Tuesday, September 17, 2024

ನಟಿ ಕಂಗನಾ ರಾಣಾವತ್ ವಿರುದ್ದ ಸ್ವಯಂ ಪ್ರೇರಿತವಾಗಿ ದೇಶ ದ್ರೋಹ ಪ್ರಕರಣ ದಾಖಲಿಸಲು ಭೀಮನಗೌಡ ಪರಗೊಂಡ ಒತ್ತಾಯ

ನಟಿ ಕಂಗನಾ ರಾಣಾವತ್ ವಿರುದ್ದ ಸ್ವಯಂ ಪ್ರೇರಿತವಾಗಿ ದೇಶ ದ್ರೋಹ ಪ್ರಕರಣ ದಾಖಲಿಸಲು ಕೆಪಿಸಿಸಿ ಕಾನೂನು ವಿಭಾಗದ ಕಾರ್ಯದರ್ಶಿ ಹಾಗೂ ನ್ಯಾಯವಾದಿ ಭೀಮನಗೌಡ ಪರಗೊಂಡ ಒತ್ತಾಯ.

2-3 ದಿನಗಳ ಹಿಂದೆಯಷ್ಟೇ ಒಕ್ಕೂಟದ ಅತಿ ದೊಡ್ಡ ಪ್ರಶಸ್ತಿಗಳಲ್ಲಿ ಪ್ರಮುಖವಾದ ಪದ್ಮಶ್ರೀ ಪ್ರಶಸ್ತಿ ಪಡೆದ ಬಾಲಿವುಡ್ ನಟಿ ಕಂಗನಾ ರಾಣಾವತ್ ಅವರು ನವೆಂಬರ್ 11 ರಂದು 1947ರಲ್ಲಿ ದೇಶಕ್ಕೆ ಸಿಕ್ಕಿರೋದು ಭಿಕ್ಷೆ. ಆದ್ರೆ, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿರೋದು 2014 ರಲ್ಲಿ ಎನ್ನುವ ಮೂಲಕ ಒಕ್ಕೂಟದ (ದೇಶ )ಸ್ವಾತಂತ್ರ್ಯ ಹೋರಾಟಕ್ಕೆ, ಸ್ವಾತಂತ್ರ್ಯ ಹೋರಾಟಗಾರರಿಗೆ, ಒಕ್ಕೂಟದ (ದೇಶ) ವಿರುದ್ಧ ಯಾರನ್ನೋ ಮೆಚ್ಚಿಸಲು ನಾಲಿಗೆ ಹರಿಬಿಟ್ಟಿರುವ ಕಂಗನಾ ರಾಣಾವತ್ ಮೇಲೆ ದೇಶ ದ್ರೋಹ ಪ್ರಕರಣ ದಾಖಲಿಸಿ,ಕೂಡಲೇ ಬಂಧಿಸಬೇಕು ಮತ್ತು ಇತ್ತಿಚ್ಚಿಗೆ ಕಂಗನಾ ರಾಣಾವತ್‌‌ಗೆ ನೀಡಿರುವ ಪದ್ಮಶ್ರೀ ಪ್ರಶಸ್ತಿಯನ್ನು ಹಿಂದಕ್ಕೆ ಪಡೆಯಬೇಕು ಎಂದು ಕೆಪಿಸಿಸಿ ಕಾನೂನು ವಿಭಾಗದ ಕಾರ್ಯದರ್ಶಿ ಭೀಮನಗೌಡ ಪರಗೊಂಡ ಒತ್ತಾಯಿಸಿದ್ದಾರೆ.

