Saturday, June 15, 2024

AISF ಎಂಬ ವಿದ್ಯಾರ್ಥಿ ಸಂಘಟನೆ ಪ್ರವೇಶವೇ ದೊಡ್ಡ ರೋಮಾಂಚನ: ಭೀಮನಗೌಡ ಪರಗೊಂಡ

ಒಂದು ಹೋರಾಟ ಚಳುವಳಿ ಕಟ್ಟೋದು ಅಂದ್ರೆ ಸಣ್ಣ ಮಾತಲ್ಲ. ಶ್ರದ್ದೆ, ಪ್ರೀತಿ, ನಂಬಿಕೆ, ವಿಶ್ವಾಸ, ಅವಮಾನ, ಅಪಮಾನ ಎದುರಿಸುವ, ನೋವು ನುಂಗಿ ನಡೆಯುವ,ಕಷ್ಟ ಸಹಿಸುವ, ಸ್ವಂತ ಹಣವನ್ನು ಹೋರಾಟಕ್ಕೆ ಬಳಸುವ, ಟೀಕೆ ಟಿಪ್ಪಣಿ ಎದುರಿಸುವ ಹಾಗೆಯೇ ಯಾರ ಪರ ಹೋರಾಟ ಮಾಡುತ್ತಿವೇಯೋ ಅದೇ ಜನ ಮುಖ್ಯ ಸಮಯದಲ್ಲಿ ಕೈ ಕೊಡುವ, ಹೋರಾಟಗಾರರನ್ನೇ ದೂರುವ, ಕಾಟ ಕೊಡುವ ಸಂಧರ್ಭ ಜಾಸ್ತಿ. ಅದರ ಜೊತೆಗೆ ಹೋರಾಟದ ನಾಯಕತ್ವ ವಹಿಸಿದ್ದಾಗ ನಾಯಕನ ಜೊತೆಗೆ ಇರುವವರನ್ನು ಒಡೆದು ಅಳುವ, ಆಶೆ ಅಮಿಷೆ ಒಡ್ದುವ ನೂರಾರು ಕುಟೀಲ ರಣ ತಂತ್ರಗಳು ನಡೆಯುತ್ತವೆ. ಒಟ್ಟಾರೆಯಾಗಿ ಒಂದು ಸದುದ್ದೇಶದ ಹೋರಾಟವನ್ನು ಏನಾದರೂ ಮಾಡಿ ಹಾದಿ ತಪ್ಪಿಸುವ, ಒಡೆಯುವ ತಂತ್ರಗಾರಿಕೆಯನ್ನು ಇತಿಹಾಸದಲ್ಲಿ ಪಟ್ಟ ಭದ್ರರು ಮಾಡಿದ್ದು ಬಹಳ, ಆದರೆ ಅತ್ಯಂತ ಕಡಿಮೆ ದಾಖಲಾಗಿದ್ದು ಖೇದಕರ.

ಹೋರಾಟದಲ್ಲಿ ತೊಡಗಿರುವವರ ಬೆಂಬಲವಾಗಿರುವವರ ಬಗ್ಗೆ ಅಪ ಪ್ರಚಾರ ಮಾಡುವುದು ಅದಕ್ಕೂ ಮಣೆಯದಿದ್ದರೆ ಹೋರಾಟದಲ್ಲಿ ತೊಡಗಿಸಿಕೊಂಡವರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸುವುದು, ಹಲ್ಲೆ ಮಾಡುವುದು, ಹತ್ಯೆ ಮಾಡಿ ಅಥವಾ ಮಾಡಿಸಿ ಸಮುದಾಯದಲ್ಲಿ ಭಯ ಉಂಟು ಮಾಡುವುದು ಕಡಿಮೆಯೇನಲ್ಲ.

