Wednesday, July 24, 2024

ಹಡೆದ ತಾಯಿ ಮತ್ತು ಕಲಿಸಿದ ಗುರುವಿನ ಋಣ ತೀರಿಸುವದು ಅಸಾಧ್ಯ; ಡಾ.ಎಸ್.ಬಿ. ದಳವಾಯಿ

ಸುದ್ದಿ ಸದ್ದು ನ್ಯೂಸ್
ಚನ್ನಮ್ಮನ ಕಿತ್ತೂರು:- ಸ್ಥಳೀಯ ಕಿತ್ತೂರ ನಾಡ ವಿದ್ಯಾ ವರ್ಧಕ ಸಂಘದ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯರಾದ ಡಾ.ಎಸ್.ಬಿ.ದಳವಾಯಿ ಇವರಿಗೆ ಅವರ ವಿದ್ಯಾರ್ಥಿ ಮಿತ್ರರಾದ ಪ್ರಭಾ ಲದ್ದೀಮಠ ಮತ್ತು ಬಸವಪ್ರಭು ಪಾಟೀಲ ಶಿಕ್ಷಕ ದಂಪತಿಗಳು ಗುರುವಂದನೆಯ ಮೂಲಕ ಗೌರವ ಸಮರ್ಪಿಸಿದರು.ಇವರುಗಳು ತಾವು ಕಿತ್ತೂರಿನಲ್ಲಿ ನಿರ್ಮಿಸಿದ “ಧವಳಗಿರಿ ನಿಲಯ” ನೂತನ ಗೃಹ ಪ್ರವೇಶ ಸಮಾರಂಭದಲ್ಲಿ ತಮಗೆ ವಿದ್ಯೆ ನೀಡಿದ ಗುರುಗಳಾದ ಡಾ.ಎಸ್.ಬಿ.ದಳವಾಯಿ ಇವರನ್ನು ಪ್ರೀತಿ ಗೌರವಗಳಿಂದ ಸನ್ಮಾನಿಸಿದರು.ಶಿಕ್ಷಕಿ ಪ್ರಭಾ ಲದ್ದೀಮಠ ಮಾತನಾಡಿ ನಾವು ನಾಲ್ಕು ಜನ ಸಹೋದರಿಯರು ಮತ್ತು ಪತಿ ಬಸವಪ್ರಭು ಡಾ.ಎಸ್.ಬಿ.ದಳವಾಯಿ ಗುರುಗಳ ಶಿಷ್ಯರಾಗಿದ್ದು ಹೆಮ್ಮೆ ಅನಿಸುತ್ತದೆ.ದಳವಾಯಿ ಸರ್ ಕೇವಲ ಗುರುಗಳಾಗಿರದೆ ತಮ್ಮ ಮನೆತನದ ಮಾರ್ಗದರ್ಶಕರಾಗಿ,ಪಿತೃ ಸ್ವರೂಪಿಗಳಾಗಿ, ಹಿತ ಚಿಂತಕರಾಗಿ ಈಗಲೂ ಸಹಿತ ಹೆಜ್ಜೆ ಹೆಜ್ಜೆಗೂ ಸದಾ ಸ್ಫೂರ್ತಿಯ ಚಿಲುಮೆಯಾಗಿರುವದು ನಮ್ಮ ಸೌಭಾಗ್ಯವಾಗಿದೆ ಎಂದು ತಿಳಿಸಿದರು.ಬಸವಪ್ರಭು ಪಾಟೀಲ ಮಾತನಾಡಿ ದಳವಾಯಿ ಸರ್ ಕೇವಲ ಪ್ರತಿಬಾವಂತ ವಿದ್ಯಾರ್ಥಿಗಳನ್ನು ಮಾತ್ರ ಪ್ರೇರೆಪಿಸದೆ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನೂ ಗುರುತಿಸಿ ತಮ್ಮ ಶಿಕ್ಷಕ ವೃತ್ತಿಯುದ್ದಕ್ಕೂ ಉಚಿತವಾಗಿ ಪಠ್ಯಪುಸ್ತಕಗಳನ್ನು ನೀಡುತ್ತಾ ಪರಿಣಾಮಕಾರಿಯಾಗಿ ಬೋಧನೆ ಮಾಡಿರುವದನ್ನು ಸ್ಮರಿಸಿಕೊಂಡರು.