ಒಕ್ಕೂಟದ ಅಧಿನದಲ್ಲಿರುವ ಎಲ್ಲಾ ರಾಜ್ಯಗಳು ಮತ್ತು ಅಲ್ಲಿನ ನಿವಾಸಿಗಳಿಗೆ ಸಂವಿಧಾನವು ವಾಕ್ ಸ್ವಾತಂತ್ರ ನೀಡಿದೆ. ಆದ್ರೆ, ಸ್ವೇಚ್ಚಾಚರಕ್ಕೆ ನಿರ್ಭಂದ ವಿಧಿಸಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಟೀಕಿಸಿದರೆ ಅಂತವರ ಮೇಲೆ IT, ED ಮೂಲಕ ದಾಳಿ ಮಾಡಿಸುವ, ಸುಳ್ಳು ಪ್ರಕರಣದಲ್ಲಿ ಸಿಕ್ಕಿಸುವ, ಜೈಲಿನಲ್ಲಿ ಕೊಳೆಯುವಂತೆ ಮಾಡುವ ಮಾತ್ರವಲ್ಲ ಅವರ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸುವ ಕೆಲಸ ನಡೆದಿದೆ. ಆದರೆ, ಉದ್ದೇಶಪೂರ್ವಕವಾಗಿ, ಬ್ರಿಟಿಷರ ಆಡಳಿತದ ವಿರುದ್ಧ ಹೋರಾಟ ಮಾಡಿದ ಸ್ವಾತಂತ್ರ್ಯ ಹೋರಾಟಗಾರನನ್ನು ಅವಮಾನಿಸಿದರು, ಕಡು ಟೀಕೆ ಮಾಡಿದ್ರು, ಅಂತವರ ವಿರುದ್ಧ ಕೇಂದ್ರ ಮತ್ತು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕೇಂದ್ರ ಮತ್ತು ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರಗಳಿಗೆ ನಿಜವಾಗಿಯೂ ದೇಶದಬಗ್ಗೆ ಹೆಮ್ಮೆ, ಗೌರವ, ಅಭಿಮಾನ ಮತ್ತು ದೇಶಪ್ರೇಮ ಇದ್ದಿದ್ದರೆ ಕೂಡಲೇ ಕಂಗನಾ ರಾಣಾವತ್ ಹೇಳಿಕೆಯ ಆಧಾರದ ಮೇಲೆ ಸೂಕ್ತ ತನಿಖೆ ನಡೆಸಿ, ದೇಶದ್ರೋಹ ಪ್ರಕರಣ ದಾಖಲಿಸಬೇಕು ಹಾಗೂ ಇದು ಮುಂದಿನ ದಿನಗಳಲ್ಲಿ ದೇಶದ ವಿರುದ್ಧ,ದೇಶದ ಸ್ವಾತಂತ್ರ್ಯಕ್ಕಾಗಿ,ದೇಶಕ್ಕಾಗಿ, ದೇಶದ ಆಬ್ಯು ದಯಕ್ಕಾಗಿ ಶ್ರಮಸಿದ ಮಹಾತ್ಮಾರನ್ನು, ಹೋರಾಟಗಾರನ್ನು ಟೀಕೆ ಮಾಡುವವರ ಎಚ್ಚರಿಕೆಯಿಂದ ಇರುತ್ತಾರೆ ಇಲ್ಲವಾದ್ರೆ ಯಥಾಸ್ಥಿತಿ ಹೀಗೆ ಮುಂದುವರೆಸಿಕೊಂಡು ಹೊರಟರೆ ಭವಿಷ್ಯದ ಜನಾಂಗಕ್ಕೆ ಕೆಟ್ಟ ಸಂದೇಶ ನೀಡಿದಂತೆ ಆಗುತ್ತದೆ ಎಂದು ಕೆಪಿಸಿಸಿ ಕಾನೂನು ವಿಭಾಗದ ಕಾರ್ಯದರ್ಶಿ ಹಾಗೂ ನ್ಯಾಯವಾದಿ ಭೀಮನಗೌಡ ಪರಗೊಂಡ ಅವರು ಆತಂಕ ವ್ಯಕ್ತ ಪಡಿಸಿದ್ದಾರೆ.

ಜಿಲ್ಲೆ

ರಾಜ್ಯ

error: Content is protected !!