Friday, September 20, 2024

ಹುಚನಟ್ಟಿ ಕರೆಮ್ಮದೇವಿ ದೇವಸ್ಥಾನದ ಅಡಿಗಲ್ಲು ಸಮಾರಂಭ ಹಾಗೂ ಉದ್ದನವರ ಬೇಡಗದ ಸಮಾವೇಶ

ಯರಗಟ್ಟಿ: ಸಮೀಪದ ಯರಗಣವಿ ಗ್ರಾಮದಲ್ಲಿ ಹುಚನಟ್ಟಿ ಕರೆಮ್ಮದೇವಿ ದೇವಸ್ಥಾನದ ಅಡಿಗಲ್ಲು ಸಮಾರಂಭ ಹಾಗೂ ಉದ್ದನವರ ಬೇಡಗದ ಸಮಾವೇಶ ಹಮ್ಮಿಕೊಳ್ಳಲಾಗಿತ್ತು.

ದೇವಸ್ಥಾನದ ಅಡಿಗಲ್ಲು ಸಮಾರಂಭದ ಪೂಜೆಯನ್ನು ಹರಗುರು ಚರಮೂರ್ತಿಗಳು ಹಾಗೂ ಸಮಾಜದ ಮುಖಂಡರು ಗ್ರಾಮಸ್ಥರು ನೆರವೇರಿಸಿದರು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಉದ್ದನವರ ಬೇಡಗದ ಹಿರಿಯ ಜೀವ ಸುಮಾರು ಮೂರೂರು ವರ್ಷಗಳಿಂದ ಹಿಂದೆ ಮತ್ತು ಬ್ರಿಟಿಷ್ ಆಡಳಿತ ಇತಿಹಾಸ ಹೊಂದಿರುವ ಹುಚ್ಚನಟ್ಟಿ ಗ್ರಾಮದಲ್ಲಿ ಪ್ಲೇಗ್ ಎಂಬ ಮಾರನಾತಿಕ ಕಾಯಿಯಿಂದ ನೂರಾರು ಕುಟುಂಬಗಳು ಗ್ರಾಮವನ್ನು ತೊರೆದು ಹೊದ ಹಿನ್ನೆಲೆ ಹುಚ್ಚು ಪಟ್ಟಿ ಗ್ರಾಮ ಸಂಪೂರ್ಣ ಹಾಳಾಗಿದ್ದು.

ಈಗ ಬೀತನೆ ಮಾಡುವಾಗ ಮತ್ತೆ ಹುಚ್ಚನಟ್ಟಿ ಗ್ರಾಮದ ಕುರುಹುಗಳು ಸಿಗುತ್ತವೆ ಹಾಗಾಗಿ ಗ್ರಾಮವನ್ನು ಮರುನಿರ್ಮಾಣ ಮಾಡಲಾಗುವುದು ಆದ್ದರಿಂದ ಇಂದು ನಾವು ನಮ್ಮ ಕುಲದೇವತೆಯಾದ ಹುಚ್ಚನಟ್ಟಿ ಕರೆಮ್ಮದೇವಿ ದೇವಸ್ಥಾನದ ಅಡಿಗಲ್ಲು ಸಮಾರಂಭ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು ಹೇಳಿದರು.

ಈ ಸಂದರ್ಭದಲ್ಲಿ ಉದ್ದನವರ ಬೇಡಗದ ಸಮಾಜ ಬಾಂಧವರಾದ ವಿಠ್ಠಲ ಕೋಟೂರ, ಬಸಪ್ಪ ನೇಗಿನಾಳ, ಪರಮಾನಂದ ಹಲಗಲಿ, ಶಿವಾನಂದ ಹಾದಿಮನಿ, ರಾಮಚಂದ್ರಗೌಡ ಪಾಟೀಲ, ಷಣ್ಮುಖಪ್ಪ ಮಾಳಕ್ಕನವರ, ಸಿದ್ದಲಿಂಗಪ್ಪ ಕೊಟ್ರೆ, ಬಸವರಾಜ ಮಾಳಕ್ಕನವರ, ಧರೇಪ್ಪ ಕೊಟ್ರೆ, ಸಾಬಣ್ಣ ನಾಯ್ಕರ, ಮುತ್ತೆಪ್ಪ ಆನಿಗೋಳ, ರಮೇಶ ಕೋಟೂರ ಸೇರಿದಂತೆ 78 ಗ್ರಾಮಗಳಲ್ಲಿ ವಾಸವಿರುವ ಉದ್ದನವರ ಬೇಡಗದ ಸಮಾಜ ಬಾಂಧವರು ಹಾಜರಿದ್ದರು.

(ವರದಿ: ಈರಣ್ಣಾ ಹುಲ್ಲೂರ ಯರಗಟ್ಟಿ)

ಜಿಲ್ಲೆ

ರಾಜ್ಯ

error: Content is protected !!