Friday, April 19, 2024

ಹೊಸ ವರ್ಷಕ್ಕೆ ಹೊಸ ಸಿಎಂ.! ಬಿಟ್ ಕಾಯಿನ್ ಸುಳಿಯಲ್ಲಿ ಬೊಮ್ಮಾಯಿ:

ಬೆಳಗಾವಿ (ನ.13):-ಬಿಟ್ ಕಾಯಿನ್ ಪ್ರಕರಣ ರಾಜ್ಯ ರಾಜಕಾರಣದಲ್ಲಿ ವಿವಾದದ ಬಿರುಗಾಳಿ ಸೃಷ್ಟಿಸಿರುವುದು ಪಕ್ಷಕ್ಕೆ ಹಾನಿ ಉಂಟು ಮಾಡುವ ಸಾಧ್ಯತೆ ಕಂಡುಬರುತ್ತಿರುವ ಹಿನ್ನೆಲೆ ಮುಜುಗರವನ್ನು ತಪ್ಪಿಸಲು ಕೇಂದ್ರ ಬಿಜೆಪಿ ವರಿಷ್ಠರು ಈಗಾಗಲೇ ಹೊಸ ನಾಯಕನ ಶೋಧಕ್ಕೆ ಸದ್ದಿಲ್ಲದೆ ಮುಂದಾಗಿರುವುದು ಬೆಳಕಿಗೆ ಬರುತ್ತಿದೆ.

ಒಂದು ವೇಳೆ ಬಿಟ್ ಕಾಯಿನ್ ಪ್ರಕರಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರ ತಲೆದಂಡವಾದರೆ ಪಕ್ಷ, ಸರ್ಕಾರ ಮತ್ತು ಸಂಘ ಪರಿವಾರದ ಜೊತೆ ಸಮನ್ವಯ ಸಾಸುವ ಹಾಗೂ ಯಾವುದೇ ಕಳಂಕವಿಲ್ಲದ ವ್ಯಕ್ತಿಯನ್ನು ಸಿಎಂ ಸ್ಥಾನದಲ್ಲಿ ಕೂರಿಸಲು ಪಕ್ಷದ ವಲಯದಲ್ಲಿ ಚಿಂತನ-ಮಂಥನ ಆರಂಭವಾಗಿದೆ.

ಇದರ ಬೆನ್ನಲ್ಲೇ ಸಂಘ ಪರಿವಾರದ ನಾಯಕರು
ಕಳೆದ ಒಂದು ವಾರದಿಂದ ಸರ್ಕಾರ ಮತ್ತು ಪಕ್ಷವನ್ನು ಸಮರ್ಥವಾಗಿ ಮುನ್ನಡೆಸುವ ಸಚ್ಛಾರಿತ್ರ್ಯ ಹಿನ್ನೆಲೆಯುಳ್ಳ ವ್ಯಕ್ತಿಯ ಹುಡುಕಾಟದಲ್ಲಿ ತೊಡಗಿದ್ದಾರೆ.

ಕೆಲ ದಿನಗಳ ಹಿಂದೆ ಹುಬ್ಬಳ್ಳಿಯಲ್ಲಿ ನಡೆದ ಆರ್ ಎಸ್ ಎಸ್ ಬೈಠಾಕ್‍ನಲ್ಲಿ ಇದರ ಬಗ್ಗೆ ಗಂಭೀರವಾಗಿ ಚರ್ಚೆ ನಡೆದಿದ್ದು, ಸಂಘಪರಿವಾರದ ನಾಯಕರು ಜಾತಿಯ ಅಸ್ತ್ರವನ್ನು ಮಾನದಂಡವಾಗಿ ಇಟ್ಟುಕೊಳ್ಳದೆ,ಗುಜರಾತ್ ಮಾದರಿ ಅನುಸರಿಸಿ ಎಂದು ಸಲಹೆ ಮಾಡಿದ್ದಾರಂತೆ. ಒಂದು ವೇಳೆ ಸಿಎಂ ಬದಲಾದರೆ ಇಡೀ ಸಂಪುಟವನ್ನೇ ಬದಲಾಯಿಸಿ ಯುವ ಮತ್ತು ಕ್ಷೇತ್ರದಲ್ಲಿ ಮತದಾರರ ಜೊತೆ ಉತ್ತಮವಾದ ಒಡನಾಟವನ್ನು ಇಟ್ಟುಕೊಂಡಿರುವ ಶಾಸಕರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕೆಂಬ ಅಭಿಪ್ರಾಯ ವ್ಯಕ್ತವಾಗಿದೆ.

