Friday, April 19, 2024

ಆಜಾದಿ ಕಾ ಅಮೃತಮೋತ್ಸವದ ಅಂಗವಾಗಿ ಕಾನೂನು ಶಿಬಿರ

ಸವದತ್ತಿ (ಅ.09): ಆಜಾದಿ ಕಾ ಅಮೃತಮೋತ್ಸವದ ಅಂಗವಾಗಿ ಕಾನೂನು ಸೇವಾ ಪ್ರಾಧಿಕಾರ ಹಾಗು ನ್ಯಾಯವಾದಿಗಳ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಕಾನೂನು ತಿಳುವಳಿಕೆ ಶಿಬಿರವನ್ನು ಸವದತ್ತಿ ತಾಲೂಕಿನ ಯಕ್ಕುಂಡಿ ಸರಕಾರಿ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಯಿತು.

ಪ್ರಧಾನ ದಿವಾಣಿ ನ್ಯಾಯಾಧೀಶ, ಕಿರಿಯ ಶ್ರೇಣಿ ಸಂದೀಪ್ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು.ವಿದ್ಯಾರ್ಥಿಗಳಿಗೆ ಜೀವನದಲ್ಲಿ ಸಮಾಜದ ವಳಿತಿಗಾಗಿ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಹಾಗೂ ಸಾದಕರಾಗಿ ನಮ್ಮನ್ನು ಸಮಾಜ ಗುರುತಿಸವಂತೆ ಸಾಧನೆ ಮಾಡಬೇಕು ಎಂದರು.

ಅಥಿತಿಗಳಾಗಿ 2ನೇ ಹೆಚ್ಚುವರಿ ದಿವಾಣಿ ನ್ಯಾಯಾಲಯ ಕಿರಿಯ ಶ್ರೇಣಿ ನ್ಯಾಯಾಧೀಶ ಹರೀಶ್ ಜಿ. ಅವರು ಹಲವಾರು ಕಾನೂನುಗಳ ಸಂಕ್ಷಿಪ್ತ ವಿವರಿಸಿದರು, ಉಪನ್ಯಾಸಕರಾಗಿ ಜಿ.ವಾಯ್. ಕರಮಲ್ಲಪ್ಪನವರ್ ಅವರು ಜನನ ಮರಣ ಹಾಗೂ ಮೋಟಾರ ವಾಹನ ಕಾಯ್ದೆಗಳನ್ನು ವಿವರಿಸಿದರು. ಅತಿಥಿಗಳಾಗಿ ಆರ್ ಎಮ್ ನಿಡವಣಿ ಎಸ್. ಎಸ್. ಮಾನೆ ಹಾಗೂ ಕಾಲೇಜಿನ ಸಿಬ್ಬಂದಿ ಉಪಸ್ಥಿತರಿದ್ದರು ಪ್ರಾಚಾರ್ಯ ವಾಯ. ಯಾಕೊಳ್ಳಿಸ್ವಾಗತಿಸಿದರು.

ಜಿಲ್ಲೆ

ರಾಜ್ಯ

error: Content is protected !!