Saturday, June 15, 2024

ಕನ್ನಡವನ್ನು ಬಳಸಿ ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ಕನ್ನಡಿಗರದ್ದಾಗಿದೆ: ಶಿಕ್ಷಕ ವಿಜಯ ಬನಶೆಟ್ಟಿ

ಬೈಲಹೊಂಗಲ:ಕನ್ನಡವನ್ನು ಬಳಸಿ ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ಕನ್ನಡಿಗರದ್ದಾಗಿದೆ ಎಂದು ಮುಖ್ಯಶಿಕ್ಷಕ ವಿಜಯ ಬನಶೆಟ್ಟಿ ಹೇಳಿದರು.ಬೈಲಹೊಂಗಲ ತಾಲೂಕಿನ ಯರಡಾಲ ಸರಕಾರಿ ಹಿರಿಯ ಪ್ರಾಥಮಿಕ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ 66 ನೆಯ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಕ್ಕಳನ್ನು ಉದ್ದೇಶಿಸಿ ಅವರು ಮಾತನಾಡಿದರು.

ಮಕ್ಕಳು ಕನ್ನಡ ಸಾಹಿತ್ಯ, ಕಲೆ, ಸಂಸ್ಕೃತಿ, ಪರಂಪರೆ, ಇತಿಹಾಸದ ಬಗ್ಗೆ ತಿಳಿದುಕೊಂಡು ನಾಡು ನುಡಿಯ ಬಗ್ಗೆ ಹೆಮ್ಮೆ ಪಡಬೇಕು ಎಂದು ಅವರು ಹೇಳಿದರು. ಕನ್ನಡದ ಕೀರ್ತಿ ವಿಶ್ವದೆಲ್ಲೆಡೆ ಹರಡುವಂತೆ ಸಾಧನೆ ಮಾಡಲು ಮಕ್ಕಳಿಗೆ ಕರೆ ಕೊಟ್ಟರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ಭಾಷಣ, ಗಾಯನದಲ್ಲಿ ಕನ್ನಡಾಭಿಮಾನವನ್ನು ಪ್ರದರ್ಶಿಸಿದರು.

ಭುವನೇಶ್ವರಿ ಭಾವಚಿತ್ರ ಮೆರವಣಿಗೆಯಲ್ಲಿಯ ಚಿತ್ರ

ನಂತರ ಯರಡಾಲ ಗ್ರಾಮದ ಯುವಕರು ಹಾಗೂ ಶಾಲಾ ಮಕ್ಕಳು ಕನ್ನಡ ಧ್ವಜಗಳೊಂದಿಗೆ ಭುವನೇಶ್ವರಿ ಭಾವಚಿತ್ರವನ್ನು ಊರಿನ ತುಂಬ ಮೆರವಣಿಗೆ ಮಾಡಿ ಜೈಕಾರ ಹಾಕಿದರು.

ಕಾರ್ಯಕ್ರಮದಲ್ಲಿ ಶಿಕ್ಷಕರಾದ ಬಸವರಾಜ ಅಂಕಲಗಿ,
ವಿ.ಯ.ಕರ್ಲಪ್ಪನವರ, ಸಿ ಎಂ ಗಡದೇವರ, ಪಿ ಎಸ್ ಸಂಗವಿರಿ, ಎಸ್ ಎ ಕಾಜಗಾರ, ಕಾವೇರಿ ಬ ಗಡ್ಡಿ. ಅಂಗನವಾಡಿ ಕಾರ್ಯಕರ್ತರಾದ ದುಂಡವ್ವ ಮುರಗೋಡ, ಗಂಗವ್ವ ರಾಜಗೋಳಿ, ಲಕ್ಷ್ಮಿ ಮಡಿವಾಳರ ಹಾಗೂ ಗ್ರಾಮದ ಮುಖಂಡರಾದ ಈರಣ್ಣ ವಾರದ,ಸುರೇಶ ಹೂಗಾರ,ಉಮೇಶ ಗೌರಿ, ಭೀಮಪ್ಪ ಕಮತಗಿ ,ಮಂಜುನಾಥ ರಾಜಗೋಳಿ, ಶ್ರೀಶೈಲ ಪಾಟೀಲ, ಅಮೃತ ಖೋದಾನಪೂರ, ಸಂತೋಷ ಪಾಟೀಲ, ಪರುಷು ದೇವಲಾಪೂರ, ನಾಗರಾಜ ಬೈಲಪ್ಪನವರ, ಗಂಗಾಧರ ಬಡಿಗೇರ ,ಸಂತೋಷ ದೇವಲಾಪೂರ, ಎಸ್ ಎಂ ಪಾಟೀಲ್ ,ಉದಯ ಬಡಿಗೇರ, ಕುಮಾರ ಮುರಗೋಡ.
ಆಶಾ ಕಾರ್ಯಕರ್ತರು,ಗ್ರಾಮದ ಯುವಕರು ಹಿರಿಯರು ಸೇರಿದಂತೆ ಅನೇಕರು ಇದ್ದರು.

ಜಿಲ್ಲೆ

ರಾಜ್ಯ

error: Content is protected !!