Saturday, July 27, 2024

ಕಾಂಗ್ರೆಸ್ ಆಧಾರ ರಹಿತ ಆರೋಪದಿಂದ ಬೇಜವಾಬ್ದಾರಿ ಪಕ್ಷವಾಗಿದೆ : ಶೆಟ್ಟರ್

ಹುಬ್ಬಳ್ಳಿ (ಅ.11): ಬಿಟ್ ಕಾಯಿನ್ ವಿಚಾರದಲ್ಲಿ ಬಿಜೆಪಿ ನಾಯಕರ ಮೇಲೆ ಕಾಂಗ್ರೆಸ್ ಆಧಾರ ರಹಿತ ಆರೋಪ ಸರಿಯಲ್ಲ. ಈ ರೀತಿ ಆಧಾರ ರಹಿತ ಆರೋಪ ಮಾಡುವುದರಿಂದ ಕಾಂಗ್ರೆಸ್ ಪಕ್ಷ ಬೇಜವಾಬ್ದಾರಿ ರಾಜಕೀಯ ಪಕ್ಷ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ರಾಜಕಾರಣ ಸಲುವಾಗಿ ಈ ರೀತಿ ಆರೋಪ ಸರಿಯಲ್ಲ. ಸರಿಯಾದ ದಾಖಲೆಗಳಿದ್ದರೆ ಬಿಡುಗಡೆ ಮಾಡಿ. ಯಾರೋ ಮಾಡ್ತಾರೆ ಎನ್ನುವ ಸಲುವಾಗಿ, ಬೇಜಾವಾಬ್ದಾರಿ ಹೇಳಿಕೆ ನೀಡುವುದು ಸರಿಯಲ್ಲ.
ಈ ರೀತಿ ಆರೋಪ ಮಾಡೋದು, ರಾಜಕೀಯ ಪಕ್ಷಕ್ಕೆ ಒಳ್ಳೆಯದಲ್ಲ ಎಂದರು.

ಚಾರ್ಜ್ ಶೀಟ್ ಹಾಕಿರುವುದರಲ್ಲಿ ಕಾಂಗ್ರೆಸ್ ನಾಯಕರೇ ಹೆಸರೇ ಬಂದಿದೆ‌. ಅದಕ್ಕೇ ನೀವು ಏನು ಉತ್ತರ ಕೊಡ್ತೀರಿ ಎಂದು ಕೈ ನಾಯಕರಿಗೆ ಶೆಟ್ಟರ್ ಪ್ರಶ್ನಿಸಿದರು.

ಬಿಜೆಪಿ ನಾಯಕರ ಮೇಲೆ ನಿರಾದಾರವಾಗಿ ಆರೋಪ ಮಾಡುವುದು ತಪ್ಪು. ಅದಕ್ಕೆ ಏನಾದರು ಸಾಕ್ಷಿ ಪುರಾವೆಗಳಿದ್ದರೆ ಹಾಜರು ಮಾಡಿ ತನಿಖೆ ಆಗಲಿ.
ಅವಸರ ಯಾಕೆ.? ಸಾಕ್ಷಿ ಪುರಾವೆ ಇದ್ದರೆ ಹಾಜರು ಪಡಿಸಿ. ಬೇರೆ ಬೇರೆ ಸರ್ಕಾರ ಇದ್ದಾಗಲೂ ಸಿಬಿಐ ಗೆ ಸಾಕಷ್ಟು ಕೇಸ್ ತನಿಖೆ ಆಗಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ಪತ್ರ ವ್ಯವಹಾರ ಇರುತ್ತದೆ. ಅದನ್ನೇ ಇಟ್ಟುಕೊಂಡು ನೀವು ಅಲಿಗೇಷನ್ ಮಾಡ್ತೀರಾ..? ಎಂದ ಅವರು, ಎಲ್ಲರ ಬಗ್ಗೆ ಅನುಮಾನ ವ್ಯಕ್ತಪಡಿಸುವುದೆ ನಿಮ್ಮ ಡ್ಯೂಟಿ ಆಗಿದೆ. ಅಧಾರ ರಹಿತ ಆರೋಪ ಮಾಡುವ ಕಾಂಗ್ರೆಸ್ ಬೇಜಾವಾಬ್ದಾರಿ ಪಕ್ಷ ಎಂದು ಅವರು ವ್ಯಂಗ್ಯವಾಡಿದರು.

ಸಿಎಂ ದೆಹಲಿ ಪ್ರವಾಸದ ಕುರಿತು ಮಾತನಾಡಿದ ಅವರು, ಬಿಟ್ ಕಾಯಿನ್ ಸಲುವಾಗಿ ಸಿಎಂ ದೆಹಲಿಗೆ ಹೋಗಿಲ್ಲ.
ಹಲವು ನೀರಾವರಿ ಯೋಜನೆಗಳನ್ನ ಚರ್ಚೆ ಮಾಡಲು ದೆಹಲಿ ಹೋಗಿದ್ದಾರೆ.ಇದನ್ನು ಕಾಂಗ್ರೆಸ್ ಬೇರೆ ಅರ್ಥ ಕಲ್ಪಿಸುವುದು ಸರಿಯಲ್ಲ ಎಂದರು.

 

ಜಿಲ್ಲೆ

ರಾಜ್ಯ

error: Content is protected !!