Friday, September 13, 2024

ಏನಿದು…! ಗದಗ ಪೋಲಿಸರು ಕೊಂದೇ ಬಿಟ್ರಾ.. ಅವನ್ನ….!!??

ಇದೇ ನವೆಂಬರ್ 04 ರಂದು ಗದಗ ಪೋಲಿಸ್ ಠಾಣೆಯಿಂದ ಅನಸಮ್ಮನ ಮಗ ಸಂತೋಷನಿಗೆ ಮಧ್ಯಾಹ್ನ ೨ ಗಂಟೆಯ ವೇಳೆಗೆ ಕರೆ ಬರುತ್ತೆ. ತಾಯಿಗೆ ಹೋಗಿ ಬರುವೆ ಎಂದು ಮಾತ್ರ ಹೇಳಿ ಗದಗ ಪೋಲಿಸ್ ಸ್ಟೇಶನ್ ಗೆ ಹೋದ ಸಂತೋಷ. ಆದರೆ ಸಂಜೆ ಮಾತ್ರ ತಾಯಿಗೆ ಪೋಲಿಸರಿಂದ ಕರೆ ಬಂತು.! “ಜಿಲ್ಲಾಸ್ಪತ್ರೆಗೆ ಬನ್ನಿ” ಅಂತಾ ಒಮ್ಮೆಗೇ ಸಂಜೆ ಹೊತ್ತಿಗೆ ಪೋಲಿಸ್ ಕಾಲ್.! ತಾಯಿ ಎದ್ದೆನೋ.. ಬಿದ್ದೆನೋ.. ಅಂತಾ ಓಡಿ ಗದಗ ಜಿಲ್ಲಾ ಆಸ್ಪತ್ರೆಗೆ ಹೋಗಿ ನೋಡಿದರೆ.. ಅನಸಮ್ಮನ ಮಗಾ ಸಂತೋಷ ಹೆಣವಾಗಿ ಬಿದ್ದಿದ್ದ..!!!

ತಾಯಿಯ ಕರುಳು ಎಷ್ಟೊಂದು ಚುರ್ ಎಂದು ನೋಂದಿರಬಹುದು…!! ಊಹೆ ಮಾಡಿಕೊಳ್ಳಲೂ ಆಗದ ಮಾತಿದು. ತಾಯಿ ಅನಸಮ್ಮ ಗೋಳೋ ಎಂದು ಅಳುತ್ತ ಜನರ ಮುಂದೆ ತನ್ನ ಅಸಹಾಯಕತೆಯ ಗೋಳನ್ನು ತೋಡಿಕೊಂಡಿದ್ದಾಳೆ. ಆದರ್ಶ ನಗರದ ಸಂತೋಷ ಎಂಬುವನು ಪೋಲಿಸ್ ಕಸ್ಟಡಿಯಲ್ಲಿ ಈ ರೀತಿ ಹೆಣವಾದ ಕಥೆಯೇ ಒಂದು ವ್ಯಥೆ.! ಆದರೆ ಇಲ್ಲಿ ನಡೆದ ಅಸಲೀಯತ್ತುಗಳು ಏನೇನು ಅನ್ನೋದನ್ನ ಗದಗ ಬೆಟಗೇರಿ ಪೋಲಿಸರನ್ನೇ ಬಲವಾಗಿ ವಿಚಾರಣೆ ಮಾಡುವ ಮೂಲಕ ಮಾತ್ರ ತಿಳಿಯಬಹುದು. ಏಕೆಂದರೆ ಅಲ್ಲಿನ ಆ ವೇಳೆ ಘಟಿಸಿದ ಘಟನೆಗಳು.. ಆ ನೈಜ ವೃತ್ತಾಂತ ಗದಗ ಬೆಟಗೇರಿ ಪೋಲಿಸರಿಗೆ ಮಾತ್ರ ಗೊತ್ತಿದೆ.!

