Saturday, July 27, 2024

ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ; ಜಗದೀಶ್ ಶೆಟ್ಟರ್‌ಗೆ ಹೈಕಮಾಂಡ್ ಬುಲಾವ್

ಸುದ್ದಿ ಸದ್ದು ನ್ಯೂಸ್  

ಬೆಂಗಳೂರು: ಬಿಟ್ ಕ್ವಾಯಿನ್ ಹಗರಣ ಬೃಹದಾಕಾರವಾಗಿ ಬೆಳೆಯುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಸಿಎಂ ಬದಲಾವಣೆ ಚರ್ಚೆ ಸಾಕಷ್ಟು ಮುನ್ನಲೆಗೆ ಬಂದಿದೆ.

ಇದೇ ಸಂದರ್ಭದಲ್ಲಿ ಹೈಕಮಾಂಡ್ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ದೆಹಲಿಗೆ ಕರೆಸಿಕೊಳ್ಳುವ ಮುಖಾಂತರ ಸಂಚಲನ ಮೂಡಿಸಿದೆ.

ಬಿಟ್ ಕ್ವಾಯಿನ್ ಹಗರಣ ಬಿಜೆಪಿ ಪಾಳಿಯಲ್ಲಿ ಭಾರಿ ಚರ್ಚೆಗೆ ಗ್ರಾಸವಾದ ಕಾರಣ ಈಗ ಸಿಎಂ ಸ್ಥಾನಕ್ಕೂ ಸಂಚಕಾರ ತರುವ ಮಟ್ಟಕ್ಕೆ ಬೆಳೆದಿದೆ.

ಇದೇ ವಿಷಯದನ್ವಯ ಗುರುವಾರ ದೆಹಲಿಗೆ ತೆರಳಿದ್ದ ಸಿಎಂ ಬಸವರಾಜ ಬೊಮ್ಮಾಯಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಬಿಟ್ ಕ್ವಾಯಿನ್ ಹಗರಣದ ವಿಷಯ ಭುಗಿಲೆದ್ದ ಕುರಿತು ಆರೋಪ ಪ್ರತ್ಯಾರೋಪಗಳಿಗೆ ಅವರು ಸ್ಪಷ್ಟನೆ ನೀಡಿದ್ದರು. ಅದರ ಬೆನ್ನಲ್ಲೇ ರಾಜ್ಯದ ಕೆಲ ಬಿಜೆಪಿ ನಾಯಕರು ರಾಜಧಾನಿಯಲ್ಲಿ ಸಿಎಂ ಬದಲಾವಣೆ ಕುರಿತಂತೆ ಸಭೆ ಕೂಡ ನಡೆಸಿದ್ದರು ಎನ್ನಲಾಗಿದೆ. ಅಷ್ಟೇ ಅಲ್ಲದೆ ಇದೀಗ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ತಕ್ಷಣ ದೆಹಲಿಗೆ ಬರುವಂತೆ ಬಿಜೆಪಿ ಹೈಕಮಾಂಡ್ ಕರೆಸಿಕೊಂಡಿದೆ. ಹೈಕಮಾಂಡ್ ಆದೇಶದನ್ವಯ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಇಂದು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಈ ಬೆಳವಣಿಗೆ ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದೆ.

ಹಾನಗಲ್ ಉಪ ಚುನಾವಣೆಯ ಸೋಲು ಮತ್ತು ಬಿಟ್ ಕ್ವಾಯಿನ್ ಹಗರಣದ ಚರ್ಚೆ ಶುರುವಾಗುತ್ತಿದ್ದಂತೆ ಮೂಲ ಬಿಜೆಪಿ ನಾಯಕರು ಸಭೆ ಸೇರಲು‌ ಶುರು ಮಾಡಿದ್ದಾರೆ ಎಂದು ಗೊತ್ತಾಗಿದೆ. ಕರ್ನಾಟಕಕ್ಕೆ ಮೂರನೇ ಮುಖ್ಯಮಂತ್ರಿ ಯಾವಾಗಬೇಕಾದರೂ ಬರಬಹುದು ಎಂದು ರಾಜ್ಯದ ಜನರು ಮಾತನಾಡುತ್ತಿದ್ದಾರೆ

 

ಜಿಲ್ಲೆ

ರಾಜ್ಯ

error: Content is protected !!