Saturday, July 27, 2024

ಕಸಾಪ ವಾಹನ ಬಳಸದ ಸಂಭಾವನೆ ಪಡೆಯದ ಅಭ್ಯರ್ಥಿಗೆ ಮತ ನೀಡಿ; ಸಾಹಿತಿ ಸಿದ್ದರಾಮ

ಈ ಬಾರಿ ಜನಸಾಮಾನ್ಯರೊಬ್ಬರು ಕಸಾಪ ಅಧ್ಯಕ್ಷರಾಗಲಿ.

ಕನ್ನಡ ಸಾಹಿತ್ಯ ಪರಿಷತ್ತು ಅಂದರೆ ಅದೊಂದು ನಿವೃತ್ತ ಅಧಿಕಾರಿಗಳ ವಿಶ್ರಾಂತಿ ತಾಣ ಆಗಿದ್ದು, ರಾಜಕಾರಣಿಗಳ ತೆರನಾಗಿ ತಮ್ಮ ಪರವಾದ ಬಹುಪರಾಕ್ ಗಳನ್ನು ಹಾಕುವ ಅಡ್ಡಡ್ಡ ಉದ್ದುದ್ದ ಫ್ಲೆಕ್ಸು, ಬ್ಯಾನರ್ರು, ಕಟೌಟ್ ಗಳನ್ನು ಹಾಕಿಕೊಳ್ಳುವ ನಾಯಕರಿಗೆ ಬೆನ್ನು ಚಪ್ಪರಿಸುತ್ತ ಅತ್ಯಂತ ನಿಜವಾದ ಪ್ರಬುದ್ದತೆಯ ಬರವಣಿಗೆಯಲ್ಲಿ ತೊಡಗಿದವರನ್ನು ಗುರುತಿಸುವ ಮತ್ತು ಪ್ರೋತ್ಸಾಹಿಸುವ ಕೆಲಸ ಮಾಡದೇ ಸರ್ಕಾರೋ ಎ.ಸಿ ಕಾರು ಹೋದಲ್ಲೆಲ್ಲ ಸರ್ಕಾರಿ ಸೌಲಭ್ಯ ಪಡೆದುಕೊಳ್ಳುತ್ತ ಮಜಾ ಮಾಡುವ ಮೋಜಿನ ತಾಣವಾಗಿದೆ.

ಹೀಗಾಗಿ ಈ ಸಲದ ಚುನಾವಣೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಎಂತಹ ಅಭ್ಯರ್ಥಿ ಆಯ್ಕೆ ಆದರೆ ಉತ್ತಮ ಅನ್ನೋ ನಿಟ್ಟಿನಲ್ಲಿ ಈ ಕೆಲವು ಸಲಹೆಗಳು ತುಂಬಾನೇ ಸೂಕ್ತ ಅನ್ನಿಸಿದ್ವು.

ಪರಿಷತ್ತಿನ ಅಧ್ಯಕ್ಷರು ಶೋಮ್ಯಾನ್ ಆಗಿರದೇ ಸರಳತೆ ಉಳ್ಳವರಾಗಿರಬೇಕು. ಯಾವೊಂದು ಪಕ್ಷಕ್ಕೂ ಅಂಟಿಕೊಳ್ಳದೇ ಪರಿಷತ್ತಿನ ಶ್ರೇಯೋಭಿವೃದ್ದಿಗೆ ಅನುದಾನ ತರುವ ನಿಟ್ಟಿನಲ್ಲಿ ಸರ್ಕಾರವನ್ನು ಒತ್ತಾಯಿಸುವಂತಿರಬೇಕು. ಮುಖ್ಯವಾಗಿ ಕನ್ನಡ ಸರಕಾರಿ ಶಾಲೆಗಳ ಪರ ಒಂದು ಚಳವಳಿಯನ್ನೇ ರೂಪಿಸಬೇಕು.

