Tuesday, September 17, 2024

ಉತ್ತರ ಕರ್ನಾಟಕ ಶೈಲಿಯ ಹಾಸ್ಯ ಚಲನಚಿತ್ರ “ಸ್ಕೂಲ್ ಡೇಸ್”

ಶ್ರೀ ಗುರು ಮಹಾಂತ ಕ್ರಿಯೇಷನ್ಸ್ ಇವರಿಂದ ನಿರ್ಮಾಣಗೊಳ್ಳುತ್ತಿರುವ “ಸ್ಕೂಲ್ ಡೇಸ್” ಶೈಕ್ಷಣಿಕ ಬದುಕಿನ ಸಿನಿಮಾ ಒಂದು ವಾರದ ಹಿಂದೆಯೇ ಬೈಲಹೊಂಗಲ ಹತ್ತಿರದ ಹಿರೇಬಾಗೆವಾಡಿಯ ಇಟಗಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಚಿತ್ರೀಕರಣ ಕಾರ್ಯಾರ್ಭಕ್ಕೆ ಚಾಲನೆ ಪಡೆಯಿತು.

ಬಡೇಕೊಳ್ಳ ಮಠದ ಶ್ರೀಗಳು ಹಾಗೂ ಮುರಗೋಡ ಮಹಾಂತ ದುರುದುಂಡೇಶ್ವರ ಮಠದ ಶ್ರೀಗಳವರು ಕ್ಯಾಮರಾ ಚಾಲನೆ ಮಾಡಿದರು. ಶಿಕ್ಷಣ ಸಂಸ್ಥೆಯ ಚೇರ್ಮನ್  ಬಸವರಾಜ ವಾಲಿಇಟಗಿ ಸರ್, ಉಪಾಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಶಿಕ್ಷಣ ಸಂಸ್ಥೆಯ ಎಲ್ಲರೂ ಭಾಗವಹಿಸಿದ್ದರು. ಬೈಲಹೊಂಗಲ ಕನ್ನಡ ಜನಪದ ಪರಿಷತ್ತು ಅಧ್ಯಕ್ಷ ಚಂದ್ರಶೇಖರ ಕೊಪ್ಪದ ಹಾಗೂ ಇತರ ಸ್ಥಳೀಯ ಗಣ್ಯರು ಉಪಸ್ಥಿತರಿದ್ದರು.

ನಾಯಕ ನಾಯಕಿ ನಟ ನಟಿಯರು ಹಾಗೂ ಸಹನಟರು, ಪ್ರಾಂಶುಪಾಲ ಪಾತ್ರದವರಾದ ಪತ್ರಕರ್ತರು ಸಂಪಾದಕರು ಸೋಮಶೇಖರ ವೀ. ಸೊಗಲದ ಕಾರ್ಯಕ್ರಮ ನಿರೂಪಿಸಿದರು. ಸಹಕಾರಿ ನಿರ್ದೇಶಕರು ರಂಜಿತ್ ಸ್ವಾಗತಿಸಿದರು. ಮುಪ್ಪೈನವರಮಠ ವಂದಿಸಿದರು.

ಉತ್ತಮ ನೀತಿ ಬೋಧಕ ಕಥಾವಸ್ತು ಹೊಂದಿದ ಈ ಚಿತ್ರ ಅದ್ಭುತ ಯಶಸ್ಸು ಕಂಡು ಪ್ರಶಸ್ತಿ ಪಡೆಯಲಿ ಎಂದು  ಶ್ರೀಗಳು ಹಾರೈಸಿದರು.

ಶ್ರೀಗಳಿಗೆ ಹಾಗೂ ನಿರ್ಮಾಪಕರಾದ ಬೈಲಹೊಂಗಲದ ಪತ್ರಕರ್ತರು ಹಾಗೂ ಗಣ್ಯ ಉದ್ದಿಮೆದಾರರೂ ಆದ ಉಮೇಶ ಹಿರೇಮಠ ಹಾಗೂ ಮುಂತಾದವರನ್ನು ಸನ್ಮಾನಿಸಲಾಯಿತು.

ಪ್ರೀಯಾ ಸಾಲಿಮಠ ಚಿತ್ರ ನಟಿ

ಪ್ರಿಯಾ ಸಾಲಿಮಠ ಪ್ರಥಮ ಬಾರಿಗೆ ಚಿತ್ರದ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಬೆಳಗಾವಿ ಬೈಲಹೊಂಗಲ ಹಾಗೂ ಹಿರೇಬಾಗೆವಾಡಿ ಸುತ್ತಮುತ್ತಲೂ ಆಕರ್ಷಕ ಸ್ಥಳಗಳಲ್ಲಿ ಚಿತ್ರೀಕರಣ ಅದ್ದೂರಿಯಾಗಿ ಸಾಗಿದೆ.