ಗುಜರಾತಿನ ಮುಖ್ಯಮಂತ್ರಿ ವಿಜಯ್ ರೂಪಾನಿ ಮೇಲೆ ಯಾವುದೇ ಭ್ರಷ್ಟಾಚಾರದ ಆರೋಪಗಳು ಇರಲಿಲ್ಲ. ಆದರೂ ವರಿಷ್ಠರು ಸಿಎಂ ಸೇರಿದಂತೆ ಇಡೀ ಸಂಪುಟವನ್ನೇ ಬದಲಾವಣೆ ಮಾಡಿದ್ದರು. ಈಗ ಕರ್ನಾಟಕದಲ್ಲೂ ಇಂಥದ್ದೇ ಒಂದು ಪ್ರಯೋಗವನ್ನು ನಡೆಸಬೇಕೆಂಬ ಅಭಿಪ್ರಾಯ ಸಂಘ ಪರಿವಾರದ ವಲಯದಲ್ಲಿ ವ್ಯಕ್ತವಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ರಾಜೀನಾಮೆ ಮತ್ತೇನು ಕಾರಣ: ಬಿಟ್ ಕಾಯಿನ್ ಪ್ರಕರಣದಲ್ಲಿ ಬಸವರಾಜ ಬೊಮ್ಮಯಿ ಅವರ ರಾಜೀನಾಮೆ ಪಡೆದರೆ, ರಾಷ್ಟ್ರ ಮಟ್ಟದಲ್ಲಿ ಪಕ್ಷಕ್ಕೆ ಮುಖಭಂಗವಾಗಲಿದೆ ಎಂಬುದನ್ನು ಅರಿತಿರುವ ಪಕ್ಷದ ವರಿಷ್ಠರು ಇದಕ್ಕೆ ಬೇರೆಯದ್ದೇ ತಂತ್ರ ರೂಪಿಸಿದ್ದಾರೆ.

ಅದು ಇತ್ತೀಚಿಗೆ ನಡೆದ ಉಪಚುನಾವಣೆಯಲ್ಲಿ ಮುಖ್ಯಮಂತ್ರಿ ಬೊಮ್ಮಯಿ ಅವರ ತವರು ಜಿಲ್ಲೆಯಲ್ಲೇ ಬಿಜೆಪಿಗೆ ಸೋಲು ಉಂಟಾಗಿದ್ದು ಸರ್ಕಾರಕ್ಕೆ ಭಾರಿ ಮುಜುಗರ ಉಂಟು ಮಾಡಿದೆ.

ಇದನ್ನೇ ಅಸ್ತ್ರವಾಗಿಟ್ಡುಕೊಂಡು ಇದೀಗ ಕೇಂದ್ರ ಬಿಜೆಪಿ ವರಿಷ್ಠರು ಬೊಮ್ಮಯಿ ಅವರ ತಲೆದಂಡ ಪಡೆಯುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ವಯಸ್ಸಿನ ಕಾರಣದಿಂದ ಸ್ವಯಂ ಪ್ರೇರಿತರಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಬಿಜೆಪಿ ಹೇಳಲಾಗುತ್ತಿದೆ.

ಆದರೆ ವಾಸ್ತವವಾಗಿ ಯಡಿಯೂರಪ್ಪ ಅವರು ರಾಜೀನಾಮೆ ಕೊಡಲು ಅವರ ಮೇಲೆ ಕೇಳಿ ಬಂದ ಸಾಲು ಸಾಲು ಭ್ರಷ್ಟಾಚಾರದ ಆರೋಪ, ಕುಟುಂಬದವರ ಹಸ್ತಕ್ಷೇಪ, ಆಡಳಿತ ದುರುಪಯೋಗ, ಸೇರಿದಂತೆ ಹತ್ತು ಹಲವು ಕಾರಣಗಳು ಇರುವುದು ಜಗಜಾಹೀರದ ವಿಷಯ.

ಇದೀಗ ಬೊಮ್ಮಯಿ ಅವರನ್ನು ಅದೇ ಹಾದಿಯಲ್ಲಿ ಕೆಳಗಿಸಿದರೆ ಕರ್ನಾಟಕದಲ್ಲಿ ಬಿಜೆಪಿಗೆ ಶಾಶ್ವತವಾಗಿ ಬಾಗಿಲು ಬಂದ್ ಆಗಲಿದೆ ಎಂಬ ಆತಂಕ ವರಿಷ್ಡರನ್ನು ಕಾಡುತ್ತಿದೆ.