ಹೋರಾಟಗಾರರಿಗೆ ನಿತ್ಯ ಕಿರುಕುಳ, ಹಿಂಸೆ ನೀಡುವವರ ಸಂಖ್ಯೆ ಕಡಿಮೆ ಏನಿಲ್ಲ. ಹೋರಾಟದಲ್ಲಿ ಮುಂದೆ ಹೊಗಳಿ, ಹಿಂದೆ ಕುತಂತ್ರ ಮಾಡುವ ಮುಖಾಂತರ ತಮ್ಮ ಬೇಳೆ ಬೆಯೆಸಿಕೊಳ್ಳುವ ಜನರು ಹೆಚ್ಚು. ಹೋರಾಟಕ್ಕೆ ತೊಡಗಿಸಿಕೊಂಡವರು ಯಾರೋ, ಅಲ್ಲಿ ಶೋ ಕೊಟ್ಟು ಹೋಗೋರು ಇನ್ನ್ಯಾರೋ, ಕೊನೆಗೆ ಇದರ ಲಾಭ(ಕ್ರೆಡಿಟ್ )ಪಡೆಯೋರು ಇನ್ಯಾರೋ ಆದ್ರೆ, ಇದರ ವೈಫಲ್ಯ, ಹಾನಿ ಎಲ್ಲವನ್ನು ಲೀಡ್ ಮಾಡಿದವರೇ ಹೊರಬೇಕು. ಇದೆಲ್ಲಾ ನೆನಪಾಗಲು ಕಾರಣ,2005 ರಿಂದ 2012 ವರೆಗೆ ಕಲಬುರ್ಗಿ ಅವಿಭಜೀತ ಜಿಲ್ಲೆಯ ನೂರಾರು ಬಿಸಿಎಂ ಮತ್ತು ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಿಗೆ, ಪಿ ಯು, ಡಿಗ್ರಿ, ಜೆ ಒ ಸಿ, ಐಟಿಐ ಕಾಲೇಜು ತಿರುಗಾಡಿದ ಅನುಭವದ ಮೇಲೆ ಈ ಮಾತಗಳನ್ನು ಹೇಳುತ್ತಿರುವೆ. ಐಟಿಐ ಮುಗಿದ ಮೇಲೆ ITC 2 ವರ್ಷದ ಯುವಕರನ್ನು ಆಪ್ರೆಂಟಿಸ್ ಶಿಪ್ ಮುಗಿಸಿ ಕೈತೋಳೆದುಕೊಳ್ಳುತ್ತಿದ್ದ ಹೆಸ್ಕಾಂ, ಮೆಸ್ಕಾಂ, ಚೆಸ್ಕಾಂ, ಮೆಸ್ಕಾಂ, ಬೆಸ್ಕಾಂಗಳ ಲ್ಲಿ ಹೋರಾಟ ಮಾಡಿ ಸಂಘಟಿಸಿ ಹಲವು ಬಾರಿ ಲಾಠಿ ಚಾರ್ಜ್ ತಿಂದು,ಅದರಲ್ಲಿ 3000 ಅಧಿಕ ಜನರಿಗೆ ಲೈನ್ ಮ್ಯಾನ್ ಹುದ್ದೆ ಸೇರಲು ಕಾರಣಿಭೂತರಾಗಿ, ಅವರು ನೌಕರಿ ಹಿಡಿದು ಇಷ್ಟ ವರ್ಷ ಆದ ಮೇಲೆ ಎದುರಿಗೆ ಬಂದು ಒಳಗೊಳಗೆ ನಮ್ಮ ಸ್ಥಿತಿನೋಡಿ ನಗುವ, ಬೆನ್ನ ಹಿಂದೆ ನಮ್ಮ ಪರಿಚಿತರ ಎದುರು ನಮ್ಮ ಬಗ್ಗೆ ಅಯ್ಯೋ ಪಾಪ. ಎಂತಹ ಲೀಡರ್ ಇದ್ದರು ಆಗ ಖಾಸಗಿ ಚಾನೆಲ್ ಬರುವ ಮುಂಚೆ.. ನೋಡಿ ಈಗ ಇವರನ್ನು ಯಾರ್ ಕೇಳುತ್ತಾರೆ ಅನ್ನುವ ಕುಹೂಕ ಮಾತುಗಳು ಕೇಳಿ,ಅವು ನಮ್ಮ ಗಮನಕ್ಕೆ ಬಂದಾಗ ತುಟಿ ಅಂಚಿನಲ್ಲಿ ಮುಗುಳ್ನಗೆ ತೋರಿ ಸುಮ್ಮನೆ ಇರಬೇಕಾದ ಪರಿಸ್ಥಿತಿ ಬಂದರು ಧೈರ್ಯ ಗೆಡದೆ ಮುಂದುವರೆದು ಬದುಕು ಕಟ್ಟಿಕೊಂಡ ಆಡಿದವರ ಬಾಯಲ್ಲಿ ಫಿನಿಕ್ಸ್ ಹಕ್ಕಿತರ ಹೆಂಗ್ ಎದ್ದು ಬಂದ್ರುನೋಡಿ ಅನ್ನುವಲ್ಲಿಗೆ ಸಮಾಧಾನ ಆಗುತ್ತದೆ.