ಗದಗ ಬೆಟಗೇರಿಯ ಜನರು ಬಹಳ ಗುಸು ಗುಸು ಮಾತಾಡುತ್ತಿದ್ದು.. ಈ ಅನಿರೀಕ್ಷಿತವಾದ ಅಚಾನಕ್ ಸಾವು ದಿಡೀರ್ ಹೇಗೆ ಸಂಭವಿಸಿತು..!!?? ಇದು ಗದಗ ಬೆಟಗೇರಿ ಜನರ ಪ್ರಶ್ನೆ..! ಜನರಲ್ಲಿ ಅನೇಕ ಊಹಾತ್ಮಕ ಧ್ವನಿ ಪ್ರತಿಧ್ವನಿಸುತ್ತಿದೆ. ಪೋಲಿಸರು ತಮ್ಮ ಅಚಾತುರ್ಯತೆಯಿಂದ ಸಂತೋಷ ಸಾಯಲು ಕಾರಣ ಇರಬಹುದೆಂದು.. ಅಲ್ಲಲ್ಲಿ ಕೇಳಿಬರುವ ಧ್ವನಿ..!! ಈ ಧ್ವನಿಗಳು ದಿನಕ್ಕೊಂದು ತಿರುವು ಕೂಡಾ ಪಡೆದುಕೊಳ್ಳುತ್ತಿರುವುದೂ ಈಗ ಗುಟ್ಟಾಗಿ ಉಳಿದ ವಿಷಯವಲ್ಲ.!

ಸಂತೋಷನ ಮನೆಯವರ ಪ್ರಕಾರ ಅವನಿಗೆ ಯಾವ ಕಾಯಿಲೆಗಳೂ ಇರಲಿಲ್ಲ. ಪಿಟ್ಸ್ ರೋಗವಂತೂ ಇರಲೇ ಇಲ್ಲ.! ಆದರೆ ಪೋಲೀಸರು ಎದೆ ನೋವಿನಿಂದ ಸಾವು ಸಂಭವಿಸಿದೆ.. ಎಂದು ಹೇಳಿದ್ದು ಅವರನ್ನು ಸಾಗ ಹಾಕಲು ಹೇಳಿದ್ದು ಅಂತಾ ಗೊತ್ತಾಗುವುದೂ ಆಗಿದೆ. ಏಕೆಂದರೆ ಸಂತೋಷ ಬಹಳ ಆರೋಗ್ಯವಂತನಾಗಿಯೇ ಇದ್ದ..ಆತನಿಗೆ ಯಾವ ಕಾಯಿಗಳೂ ಇರಲಿಲ್ಲ. ಹೀಗೆ ಆರೋಗ್ಯವಾಗಿದ್ದವನನ್ನು ಪೋಲೀಸರು ಕರೆದು ಕೂಡಲೇ ಸತ್ತಿದ್ದಾನೆ ಬನ್ನಿ ಎಂದರೆ ಏನಿದರ ಅರ್ಥ..!!?

ಮೃತ ಯುವಕ ಸಂತೋಷ ಭಾವಚಿತ್ರ

ಮತ್ತು ಮುಂದೆ ಅಂತ್ಯಕ್ರಿಯೆ ಮಾಡಿದ ಹಾಗೂ ಪೋಸ್ಟ್ ಮಾರ್ಟಮ್ ಮಾಡಿದ್ದು, ಮೊಬೈಲ್ ನ್ನು ಪೋಲೀಸರು ತಮ್ಮ ಹತ್ತಿರವೇ ಎರಡು ದಿನ ಇಟ್ಟುಕೊಂಡಿದ್ದು ಯಾಕೆ? ಆ ವೇಳೆ ಸಂತೋಷನ ಮನೆಯವರಿಗೆ ಮೊಬೈಲ್ ಕಳೆದಿದೆ ಅಂತಾ ಯಾಕೆ ಹೇಳಿದರು..!!? ಹಾಗೇ ಎರಡು ದಿನಗಳ ನಂತರ (ನವೆಂಬರ್ 6 ರವರೆಗೆ) ಅದೇ ಮೊಬೈಲ್ ನ್ನು ಸಂತೋಷನ ಕಡೆಯವರಿಗೇ ಕೊಟ್ಟರು..!! ಆಗ ಅದನ್ನು ಎಲ್ಲಿಂದ ತಂದು ಕೊಟ್ಟರು..!!? ಪೋಲೀಸರು ಮರಳಿ ಕೊಟ್ಟ ಮೃತ ಸಂತೋಷನ ಮೊಬೈಲ್ ನಲ್ಲಿನ ಮೆಮರಿ ಕಾರ್ಡ್ ಡ್ಯಾಮೇಜ್ ಏಕೆ ಆಗಿತ್ತು..!!?

