Thursday, July 18, 2024

ಶಿಕ್ಷಕನ ಮರ್ಮಾಂಗ ಕತ್ತರಿಸಿ ಬರ್ಬರ ಹತ್ಯೆ

ಸುದ್ದಿ ಸದ್ದು ನ್ಯೂಸ್

ಬೀದರ್‌ : ಜಿಲ್ಲೆಯ ಔರಾದ್ ಪಟ್ಟಣದ ಪ್ರಾಥಮಿಕ ಶಾಲೆಯ ಶಿಕ್ಷಕನ ಮರ್ಮಾಂಗವನ್ನು ಕತ್ತರಿಸಿ ಹತ್ಯೆ ಮಾಡಿರುವ ಘಟನೆ ಇತ್ತೀಚೆಗೆ ನಡೆದಿದೆ.

ಭೀಕರವಾಗಿ ಹತ್ಯೆಗೊಳಗಾದ ಶಿಕ್ಷಕ ಮೂಲತ ಭಾಲ್ಕಿ ತಾಲೂಕಿನ ಹಲಬರ್ಗಾ ಗ್ರಾಮದ ವಿಜಯಕುಮಾರ್ ಟೀಳೆಕರ್ (46) ಎಂದು ಗುರುತಿಸಲಾಗಿದೆ.
ವಿಜಯಕುಮಾರ ಔರಾದ್‌ ಪಟ್ಟಣದ ಲಿಡ್ಕರ್ ಕಾಲೋನಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದು ಸಮೀಪದ ಕರಂಜಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಬೀದರ ಮತ್ತು ನಾಂದೇಡ್ ಹೈವೇ ರಸ್ತೆಯಲ್ಲಿ ಇರುವ ರೈತ ಸಂಪರ್ಕ ಕೇಂದ್ರದ ಸಮೀಪ ಅವರ ಮೃತ ದೇಹ ಪತ್ತೆಯಾಗಿದ್ದು ಇದೂವರೆಗೂ ಹತ್ಯೆ ಮಾಡಿದವರು ಯಾರು ಮತ್ತು ಹತ್ಯೆಗೆ ಕಾರಣ ಏನು ಎಂದು ತಿಳಿದು ಬಂದಿಲ್ಲ ಎಂದು ಪೊಲೀಸ ಮೂಲಗಳಿಂದ ತಿಳಿದು ಬಂದಿದೆ. ಈ ಕುರಿತು ಔರಾದ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನಾ ಸ್ಥಳಕ್ಕೆ ಬೀದರ್ ಎಸ್‌ಪಿ ಡಿ ಎಲ್ ನಾಗರಾಜ್, ಎಎಸ್‌ಪಿ ಪೃಥ್ವಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಜಿಲ್ಲೆ

ರಾಜ್ಯ

error: Content is protected !!