ಇದನ್ನೆಲ್ಲಾ ನೆನಪಿಸಿಕೊಂಡ ಮೇಲೆ, ಹೀಗೆಲ್ಲಾ ಬದುಕಿದಮೇಲೆ, ಇಷ್ಟೆಲ್ಲಾ ಆದ ಮೇಲೂ ಯಾರನ್ನೋ ದೂರದೇ ಎಲ್ಲೇ ಇದ್ದರೂ ಹೋರಾಟ ಮಾಡುತ್ತ, ಇರೋದು ಇದೆಯಲ್ಲಾ… ಇದೇ ನಿಜವಾದ COMRED (ಸಂಗತಿ ) ಗುಣ. ಇದನ್ನೆಲ್ಲಾ ಕಲಿಯಬೇಕು ಅಂದ್ರೆ ಕೂಲಿ ಕಾರ್ಮಿಕರ, ವಿದ್ಯಾರ್ಥಿ, ಯುವಜನರ ಮದ್ಯ, ಕೊಳಗೇರಿ, ಮಹಲುಗಳ ನಡುವೆ, ಹಳ್ಳಿಯ ಕೊಂಪೆಗಳಿಂದ ನಗರದ ಸ್ಲಂ ವರೆಗೆ ಎಲ್ಲಾ ಜಾತಿ, ಜನರ ಮದ್ಯ ಬೇರೆಯೋದು ಇದೆಯಲ್ಲ. ಬೇರೆಯಲು ಕಲಿಸುತ್ತೀದೆಯಲ್ಲ ಇದೇ ನಿಜವಾದ ಹೋರಾಟ. ಕೇವಲ ಒಂದಿಷ್ಟು ಜನ ಕೂಡಿ, ಮನವಿ ಕೊಟ್ಟು, ಪೇಪರ್‌‌ಗೆ ಸುದ್ದಿ ಕೊಡೋದು. ಅದು ಪೇಪರ್ ಅಲ್ಲಿ ಬಂದ್ರೆ ಮುಗಿತು ಹೋರಾಟ. ಅದು ಈಗಿನ ಹೋರಾಟ.

ಲಾಸ್ಟ ಪಂಚ್ : ವಿದ್ಯಾರ್ಥಿ ಹೋರಾಟದಲ್ಲಿ ತೊಡಗಿಸಿಕೊಂಡು, ಕಲಿಕೆಯಲ್ಲೂ ಫಸ್ಟ್ ಕ್ಲಾಸ್ ಶ್ರೇಣಿಯಲ್ಲಿ ಪಾಸಾಗುತ್ತಾ, ನೂರಾರು ವಿದ್ಯಾರ್ಥಿಗಳ ಓದಿಗೆ, ವಸತಿಗೆ ವೈಯಕ್ತಿಕ ಸಂಪರ್ಕ ಬಳಸಿ ಸಹಾಯ ಮಾಡಿ, ನಾವು ಅದೆಷ್ಟೋ ಬಾರಿ ಒಂದೊಂದು ದಿನ ಪಾರ್ಲೆ ಜಿ ಎಂಬ ಒಂದೇ ಒಂದು ಬಿಸ್ಕೆಟ್ ಪ್ಯಾಕೆಟ್ ಇಬ್ಬರೂ ತಿಂದರು ಮತ್ತೆ ಹೋರಾಟಕ್ಕೆ, ಚಳುವಳಿಗೆ ಕರೆದೋಯ್ಯಿದಿರೋದು ನಮ್ಮಲ್ಲಿದ್ದ ಹೋರಾಟದ ಹುಚ್ಚು. ಇದು ನಿಜವಾದ ಹೋರಾಟವಾ? ಡೋಂಗಿ ಹೋರಾಟವಾ? ಜನರೇ ಹೇಳಬೇಕು.

ಲೇಖನ: ಭೀಮನಗೌಡ ಪರಗೊಂಡ. ವಕೀಲರು

ಜಿಲ್ಲೆ

ರಾಜ್ಯ

error: Content is protected !!