ಉಪನ್ಯಾಸಕಿ ಪಾರ್ವತಿ ಮಾತನಾಡಿ ದಳವಾಯಿ ಗುರುಗಳು ಸೇವಾ ವಯೋ ನಿವೃತ್ತಿಯ ನಂತರವೂ ವಿವಿಧ ಸಂಘಟನೆಗಳ ಮೂಲಕ ಶೈಕ್ಷಣಿಕ,ಸಾಮಾಜಿಕ,ಸಾಹಿತ್ಯಕ, ಧಾರ್ಮಿಕ ಕಾರ್ಯಗಳಲ್ಲಿ ನಿರತರಾಗಿರುವದು ಅಭಿಮಾನದ ವಿಷಯವಾಗಿದೆ ಎಂದು ಸಂತಸ ವ್ಯಕ್ತ ಪಡಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಎಸ್.ಬಿ.ದಳವಾಯಿ ಪ್ರಭಾರವರು ಕೈ ಬರಹದ ಮೂಲಕ ನನ್ನ ಬಗೆಗೆ ಅಭಿಮಾನ ಪೂರ್ವಕವಾದ ಅನಿಸಿಕೆಗಳನ್ನು ವ್ಯಕ್ತಪಡಿಸಿರುವದು ನನ್ನ ಜೀವನದ ಅತ್ಯಂತ ಅವಿಸ್ಮರಣೀಯ ಕ್ಷಣವಾಗಿದೆ ಮತ್ತು ಇವರುಗಳು ನೀಡಿರುವ ಗುರುವಂದನೆ ಯನ್ನು ಇಡೀ ಶಿಕ್ಷಕ ಸಮೂಹಕ್ಕೆ ಅರ್ಪಿಸುತ್ತೇನೆ ಎಂದು ತಿಳಿಸಿದರು. ಪ್ರಮುಖವಾಗಿ ನಾಲ್ಕೂ ಜನ ಹೆಣ್ಣು ಮಕ್ಕಳಿಗೆ ತೀರ ಬಡತನದ ನಡುವೆಯೂ ಕಷ್ಟಪಟ್ಟು ಓದಿಸಿ ತಾಯಿಯೇ ಮೊದಲ ಗುರು,  ಅವರ ಇಂದಿನ ಉತ್ತಮ ಜೀವನಕ್ಕೆ ಕಾರಣೀಕರ್ತರಾದ ಅವರ ತಾಯಿಯವರನ್ನು ಡಾ.ಎಸ್.ಬಿ.ದಳವಾಯಿ ದಂಪತಿಗಳು ಸನ್ಮಾನಿಸಿ ಅವರ ಸರಳ ಜೀವನ ಮತ್ತು ಪ್ರಯತ್ನಗಳು ಇಡೀ ಸಮಾಜಕ್ಕೆ ಮಾದರಿ ಎಂದು ತಿಳಿಸಿದರು.

ಸಮಾರಂಭದಲ್ಲಿ ಇವರುಗಳಿಗೆ ಶಿಕ್ಷಣ ನೀಡಿದ ಶಿಕ್ಷಕದ್ವಯರಾದ  ನೇಸರಗಿ ಮತ್ತು ಪ್ರೊ ಕಲ್ಲಹಾಳ ಇವರುಗಳಿಗೂ ಗೌರವ ವಂದನೆ ಸಮರ್ಪಿಸಿದರು.

ಸಾನಿಧ್ಯ ವಹಿಸಿದ್ದ ಅರಭಾವಿ ಮಠದ ಪೂಜ್ಯರು ಆಶೀರ್ವದಿಸಿ ಲದ್ದೀಮಠ ಮತ್ತು ಪಾಟೀಲ ಕುಟುಂಬಕ್ಕೆ ಶುಭ ಕೋರಿದರು. ಮುಖ್ಯಾಧ್ಯಾಪಕಿ ಶ್ರೀದೇವಿ ಲದ್ದೀಮಠ ಸ್ವಾಗತಿಸಿ ನಿರೂಪಿಸಿದರು.ರಾಜೇಶ್ವರಿ ವಂದಿಸಿದರು.
“ನನ್ನ ವಿದ್ಯಾರ್ಥಿ ಮಿತ್ರರಾದ ಪ್ರಭಾ ಮತ್ತು ಬಸವ ಪ್ರಭು ಇವರುಗಳು ಇಂದು ತೋರಿದ ಪ್ರೀತಿ ಗೌರವಗಳನ್ನು ನನ್ನ ಜೀವನದುದ್ದಕ್ಕೂ ಮರೆಯಲಾರೆ.ಇಂತಹ ವಿದ್ಯಾರ್ಥಿಗಳು ದೊರೆತಿರುವದು ನನ್ನ ಭಾಗ್ಯ.ಇವರ ಭವಿಷ್ಯ ಉಜ್ವಲವಾಗಲಿ.” – ಡಾ.ಎಸ್.ಬಿ.ದಳವಾಯಿ.ವಿಶ್ರಾಂತ ಪ್ರಾಚಾರ್ಯರು.
“ನಮ್ಮ ಗುರುಗಳಾದ ಡಾ.ಎಸ್.ಬಿ.ದಳವಾಯಿ ಯವರು ವರ್ಗ ಕೋಣೆಯಲ್ಲಿ ಮಾಡಿದ ಬೋಧನಾ ವಿಧಾನವು ಇಂದಿಗೂ ಕೂಡ ನಮ್ಮ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ.ಅವರ ಮಾರ್ಗದರ್ಶನವೇ ಇಂದಿಗೂ ನಮಗೆ ದಾರಿ ದೀಪವಾಗಿದೆ. ದೇವರು ಅವರಿಗೆ ಆಯುರಾರೋಗ್ಯ ಸುಖ ಶಾಂತಿ ಕರುಣಿಸಲಿ ಎಂದು ಇಡೀ ಅವರ ಶಿಷ್ಯ ಬಳಗದ ಪರವಾಗಿ ಪ್ರಾರ್ಥಿಸುತ್ತೇವೆ.” ಪ್ರಭಾ ಮತ್ತು ಬಸವಪ್ರಭು ದಂಪತಿಗ

ಜಿಲ್ಲೆ

ರಾಜ್ಯ

error: Content is protected !!