ಪೋಲೀಸ್ ದಾಖಲೆ ಪ್ರಕಾರವೇ ಸಂತೋಷ ಯಾವುದೇ ಅಪಘಾತದಲ್ಲಿ ತೀರಿಕೊಂಡಿಲ್ಲ. ಸಂಶಯಾಸ್ಪದವಾಗಿಯೂ ಸತ್ತಿಲ್ಲ. ಆದರೆ ಪೋಲೀಸರು ಸಂತೋಷನ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೇಕೆ ಒಳಪಡಿಸಿದರು..!!?? ಮರಣೋತ್ತರ ಪರೀಕ್ಷೆ ಮಾಡುವಾಗ ಕುಟುಂಬದವರ/ ವಾರಸುದಾರರ ಪರವಾನಗಿ ಏಕೆ ಪಡೆಯಲಿಲ್ಲ..!!? ಗದಗ ಬೆಟಗೇರಿ ಶಹರ ಪೋಲೀಸರು ಹೀಗೇಕೆ ತರಾತುರಿಯಲ್ಲಿ ಪೋಸ್ಟ್ ಮಾರ್ಟಮ್ ಮಾಡಿದರು.!? ನಂತರ ಅಷ್ಟೇ ತರಾತುರಿಯಲ್ಲಿಯೇ ಮೃತದೇಹವನ್ನು ಸುಟ್ಟುಹಾಕಿ ಅಂತ್ಯಕ್ರಿಯೆ ಮಾಡಿದ್ದೇಕೆ..!!?? ಸಂತೋಷ ಪೋಲಿಸರ ಹೊಡೆತದಿಂದಲೇ ಮೃತಪಟ್ಟಿದ್ದು ಎಂದು ಹೊರಗೇ ಗಂಟಾಘೋಷವಾದ ಜನವಾಣಿ ಇದ್ದಾಗ.. ಲಿಂಗಾಯತ ಸಮುದಾಯದ ಯುವಕ ಸಂತೋಷನ ಅನಿರೀಕ್ಷಿತ ಸಾವಿನಿಂದಾದ ಮೃತ ದೇಹವನ್ನು ಸಮುದಾಯದ ಪದ್ದತಿಯ ಪ್ರಕಾರ ಮಣ್ಣಿನಲ್ಲಿ ಹೂಳದೇ.. ಬೆಂಕಿ ಹಚ್ಚಿ ಸುಟ್ಟುಹಾಕಿದ್ದೇಕೆ..!!?? ಮೊಬೈಲ್ ಸಾಕ್ಷಿ ನಾಶ ಮಾಡಿದ ನಂತರ ದೇಹ ಸುಟ್ಟು ಈ ಸಾಕ್ಷಿಯನ್ನೂ ನಾಶ ಮಾಡಿ ತಾವು ಮಾತ್ರ ಸೇಫ್ ಆಗಲೆಂದೇ..!!?? ಗದಗ ಬೆಟಗೇರಿ ಅವಳಿನಗರಗಳ ಜನರಾದ ಸಾರ್ವಜನಿಕರ ಅನೇಕಾನೇಕ ಪ್ರಶ್ನೆಗಳಿಗೆ ಪೋಲೀಸರು ಉತ್ತರ ನೀಡಲೇಬೇಕಾಗಿದೆ.*

ಮೃತ ಯುವಕನ ತಾಯಿ ಅನಸಮ್ಮ

*ಹೊರಗೆ ಅನೌಪಚಾರಿಕವಾಗಿ ಜನರ ಮುಂದೆ ಎದೆಯೊಳಗಿನ ನೋವು ತೋಡಿಕೊಳ್ಳುತ್ತ ಅಳುತ್ತಲೇ ಸಾಕಷ್ಟು ವಿಷಯಗಳನ್ನು ಪೋಲೀಸರ ವಿರುದ್ಧವಾಗಿ ಹೇಳುತ್ತಲೇ ಪೋಲೀಸರೇ ನನ್ನ ಮಗನನ್ನು ಕೊಂದಿದ್ದಾರೆ ಎಂದು ಬಡಿದುಕೊಳ್ಳುತ್ತಿದ್ದ ಅನಸಮ್ಮ ಮಾಧ್ಯಮದವರು ಬಂದು ಕೇಳಿದಾಗ ಹೆದರಿಕೊಂಡು ನನಗೆ ಯಾರೂ ದಿಕ್ಕು ಇಲ್ಲ..!! ನನಗೇನಾದರೂ ಆದರೆ ಕೇಳೋರಿಲ್ಲ.. ಎಪ್ಪಾ ನನ್ನ ಏನೂ ಕೇಳಬೇಡಿ.. ನನಗೆ ನ್ಯಾಯ ಕೊಡಿಸಿ ಎಂದು ಮಾತ್ರ ಕೈ ಜೋಡಿಸುವುದೇಕೆ..!!?? ಮಾಧ್ಯಮದ ಮುಂದೆ ಮಾತಾಡಲು ಇವಳು ಹೆದರುವುದು ಏಕೆ..!! ಇವಳಿಗೆ ಪೋಲೀಸರ ಭಯ ಏಕೆ ಕಾಡುತ್ತಿದೆ..!!??

