ಇರುತ್ತದೆ.

ಕ್ರಿಪ್ಟೋಕರೆನ್ಸಿಗಳ ವೈಶಿಷ್ಟ್ಯತೆಗಳು

ಕ್ರಿಪ್ಟೋಕರೆನ್ಸಿಗಳನ್ನು ನಕಲು ಮಾಡಲು ಸಾಧ್ಯವಾಗುವುದಿಲ್ಲ. ಇದನ್ನು ಕೊಳ್ಳುವುದು, ಮಾರುವುದು ಎಲ್ಲವೂ ಆನ್‌ಲೈನ್ ಮೂಲಕವೇ.

ಇಂಟರ್ನೆಟ್ ಮೂಲಕ ಯಾವುದೇ ಭಾಗದಿಂದ ಯಾರಿಗೆ ಬೇಕು ಅವರಿಗೆ ಕೆಲವೇ ನಿಮಿಷಗಳಲ್ಲಿ ಹಣ ಕಳಿಸಲು ಅಥವಾ ಪಡೆಯಲು ಈ ಕರೆನ್ಸಿಗಳು ಬಳಸಬಹುದು.

ಕ್ರಿಸ್ಟೋಕರೆನ್ಸಿಗಳನ್ನು ಬಳಸುವುದರಿಂದ ಮಧ್ಯವರ್ತಿ ಅಗತ್ಯವನ್ನು ನಿವಾರಿಸುತ್ತದೆ, ಹೆಚ್ಚು ಸುರಕ್ಷಿತ, ವೇಗದ ವರ್ಗಾವಣೆಯನ್ನು ನೀಡುತ್ತದೆ.

ಕ್ರಿಪ್ಟೋಕರೆನ್ಸಿಗಳನ್ನು ಕ್ರಿಪ್ಟೋ ಎಕ್ಸ್‌ಚೇಂಜಗಳಲ್ಲಿ ಸ್ಟ್ಯಾಕ್ ಮಾಡಿ, ಫಿಕ್ಸ್ ಬಡ್ಡಿ(Interest) ಕೂಡ ಪಡೆಯಬಹುದು.

ಕ್ರಿಪ್ಟೋಕರೆನ್ಸಿಗಳ ಬೆಲೆಯೂ ಬೇಡಿಕೆ ಮತ್ತು ಪೂರೈಕೆ (Demand and supply) ಆಧಾರದ ಮೇಲೆ ಹೆಚ್ಚು ಕಮ್ಮಿ ಆಗುತ್ತಾ ಇರುತ್ತೆ.

ಕ್ರಿಪ್ಟೋಕರೆನ್ಸಿಗಳನ್ನು ಖರೀದಿಸುವುದು(Buy) ಮತ್ತು ಮಾರುವುದು(sell) ಹೇಗೆ ? 

ಕ್ರಿಪ್ಟೋಕರೆನ್ಸಿಗಳಲ್ಲಿ ಟ್ರೇಡಿಂಗ್ (Buy/Sell) ಮಾಡಬೇಕು ಅಂದರೆ ಕ್ರಿಪ್ಟೋ ಎಕ್ಸ್‌ಚೇಂಜಗಳಲ್ಲಿ ಅಕೌಂಟ್ ಕ್ರಿಯೇಟ್ ಮಾಡಬೇಕು. ಇದರಲ್ಲೇ ನಮ್ಮ ಹಣ ಡಿಪಾಸಿಟ್ ಮಾಡಿ ಕರೆನ್ಸಿಗಳನ್ನು ಖರೀದಿ ಮಾಡಬಹುದು ಮತ್ತು ಯಾವಾಗ ಬೇಕಾದರೂ ಕಾಯಿನ್ ಸೇಲ್ ಮಾಡಿ ಹಣ ವಿಡ್ರಾಲ್ ಮಾಡಿಕೊಳ್ಳಬಹುದು.ಕಾಯಿನ್ ಗಳನ್ನು ಲಾಂಗ್ ಟರ್ಮ್ ಸಲುವಾಗಿ ಕೂಡ ಹೋಲ್ಡ್ ಇಡಬಹುದು.

ಕ್ರಿಪ್ಟೋಕರೆನ್ಸಿಗಳು ವಿಶ್ವದ ಆರ್ಥಿಕ ವ್ಯವಸ್ಥೆಯಲ್ಲಿ ಬಹು ದೊಡ್ಡ ಸ್ವಾಧೀನ ಪಡೆದುಕೊಳ್ಳುತ್ತಾ ಮುಂದುವರೆಯುತ್ತಿವೆ. ದಿನೇ ದಿನೇ ಇವುಗಳ ಜನಪ್ರಿಯತೆ ಹೆಚ್ಚುತ್ತಲೇ ಇದೆ. ಮುಂದಿನ ಫ್ಯೂಚರ್ ಕರೆನ್ಸಿಗಳೆ ಕ್ರಿಪ್ಟೋಕರೆನ್ಸಿಗಳು…

ಜಿಲ್ಲೆ

ರಾಜ್ಯ

error: Content is protected !!