Saturday, July 27, 2024

ಕಿತ್ತೂರು ಯುವಪಡೆ ವತಿಯಿಂದ ವಿಭಿನ್ನ ರೀತಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ

ಸುದ್ದಿ ಸದ್ದು ನ್ಯೂಸ್

ಚನ್ನಮ್ಮ ಕಿತ್ತೂರು (-1): ಕರ್ನಾಟಕ ರಾಜ್ಯೋತ್ಸವವನ್ನು ಪ್ರತಿ ವರ್ಷ ನವೆಂಬರ್‌ ೧ ರಂದು ಅತಿ ವಿರ್ಜಂಭನೆಯಿಂದ ಆಚರಿಸಲಾಗುತ್ತದೆ ಮತ್ತು ಒಬ್ಬರು ಒಂದೊಂದು ತರಹ ಆಚರಿಸುತ್ತಾರೆ. ಈ ವರ್ಷ ಯುವರತ್ನ ಪುನಿತ್‌ ರಾಜಕುಮಾರ್‌ ಅವರ ಅಕಾಲಿಕ ಮರಣದ ಹಿನ್ನಲೆಯಲ್ಲಿ ಶೋಕಾಚರಣೆ ಇರುವುದರಿಂದ ಸಾಂಕೇತಿಕವಾಗಿ ಅತ್ಯಂತ ಸರಳವಾಗಿ ಆಚರಿಸುವ ಮಾರ್ಗಸೂಚಿಯಂತೆ ನರ್ನಾಟಕದಾದ್ಯಂತ ಸರಳ ಆಚರಣೆಯಲ್ಲಿ ಅಭಿಮಾನಿಗಳು ತಯಾರಾಗಿದ್ದಾರೆ. ಆದರೆ ಕಿತ್ತೂರಿನ ಯುವಪಡೆ ವಿಬಿನ್ನ ರೀತಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ ಮಾಡುವ ಮುಖಾಂತರ ನಾಡಿನ ಸಮಸ್ತ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.

 

     ಬಣ್ಣ ಬಳಿಯುವುದಕ್ಕಿಂತ ಮೊದಲಿನ ಭಾವಚಿತ್ರ

 

ಹೌದು ಈ ಸ್ಟೋರಿ ನೋಡಿರಿ ನಿಮಗೆ ತಿಳಿಯತ್ತದೆ. ಬಹತೇಕ ಕನ್ನಡಿಗರು ಕರ್ನಾಟಕ ರಾಜ್ಯೋತ್ಸವವನ್ನು ಡಿಜೆ, ಡಾಲ್ಬಿಅಂತಹ ಸೌಂಡ್‌ ಸಿಸ್ಟಮ್‌ ಹಚ್ಚಿಕೊಂಡು ನಾಡಭಕ್ತಿಗೀತೆಯ ತಾಳಕ್ಕೆ ತಕ್ಕಂತೆ ಕುಣಿದು ಕುಪ್ಪಳಿಸುವ ಇಂದಿನ ದಿನಮಾನದಲ್ಲಿ ಮಾಜಿ ತಾಲೂಕಾ ಪಂಚಾಯತ ಉಪಾಧ್ಯಕ್ಷ ಹಾಗೂ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ ವಾಳದ ಅವರ ನೇತೃತ್ವದಲ್ಲಿ ಅವರ ಗೆಳೆಯರ ಬಳಗದ ವತಿಯಿಂದ ಪಟ್ಟಣದ ಸೋಮವಾರ ಪೇಟೆಯ ಗಣಪತಿ ಗಲ್ಲಿಯಲ್ಲಿ ಇರುವ ಬಸ್‌ ನಿಲ್ದಾಣವನ್ನು ಸ್ವಚ್ಚಗೊಳಿಸಿ ಕರ್ನಾಟಕ ಧ್ವಜ ಹೋಲುವ ಕೆಂಪು ಮತ್ತು ಬಳದಿ ಬಣ್ಣ ಬಳಿದು ವಿಭಿನ್ನ ರೀತಿಯಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸುವ ಮುಖಾಂತರ ಸಾರ್ವಜನಿಕರ ದೃಷ್ಠಿಯನ್ನು ತಮ್ಮತ್ತ ಸೆಳದಿದ್ದಾರೆ.

           ಬಣ್ಣ ಬಳಿದ ನಂತರದ ಭಾವಚಿತ್ರ.

ಕಿರಣ ವಾಳದ ಮತ್ತು ಅವರ ಗೆಳೆಯರ ಬಳಗದ ಸತೀಶ ಲಂಗೋಟಿ, ಶ್ರೀಧರ ಲೋಕಾಪೂರ, ವಿನಯ ಚಿನಗುಡಿ, ವಿಶಾಲ ಬಡಿಗೇರ, ಮಲ್ಲಿಕಾರ್ಜುನ ಪಾಟೀಲ, ರಾಜು ಚಿನಗುಡಿ, ಅನಿಲ ಬೆಳವಡಿ, ಹಣುಮಂತ ತಳವಾರ, ಶಂಕರ ಜಡಿ, ಜೋತಿಭಾ ಅವರನ್ನು ನಾಡಿನ ಸಮಸ್ತ ಜನರು ಅಭಿನಂದಿಸಿದ್ದಾರೆ.

 

ಜಿಲ್ಲೆ

ರಾಜ್ಯ

error: Content is protected !!