ಸಂತೋಷನನ್ನು ಪೋಲೀಸರು ಠಾಣೆಗೆ ಕರೆಸಿರುವ ಕಾರಣವೇನಂದರೆ ಆತ ಕಬ್ಜೆದಾರರ ಜೊತೆಗೆ ಕೊಂಚ ಸಣ್ಣ ಪ್ರಮಾಣದ ಜಗಳ ಮಾಡಿಕೊಂಡಿದ್ದನಂತೆ. ಅವರ ವಿದ್ಯುತ್, ನೀರು ಸರಬರಾಜು ಬಂದ್ ಮಾಡಿದ್ದನಂತೆ. ಅವಾಚ್ ಶಬ್ದಗಳಿಂದ ಬೈದಿದ್ದನಂತೆ. ಪ್ರಜ್ಞಾವಂತ ನಾಗರಿಕರ ಪ್ರಕಾರ ಇದೇನೂ ಅಷ್ಟೊಂದು ದೊಡ್ಡ ಸಮಸ್ಯೆಯೇ ಅಲ್ಲ. ಸಣ್ಣ ಪುಟ್ಟ ಜಗಳ ಕಾಯ್ದುಕೊಂಡು ಸ್ಟೇಶನ್ ಗೆ ಬಂದ ನೂರಾರು ಜನರನ್ನು ತಿದ್ದಿ ಬುದ್ದಿಹೇಳಿ ಸರಿಪಡಿಸಬೇಕಾದ ಪೋಲಿಸರು ಈ ಸಂತೋಷನ ವಿಷಯದಲ್ಲಿ ಮಾತ್ರ ಇಷ್ಟೊಂದು ಕಠಿಣವಾದ ವಾತಾವರಣವನ್ನೇಕೆ ನಿರ್ಮಾಣ ಮಾಡಿದರು..!!??

ಪೋಲಿಸರು ಆರಕ್ಷಕ ಬಂಧುಗಳೆಂದು ಗೌರವಕ್ಕೆ ಪಾತ್ರರಾದವರು ಈ ಸಂತೋಷ ಅನಸಮ್ಮನವರ ವಿಷಯದಲ್ಲಿ ಹೀಗೇಕೆ ಅಡ್ಡ ಹಾದಿ ಹಿಡಿದರೇಕೆ..!!?? ಅದೇ.. ಈ ವಿಷಯವನ್ನು.. ಈ ಕೇಸ್ ನ್ನು ಸಿ ಒ ಡಿ ಅಥವಾ ಸಿಬಿಐ ಸುಪರ್ದಿಗೆ ನೈಜ ಹಾಗೂ ನಿಷ್ಪಕ್ಷಪಾತ ತನಿಖೆಯನ್ನು ವಿಳಂಬವಿಲ್ಲದೇ ಮಾಡಬೇಕು. ಪೋಲೀಸರದು ತಪ್ಪು ಇದ್ದಲ್ಲಿ ಅವರಿಗೆ ಕೂಡಾ ಕಾಯ್ದೆಬದ್ಧ ಶಿಕ್ಷೆ ಅವರಿಗೂ ಸಿಗಲಿ ಅಂತಾ ಅನಸಮ್ಮ ಹಾಗೂ ಗದಗ ಬೆಟಗೇರಿ ಅವಳಿನಗರಗಳ ಸಾರ್ವಜನಿಕರ ಆಂತರ್ಯದ ಅನಿಕೆಗಳ ಸೆಲೆಯೇ ಆಗಿದೆ. ಕಾದು ನೋಡೋಣ ಗದಗ ಬೆಟಗೇರಿ ಪೋಲೀಸರು ಈ ಮೇಲಿನ ಪ್ರಶ್ನೆಗಳಿಗೆ ಉತ್ತರ ನೀಡುವರೇ..!!