ಹಿಂದಿ ಹೇರಿಕೆಯ ಪ್ರಯತ್ನ ಪದೇ ಪದೇ ನಡೀತಾ ಇದ್ದು ರಾಜ್ಯದಲ್ಲಿ ಕನ್ನಡವನ್ನು ಕಡ್ಡಾಯಗೊಳಿಸಲು ಸರ್ಕಾರಕ್ಕೆ ಒತ್ತಾಯಿಸಬೇಕು. ಸರಕಾರ ಕ.ಸಾ.ಪ.ಕ್ಕೆ ನೀಡುವ ಅನುದಾನ ಭಿಕ್ಷೆಯಲ್ಲ, ಅದು ಜನರಿಂದ ಸಂಗ್ರಹಗೊಂಡ ಹಣದಲ್ಲಿ ಸಾಹಿತ್ಯಿಕ, ಸಾಂಸ್ಕೃತಿಕ, ನೆಲ-ಜಲ-ಭಾಷೆ ರಕ್ಷಣೆಗೆ ಕ.ಸಾ.ಪ. ಪಡೆಯಬೇಕಾದ ಹಕ್ಕಿನ ಹಣ. ವರ್ಷಕ್ಕೊಂದು ವಿಜೃಂಭಣೆಯ ಸಮ್ಮೇಳನ ನಡೆಸಿ ಮಲಗಿ ಬಿಡುವ ಅಧ್ಯಕ್ಷರಿಗಿಂತ ವಾರಕ್ಕೊಮ್ಮೆಯಾದರೂ ಸಾಹಿತ್ಯ ಪ್ರೇಮಿಗಳನ್ನು ಒಂದೆಡೆ ಸೇರಿಸುವ, ಪುಸ್ತಕ ಪ್ರಕಟಣೆ, ಶಾಲಾ-ಕಾಲೇಜುಗಳಲ್ಲಿ ಮಕ್ಕಳ ಮನಸ್ಸು ಅರಳಿಸುವ ಸಾಹಿತ್ಯಿಕ-ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಕ್ರಿಯಾಶೀಲತೆ ಹೊಂದಿವರಾಗಿರಬೇಕು. ಕ.ಸಾ.ಪ.ದ ನಡೆ-ನುಡಿ-ನಿರ್ಣಯಗಳನ್ನು ಆರೋಗ್ಯಕರವಾಗಿ ಟೀಕಿಸುವವರನ್ನು ಗೌರವದಿಂದ ಕಾಣಬೇಕು. ಸೈದ್ಧಾಂತಿಕ ಮತ್ತಿತರ ಕಾರಣದಿಂದ ಕ.ಸಾ.ಪ.ದ ಪ್ರಶಸ್ತಿ, ಗೌರವಗಳನ್ನು ವಾಪಾಸು ಮಾಡುವವರ ಭಾವನೆಗಳನ್ನು ಗೇಲಿ ಮಾಡುವಂತಿರಬಾರದು. ಸ್ವ-ಹಿತಾಸಕ್ತಿಗಾಗಿ ಅಧಿಕಾರದ ದುರಾಸೆಗಾಗಿ ಮೂರು ವರ್ಷದ ಅವಧಿಯನ್ನು ಐದು ವರ್ಷಕ್ಕೆ ಏರಿಸಿದ ಪ್ರಸ್ತುತ ಅಧ್ಯಕ್ಷರಂತೆ ಸ್ವ-ಹಿತಾಸಕ್ತಿಗೆ ಅಧಿಕಾರ ಬಳಸಿಕೊಳ್ಳುವಂತರಿರಬಾರದು. ಪರಿಷತ್ತು ಸದಸ್ಯರ ಸಂಖ್ಯೆಯನ್ನು ಕೇವಲ ಮತದಾನದ ಆಸೆಗಾಗಿ ಮಾಡಿಸದೇ ಈವರೆಗೂ ಸದಸ್ಯರಾಗದೇ ಹಪಹಪಿಸುತ್ತಿರುವ ಆಸಕ್ತರನ್ನು ಗುರುತಿಸಿ 10 ಲಕ್ಷದಷ್ಟು ಸದಸ್ಯರನ್ನಾಗಿಸಲು ಶ್ರಮ ಪಡುವಂತವರಾಗಬೇಕು.ಜಾತಿ-ಮತ-ಪಂಥ-ಪ್ರದೇಶ-ಸಿದ್ಧಾಂತದ ಎಲ್ಲ ಎಲ್ಲೆಗಳನ್ನು ಮೀರಿ ಸರ್ವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುವವರಾಗಿರಬೇಕು.
ಇಷ್ಟೊಂದು ಸಲಹೆಗಳು ಅಭಿಪ್ರಾಯ ಗಳು ನಾಡಿನ ಸಹಸ್ರಾರು ಕನ್ನಡಾಭಿಮಾನಿಗಳ ಒಟ್ಟಾರೆ ಅಭಿಪ್ರಾಯವಾಗಿದ್ದು ಈ ಎಲ್ಲ ಆಶಯಗಳು ಬಹುಶಃ ತಮ್ಮಂತ ಸರಳ ಕನ್ನಡಿಗರಿಂದ ಮಾತ್ರ ಈಡೇರಬಹುದು ಅನ್ನೋ ಆಶಯದೊಂದಿಗೆ ಈ ಬಾರಿ ತಮ್ಮನ್ನು ಬೆಂಬಲಿಸುತ್ತಿದ್ದೇನೆ.
ಈ ವಿಚಾರಗಳು ಇಷ್ಟವಾದವರು ದಯವಿಟ್ಟು ರಾಜಶೇಖರ ಮುಲಾಲಿ ಅವರಿಗೆ ಮತದಾನ ಮಾಡುವ ಮೂಲಕ ಗೆಲ್ಲಿಸುವಂತೆ ವಿನಂತಿಸಿಕೊಳ್ಳುವೆ.
ಅಭ್ಯರ್ಥಿ: ರಾಜಶೇಖರ ಮುಲಾಲಿ
ಕ್ರ.ಸಂ: 10
ಮತದಾನ ದಿನಾಂಕ: 21-11-2021

ಲೇಖಕರು: ಸಿದ್ದರಾಮ ತಳವಾರ

ಜಿಲ್ಲೆ

ರಾಜ್ಯ

error: Content is protected !!