Saturday, May 25, 2024

ಸಿನಿರಂಗದ ಜರ್ನಿಯಲ್ಲಿ ಎಷ್ಟು ಅಫೇರ್ಸ್ ಇತ್ತೋ ನನಗೇ ಗೊತ್ತಿಲ್ಲ ಕಣ್ರೀ: ವಿ .ರವಿಚಂದ್ರನ್

ಸುದ್ದಿ ಸುದ್ದಿ  ನ್ಯೂಸ್

ಬೆಂಗಳೂರು: ಕ್ರೇಜಿ ಸ್ಟಾರ್ ವ್ಹಿ ರವಿಚಂದ್ರನ್ ಸಿನಿಮಾ ಮತ್ತು ಸಿನಿಮಾದ ಹಾಡುಗಳಿಂದ ಹೆಚ್ಚು ಖ್ಯಾತಿ ಗಳಿಸಿದವರು. ಅದರಲ್ಲೂ ಅವರು ತಮ್ಮ ಚಿತ್ರದಲ್ಲಿ ಹೀರೋಯಿನ್‌ಗಳನ್ನು ತೆರೆಯ ಮೇಲೆ ತೋರಿಸುವ ರೀತಿಗೆ ಅವರ ಅಭಿಮಾನಿಗಳಿಗಲ್ಲದೆ ಚಿತ್ರರಸಿಕರು ಸಹ ಫಿದಾ ಆಗಿದ್ದಾರೆ.

ರಣಧೀರ ಚಲನಚಿತ್ರದಲ್ಲಿ ಜೂಹಿ ಚಾವ್ಲಾ, ರಸಿಕ ಚಲನಚಿತ್ರದಲ್ಲಿ ಖುಷ್ಬು, ಪ್ರೀತ್ಸೋದು ತಪ್ಪಾ ಚಲನಚಿತ್ರದಲ್ಲಿ ಶಿಲ್ಪಾಶೆಟ್ಟಿ ಅವರನ್ನು ನಟಿಸುವ ಮೂಲಕ ಮೂನ್ ಮೂನ್ ಸೇನ್, ಮಧುಬಾಲ, ಮೀನಾ, ರೋಜಾ, ಭಾನುಪ್ರಿಯ, ಸೇರಿದಂತೆ ಇನ್ನೂ ಅನೇಕ ಹೆಸರಾಂತ ಪರಭಾಷಾ ನಾಯಕಿಯರನ್ನು ಕನ್ನಡಕ್ಕೆ ತಂದಿದ್ದು ವಿ.ರವಿಚಂದ್ರನ್.

ಇವರು ಇತ್ತೀಚೆಗೆ ಜೀ ಕನ್ನಡ ವಾಹಿನಿಯ ಹೆಸರಾಂತ “ಜೀ ಕುಟುಂಬ ಅವಾರ್ಡ್ಸ್” ಕಾರ್ಯಕ್ರಮದಲ್ಲಿ ಮನಬಿಚ್ಚಿ ಮಾತನಾಡಿರುವ ರವಿಚಂದ್ರನ್ ಅವರು “50 ವರ್ಷದ ನನ್ನ ಸಿನಿಮಾರಂಗದ ಜರ್ನಿಯಲ್ಲಿ ಎಷ್ಟು ಅಫೇರ್ಸ್ ಇತ್ತೋ ನನಗೇ ಗೊತ್ತಿಲ್ಲ. ಒಂದಲ್ಲಾ, ಎರಡಲ್ಲಾ ನಾನು ಮಾಡಿದ 100 ಚಿತ್ರದಲ್ಲೂ ಅಫೇರ್ಸ್ ಇತ್ತು. ಪ್ರತಿ ಸಿನಿಮಾ ಜೊತೆಗೂ ನನಗೆ ಒಂದು ಅಫೇರ್ ಇತ್ತು” ಎಂದು ಹೇಳುವುದರೊಂದಿಗೆ ಪ್ರತಿಯೊಬ್ಬರಿಗೂ ಒಂದು ಅಫೇರ್ ಇರಲೇಬೇಕು. ಅಗಲೇ ನಿಜವಾದ ಫ್ಯಾಮಿಲಿ ಪ್ರೀತಿ ನಿಮಗೆ ಅರ್ಥ ಆಗುವುದು ಎಂದ ಅವರು ಅಫೇರ್ ಇಲ್ಲದಿದ್ದರೆ ನಿಮ್ಮ ಜೀವನ ವೇಸ್ಟ್ ಎಂದು ತಿಳಿಸಿದ್ದಾರೆ.

ಪಕ್ಕದಲ್ಲಿರುವ ಹುಡುಗಿಗೆ ಸುಲಭವಾಗಿ ಐ ಲವ ಯೂ ಹೇಳಿಬಿಡ್ತೀವಿ ಆದರೆ ಹೆಂಡತಿಗೆ ಐ ಲವ್ ಯೂ ಹೇಳೋದು ಕಷ್ಟ. ನಾವು ನಮ್ಮ ಜೀವನದಲ್ಲಿ ಹೇಗೆ ಆಕ್ಟ್ ಮಾಡುತ್ತೇವೆ ಅನ್ನುವುದು ಮುಖ್ಯ ಅಲ್ಲ. ಹೇಗೆ ರಿಯಾಕ್ಟ್ ಮಾಡುತ್ತೇವೆ ಅನ್ನುವುದುದು ಬಹು ಮುಖ್ಯ ಎಂದು ರವಿಚಂದ್ರನ್ ತಿಳಿಸಿದ್ದಾರೆ.

ಜಿಲ್ಲೆ

ರಾಜ್ಯ

error: Content is protected !!