ಉತ್ತರ ಕರ್ನಾಟಕದ ಪ್ರತಿಭೆಗಳು ಬಹಳ ಪರಿಣಾಮಕಾರಿಯಾಗಿ ಅಭಿನಯಿಸುತ್ತಿರುವುದು. ಅಪ್ಪಟ ಜವಾರಿ ಭಾಷೆಯ ಝಲಕ್ ಗಳು ನವಿರು ನವಿರಾದ ನೈತಿಕ ಹಾಸ್ಯ ಚಟಾಕೆಗಳಿಂದ ಕೂಡಿದ ಸಂಭಾಷಣೆ.. ಅಡೆತಡೆಗಳೇ ಇಲ್ಲದ ಚಿತ್ರೀಕರಣ ಕಾರ್ಯ ಇವೆಲ್ಲ ಕಂಡು ನಿರ್ದೇಶಕರು ಸಂಜಯ್ ಎಲ್ಲಿಲ್ಲದ ಖುಷಿ ಹೊಂದಿದ್ದಾರೆ.

ಬಹಳ ದಿನಗಳ ಹಿಂದಿನ ತಯಾರಿಯ ಸಾಧನೆಗಳ ತಪಸ್ಸನ್ನು ಈ ಶ್ರಮ ಹೊಂದಿದೆ. ಉತ್ತರ ಕರ್ನಾಟಕದ ಅನ್ನದಾತರೇ ಆಗಿ ಚಿತ್ರೋದ್ಯಮಕ್ಕೆ ಪಾದಾರ್ಪಣೆ ಗೈದ ನಮ್ಮ ಮಿತ್ರರು ಪತ್ರಕರ್ತರು ಉಮೇಶ ಹಿರೇಮಠರವರು ಅತೀ ಉತ್ಸಾಹದಿಂದ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಹಲವು ಭವಿಷ್ಯದ ಕುಡಿಗಳ ಹಣೆಬರಹ ಈ ಚಿತ್ರದ ಯಶಸ್ಸಿನಲ್ಲಿ ಅಡಗಿದೆ. ಹಾಗೇ ಶ್ರೀಗಳ ಹಲವು ಗಣ್ಯರ ಶುಭಾಶಿರ್ವಾದ ಎಲ್ಲರಿಗೂ ಇದೆ.

 

ಗದಗಿನ ನಮ್ಮ ಗುರುಗಳು ಪ್ರಭು ಗಂಜಿಹಾಳರವರು ಅಖಿಲ ಕರ್ನಾಟಕದಾದ್ಯಂತ ಈ ಚಿತ್ರದ ಪೂರ್ವೋತ್ತರದ ಆಗುಹೋಗುಗಳನ್ನು ಮಾಧ್ಯಮದವರ ನೆದರಿಗೆ ತಂದು ಸುದ್ದಿ ಪ್ರಕಟಣೆಗೊಳಿಸುತ್ತಾ ಅಡಿಗಡಿಗೂ ಅದ್ವಿತೀಯ ಸಾಧನೆಯ ಪ್ರಚಾರ ನೀಡುತ್ತಿರುವುದೂ ನಮಗೆಲ್ಲರಿಗೂ ಶ್ರೀರಕ್ಷೆ ಆಗಿದೆ.

ಇಲ್ಲಿಯವರೆಗೆ ಬೇರೆ ಬೇರೆ ಚಿತ್ರಗಳಲ್ಲಿ ಹಾಗೂ ಹೀಗೂ ನಟಿಸಿದ ಕೊಂಚ ಅನುಭವ ಹೊಂದಿದ ನನ್ನ ಸಿನಿ ಆಸಕ್ತಿ ಗುರುತಿಸಿ ನನಗೆ ಪ್ರಾಚಾರ್ಯರ ಪಾತ್ರ ನಿರ್ವಹಿಸುವ ಜವಾಬ್ದಾರಿಯನ್ನು ಚಿತ್ರತಂಡ ನೀಡಿದೆ.

ಅವರ ನಿರೀಕ್ಷೆ ಮೀರಿ ನನ್ನ ಗುರುತರ ಜವಾಬ್ದಾರಿ ನಿಭಾಯಿಸುವ ನಿಟ್ಟಿನಲ್ಲಿ ನಮ್ಮ ತುಡಿತವೂ ಇದೆ. ಇನ್ನೇನು ಸ್ವಲ್ಪೇ ದಿನಗಳಲ್ಲಿ ಚಿತ್ರವನ್ನು ನಾವು ನೀವೂ ಚಿತ್ರಮಂದಿರಗಳಲ್ಲಿ ಕೂತು ನೋಡಿ ಆಸ್ವಾದಿಸಿ ನಕ್ಕು ನಲಿಯುವ ಕಾಲ ದೂರವಿಲ್ಲ. ಸಕಲ ಕನ್ನಡ ಮನಸ್ಸುಗಳು ಹಾಗೂ ಚಲನಚಿತ್ರಾಭಿಮಾನಿಗಳಿಗೂ ದೀಪಾವಳಿ ಶುಭವನ್ನು ತರಲೆಂದು ಈ ಮೂಲಕ ಹಾರೈಸುವೆವು.*

ಸೋಮಶೇಖರ ವೀ. ಸೊಗಲದ ಸಂಪಾದಕರು. ಮೌಲ್ಯಸಂಪದ ಕನ್ನಡ ಮಾಸಿಕ ಪಡಕೋಟ ರಾಮದುರ್ಗ. ಜಿಲ್ಲೆ: ಬೆಳಗಾವಿ.

ಜಿಲ್ಲೆ

ರಾಜ್ಯ

error: Content is protected !!