Tuesday, September 17, 2024

ಕಡಿಮೆ ಬಂಡವಾಳ ಜೊತೆಗೆ ಅಧಿಕ ಆಧಾಯ ಕೊಡುವ EV ಚಾರ್ಜಿಂಗ್ ಮಾಡಬೇಕೆ ಈ ಮಾಹಿತಿ ನೋಡಿ

ಸುದ್ದಿ ಸದ್ದು ನ್ಯೂಸ್

ಇಂದಿನ ದಿನಮಾನಗಳಲ್ಲಿ ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಗಣನೀಯವಾಗಿ ಹೆಚ್ಚುತ್ತಿರುವ ಕಾರಣ ಜನ ಸಾಮಾನ್ಯರಿಗೆ ಜೀವನ ಮಾಡುವುದು ತುಂಬಾ ಕಷ್ಟವಾಗುತ್ತದೆ.

ಪ್ರಮುಖ ಇಂಧನ ಬಿಕ್ಕಟ್ಟು ಮತ್ತು ಪರಿಸರ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ವಿಶ್ವದಾದ್ಯಂತ ವಾಹನ ಉದ್ಯಮದಲ್ಲಿ ದೈತ್ಯಾಕಾರದ ಬದಲಾವಣೆಗಳು ನಡೆದಿವೆ ಹೊಸ ಶಕ್ತಿ ವಾಹನಗಳು ವಿವಿಧ ದೇಶಗಳ ಮುಖ್ಯ ಅಭಿವೃದ್ಧಿ ಕಾರ್ಯತಂತ್ರವಾಗಿ ಮಾರ್ಪಟ್ಟಿವೆ ಮತ್ತು ತಂತ್ರಜ್ಞಾನ ಸಂಶೋಧನೆ ಮತ್ತು ಅಭಿವೃದ್ಧಿಯ ವಿನ್ಯಾಸ ಮತ್ತು ಕೈಗಾರಿಕೀಕರಣದ ಪ್ರಕ್ರಿಯೆಯನ್ನು ನಿರಂತರವಾಗಿ ಉತ್ತೇಜಿಸಲಾಗುತ್ತದೆ

ನಾವು ಪೆಟ್ರೋಲ್ ಡಿಸೇಲ್ ಬಳಸುವ ಬದಲು ಚಾರ್ಜಿಂಗ್ ವಾಹನಗಳನ್ನು ಬಳಸುವ ಮೂಲಕ ಹಣದ ಉಳಿತಾಯದ ಜೊತೆಗೆ ಪರಿಸರ ಸಂರಕ್ಷಣೆ ಮಾಡಬಹುದಾಗಿದೆ ಇದು ಜಾಗತಿಕ ಮಟ್ಟದಲ್ಲಿ ಚಾರ್ಜಿಂಗ್ ವಾಹನದ ಬಳಕೆ ಬಗ್ಗೆ ಮಾಹಿತಿ ನೀಡಲಾಗುತ್ತಿದೆ ನಾವು ಈ ಲೇಖನದ ಮೂಲಕ ಈ ವಿ ಚಾರ್ಜಿಂಗ್ ಸ್ಟೇಷನ್ ಬಗ್ಗೆ ತಿಳಿದುಕೊಳ್ಳೋಣ.

ಪೆಟ್ರೋಲ್ ಡೀಸೆಲ್‌ಗಳ ಬೆಲೆ ಗಣನೀಯವಾಗಿ ಏರುತ್ತಿರುವದರಿಂದ ಅನೇಕ ದೇಶಗಳಲ್ಲಿ ಎಲ್ಲರೂ ಎಲೆಕ್ಟ್ರಾನಿಕ್ ವಾಹನಗಳನ್ನು ಖರೀದಿ ಮಾಡುತ್ತಿದ್ದಾರೆ ಅದರಲ್ಲಿ ನಮ್ಮ ಭಾರತವು ಒಂದು ಪೆಟ್ರೋಲ್ ಮತ್ತು ಡೀಸೆಲ್‌ಗಳ ಬೆಲೆ ದಿನದಿಂದ ದಿನಕ್ಕೆ ಬೆಲೆ ಗಗನಕ್ಕೇರುತ್ತಿದೆ ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗಿದೆ ಈ ಕಷ್ಟದಿಂದ ಹೊರಬರಲು ಸರ್ಕಾರ ಎಲೆಕ್ಟ್ರಿಕ್ ವಾಹನ ಖರೀದಿ ಮಾಡಲು ಉತ್ತೇಜಿಸುತ್ತದೆ ಇದರಿಂದ ಅನೇಕ ಕಂಪನಿಗಳು ಎಲೆಕ್ಟ್ರಿಕ್ ವಾಹನ ತಯಾರಿಸುತ್ತಿದೆ ಈ ಸಂದರ್ಭದಲ್ಲಿ ಇಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಸ್ಟೇಷನ್ ಮಾಡಿದರೆ ಕಡಿಮೆ ಆಧಾರದಲ್ಲಿ ತುಂಬಾ ಲಾಭ ಬರುತ್ತದೆ ಹೀಗಾಗಿ ಮುಂದೆ ಭಾರತದಲ್ಲಿ ಎಲೆಕ್ಟ್ರಾನಿಕ್ ವಾಹನಗಳ ಸಂಖ್ಯೆ ಜಾಸ್ತಿಯಾಗುತ್ತದೆ.

ಇಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಸ್ಟೇಷನ್ ಎಂದರೆ ಇದು ಕೂಡ ಪೆಟ್ರೋಲ್ ಪಂಪ್ ಹಾಗೆ ಕಾರ್ಯ ನಿರ್ವಹಿಸುತ್ತದೆ ಅಂದರೆ ಪೆಟ್ರೋಲ್ ಪಂಪ್ಗಳಲ್ಲಿ ಪೆಟ್ರೋಲ್ ಡೀಸೆಲ್ ಗಳನ್ನು ಹಾಕುತ್ತಾರೆ ಆದರೆ ಈ ವಿ ಚಾರ್ಜಿಂಗ್ ಸ್ಟೇಷನ್ ಗಳಲ್ಲಿ ವಾಹನಗಳಿಗೆ ಚಾರ್ಜಿಂಗ್ ಮಾಡಲಾಗುತ್ತದೆ ಈ ವಿ ಚಾರ್ಜಿಂಗ್ ಅನ್ನು ಪೆಟ್ರೋಲ್ ಪಂಪ್ ಬಸ್ ಸ್ಟ್ಯಾಂಡ್ ಹೈವೇ ರೋಡ್ ಪಕ್ಕದಲ್ಲಿ ಮಾಡಬಹುದು .

ಈ ವಿ ಚಾರ್ಜಿಂಗ್ ಸ್ಟೇಷನ್ ಗಳಲ್ಲಿ ಮೂರು ವಿಧಗಳು ಇರುತ್ತದೆ ಇಲೆಕ್ಟ್ರಿಕ್ ವೆಹಿಕಲ್ ಸ್ಟೇಷನ್ ಅನ್ನು ಮಾಲ್ ಮತ್ತು ಬಸ್ ಸ್ಟ್ಯಾಂಡ್‌ಗಳಲ್ಲಿ ಈ ವಿ ಚಾರ್ಜಿಂಗ್ ಸ್ಟೇಷನ್ ಮಾಡಬಹುದು ಇದು ಇಲೆಕ್ಟ್ರಿಕ್ ವೆಹಿಕಲ್ ಸ್ಟೇಷನ್‌ನ ಮೊದಲನೇ ವಿಧವಾಗಿದೆ ಹಾಗೆಯೇ ಗವರ್ನಮೆಂಟ್ ಆಫೀಸ್‌ಗಳಲ್ಲಿ ಇಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಸ್ಟೇಷನ್ ಮಾಡುವುದು ಎರಡನೇ ವಿಧವಾಗಿದೆ ಹಾಗೆಯೇ ಹೈವೆ ಹತ್ತಿರ ಇಲೆಕ್ಟ್ರಿಕ್ ವೆಹಿಕಲ್ ಸ್ಟೇಷನ್ ಮಾಡುವುದು ಮೂರನೇ ವಿಧವಾಗಿದೆ

ಈ ಬಿಸ್ನೆಸ್ ಮಾಡಲು ಮಿನಿಸ್ಟರಿ ಆಫ್ ಪವರ್ ಗವರ್ನಮೆಂಟ್ ಆಫ್ ಇಂಡಿಯಾದಲ್ಲಿ ಅಪ್ಲೈ ಮಾಡಬಹುದು ಅನೇಕ ಕಂಪನಿಗಳು ಈ ವಿ ಚಾರ್ಜಿಂಗ್ ಫ್ರೆಂಚಸಿ ನೀಡುತ್ತಿದೆ ಇಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಸ್ಟೇಷನ್ ಸ್ವಂತ ಬಿಸ್ನೆಸ್ ಮಾಡಲು ಕನಿಷ್ಟ ನಲವತ್ತು ಲಕ್ಷ ಬೇಕಾಗುತ್ತದೆ ಫ್ರೆಂಚಸಿಯಲ್ಲಿ ಮಾಡಿದರೆ ಹತ್ತು ಲಕ್ಷ ಇನ್ವೆಸ್ಟ್ ಮಾಡಬೇಕಾಗುತ್ತದೆ ಈ ವಿ ಚಾರ್ಜ್ ಸ್ಟೇಷನ್ ಮಾಡಲು ಸರ್ಕಾರ ಸಬ್ಸಿಡಿ ಕೊಡುತ್ತದೆ ಈ ಬಿಸ್ನೆಸ್ ಮಾಡುವುದರಿಂದ ಯಾವ ರೀತಿಯ ಸ್ಟೇಷನ್ ಎಂಬುದರ ಬಗ್ಗೆ ಲಾಭಗಳಿಸಬಹುದು ತಿಂಗಳಿಗೇ ಲಕ್ಷಗಟ್ಟಲೆ ಆದಾಯ ಗಳಿಸಬಹುದು ಈ ವಿ ಚಾರ್ಜಿಂಗ್ ಸ್ಟೇಷನ್ ಮಾಡುವುದರಿಂದ ತುಂಬಾ ಲಾಭಗಳಿಸಬಹುದು ಆಸಕ್ತರು ಗಮನಹರಿಸಬೇಕು……

 

ಜಿಲ್ಲೆ

ರಾಜ್ಯ

error: Content is protected !!