ಸಂತೋಷನ ನಿಗೂಢ ಸಾವಿನ ಒಳಮರ್ಮ ಭೇದಿಸಬಹುದೆ..!? ತಪ್ಪಿತಸ್ತರಿದ್ದರೆ ಪೋಲೀಸರಿಗೂ ನೈಜ ಶಿಕ್ಷೆ ದೊರೆಯುವುದೇ.. ಏನೇ ಆದರೂ ನ್ಯಾಯವಾಗಿಯೋ.. ಅನ್ಯಾಯವಾಗಿಯೋ ತೀರಿಕೊಂಡ ಸಂತೋಷ ಮರಳಿ ಬರಲ್ಲ.. ಬಿಡಿ.. ಆದರೇ.. ತಾಯಿಯ ಕರುಳು ಹಿಂಡುವ ರೋಧನ.. ಸಹಿಸಲಾರದ ವೇದನೆಗೆ ಪರಿಹಾರದ ಮುಲಾಮು ಏನು..!? ನಮ್ಮ ಸಮಾಜ ಪೋಲೀಸ್ ದೌರ್ಜನ್ಯ ಹಾಗೂ ಅಚಾತುರ್ಯದಿಂದ ಕ್ಷೋಭೆಗೊಳಗಾವುದು ಯಾವತ್ತು ತಪ್ಪುವುದು.. ಇದೂ ಒಂದು ಯಕ್ಷ ಪ್ರಶ್ನೆಯೇ.. ಅಲ್ಲವೇ..!!?? ಹಾಗೆಯೇ ಗದಗ ಬೆಟಗೇರಿಯ ಸಿಪಿಐ, ಡಿವಾಯ್ಎಸ್ಪಿ, ಎಸ್ ಪಿ ಹಾಗೂ ಬೆಳಗಾವಿ ಉತ್ತರ ವಲಯದ ಆಯ್ ಜಿ ಪಿ ಸಾಹೇಬರು ಇದನ್ನು ಆಸಕ್ತಿದಾಯಕವಾಗಿ ಕೈಗೆತ್ತಿಕೊಂಡು ನೈಜ ಹಾಗೂ ಸೂಕ್ತ ತನಿಖೆಯನ್ನು ಬೇಗ ನಡೆಸುವರೇ.. ಎಂದು ಪ್ರಶ್ನೆಯನ್ನೂ ಕೂಡಾ.. ಜನರು ತಮ್ಮೊಳಗೇ ಇಟ್ಟುಕೊಂಡಿದ್ದಾರೆ. ನಾವು ಕೂಡಾ ಕಾದು ನೋಡೋಣ.

ಪೋಲೀಸ್ ಠಾಣೆಗಳು ಜನರ ಹಿತಕ್ಕೇ ಇವೆ ಎಂದು ಬಹುಪಾಲು ಸಾರ್ವಜನಿಕರು ಈಗಲೂ ತಿಳಿದುಕೊಂಡಿದ್ದಾರೆ. ಆದ್ದರಿಂದ ಗದಗ ಪೋಲೀಸರು ಸತ್ಯಾಂಶವನ್ನು ಹೊರಗೆ ಕಕ್ಕುವರೇ..!!!? ಜನಸಾಮಾನ್ಯರ ಬದುಕು ನಿರ್ಭೀತದಿಂದ ಸಾಗೀತೆ..!!?? ಅಮಾಯಕರ ರಕ್ಷಣೆಗಿರುವ “ಆರಕ್ಷಕರು” ಎಂಬ ಬೇಲಿಗಳು ಎದ್ದು ಬಂದು ಅಮಾಯಕರನ್ನೇ ಗುರುಯಿಟ್ಟು ಬೇಟೆಯಾಡುವುದು ತಪ್ಪೀತೆ..!!?? ಹೀಗೆ ಜನಪರತೆ ಹಾಗೂ ನ್ಯಾಯ ದೇವತೆಯ ದಯದ.. ಅಭಯದ.. ನಿರೀಕ್ಷೆಯಲ್ಲಿ… ನಾವು ನೀವು..!! ಮತ್ತೆ ಭೆಟ್ಟಿಯಾಗೋಣ.. ನಮಸ್ಕಾರಗಳು.

(ಆಧಾರ ಸಾಮಾಜಿಕ ಜಾಲತಾಣ)

ಜಿಲ್ಲೆ

ರಾಜ್ಯ

error: Content is protected !!