ಮನೆ ಒಂದು ಮೂರು ಬಾಗಿಲುಗಳಾಗಿ 2013 ರಲ್ಲಿ ಬಿಜೆಪಿ ಒಡೆದು, ಮೂರು ಹೋಳಾಗಿತ್ತು. ಬಿಜೆಪಿ , ಕೆಜೆಪಿ ಹಾಗೂ ಬಿಎಸ್‍ಆರ್ ಸ್ಥಾಪನೆಯಾದ ಕಾರಣ, ಕಾಂಗ್ರೆಸ್‍ಗೆ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದು ರಾಜ್ಯವನ್ನಾಳಿತು.ಈ ಕಹಿ ಅನುಭವ ಹಾಗೂ ಬಿಜೆಪಿಯಿಂದ ಸಿಡಿದು ಹೊರಹೋಗಿ ಸದ್ಯಕ್ಕೆ ಯಾರೊಬ್ಬರೂ ಹೊಸ ಪಕ್ಷ ಕಟ್ಟುವ ಸ್ಥಿತಿಯಲ್ಲಿ ಇಲ್ಲ.ಇದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿರುವ ವರಿಷ್ಠರು ಅತ್ಯಂತ ಎಚ್ಚರಿಕೆಯಿಂದ ಹೆಜ್ಜೆಗಳನ್ನು ಇಡುತ್ತಿದ್ದಾರೆ.

ಮುಂದಿನ ಸಿ ಎಂ ಗಾದೆ ಯಾರಿಗೆ.?: ದಿನದಿಂದ ದಿನಕ್ಕೆ ಬಿಟ್ ಕಾಯಿನ್ ಪ್ರಕರಣ ಹೊಸ ತಿರುವು ಪಡೆದುಕೊಂಡು ಒಂದು ವೇಳೆ ಬೊಮ್ಮಾಯಿ ಅವರ ತೆಲೆದಂಡವಾದರೆ, ಆ ಸ್ಥಾನಕ್ಕೆ ಹಲವರ ಹೆಸರುಗಳು ಪಕ್ಷದ ವಲಯದಲ್ಲಿ ಕೇಳಿ ಬರುತ್ತೀವೆ.

ಪ್ರಮುಖವಾಗಿ ಮಾಜಿ ಸಿ.ಎಂ. ಜಗದೀಶ್ ಶೆಟ್ಟರ್, ಗಣಿ ಮತ್ತು ಭೂ ವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ, ಇಂಧನ ಸಚಿವ ವಿ.ಸುನಿಲ್ ಕುಮಾರ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ.ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೆಸರುಗಳು ಮುನ್ನಲೆಗೆ ಬಂದಿವೆ.

ಸಚಿವ ಹಾಲಪ್ಪ ಚಿತ್ರ

ಈಗಾಗಲೇ ಸಂಘಪರಿವಾರದ ಪ್ರಮುಖರು ಶೆಟ್ಟರ್ ಜೊತೆಗೆ ಮಾತುಕತೆಯನ್ನು ನಡೆಸಿದ್ದಾರೆ. ಈ ಹಿಂದೆ ಒಂದು ಬಾರಿ ಸಿ.ಎಂ ಆಗಿ ಸಚಿವರಾಗಿ ಆಡಳಿತದ ಅನುಭವ ಜೊತೆಗೆ ಪಕ್ಷ ಮತ್ತು ಅರ್ ಎಸ್ ಎಸ್ ನಾಯಕರ ಜೊತೆಗೆ ಉತ್ತಮ ಸಂಬಂಧವನ್ನು ಇಟ್ಡುಕೊಂಡಿದ್ದಾರೆ. ಸರಳ ಸಜ್ಜನ ಪಕ್ಷ ನಿಷ್ಠೆಯ ಅನುಭಾವಿ ಸಚಿವರಾದ ಮುರಗೇಶ ನಿರಾಣಿ ಹಾಗೂ ಹಾಲಪ್ಪ ಆಚರ್ ಅವರ ಹೆಸರು ಕೊಡ ಉನ್ನತ ಮೂಲಗಳಿಂದ ಕೇಳಿಬರುತ್ತಿವೆ.

ಕಳೆದ ಒಂದು ವಾರದಿಂದ ಜಗದೀಶ್ ಶೆಟ್ಟರ್ ಗೌಪ್ಯವಾಗಿ ಶಾಸಕರು ಮತ್ತು ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸುತ್ತಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಉಳಿದಂತೆ ಸಿ.ಟಿ.ರವಿ, ಸುನೀಲ್‍ಕುಮಾರ್, ಪ್ರಹ್ಲಾದ್ ಜೋಷಿ ಮತ್ತಿತರರ ಹೆಸರುಗಳು ಕೇಳಿಬಂದಿವೆಯಾದರೂ ಶಾಸಕರ ಬೆಂಬಲ ಸಿಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಹೀಗಾಗಿ ಕೊನೆ ಕ್ಷಣದಲ್ಲಿ ಶೆಟ್ಟರ್ ಇಲ್ಲವೇ ನಿರಾಣಿ ಅಥವಾ ಹಾಲಪ್ಪ ಆಚಾರ್ ಅವರಿಗೂ ಅದೃಷ್ಟ ಕುಲಾಯಿಸಿದರೂ ಅಚ್ಚರಿ ಇಲ್ಲ.

 

ಜಿಲ್ಲೆ

ರಾಜ್ಯ

error: Content is protected !!