Wednesday, September 18, 2024

ವೀರಕನ್ನಡಿಗ ಅಪ್ಪು ಅಂತ್ಯಸಂಸ್ಕಾರ

ಬೆಂಗಳೂರು:31: ಚಂದನವನದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (46) ರವರ ಅಂತ್ಯಸಂಸ್ಕಾರ ಇಂದು ನಸುಕಿನ ಜಾವ 8.00 ಗಂಟೆಗೆ ನಗರದ ಕಂಠೀರವ ಸ್ಟೇಡಿಯಮ್ ನಲ್ಲಿ ಡಾ.ರಾಜ್ ಸಮಾಧಿ ಪಕ್ಕದಲ್ಲಿ ಈಡಿಗ ಸಂಪ್ರದಾಯದ ವಿಧಿ ವಿಧಾನಗಳ ಪ್ರಕಾರ ನೆರವೇರಿತು.

ಶುಕ್ರವಾರ ನಸುಕಿನ ಜಾವದಲ್ಲಿ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ ನಟ ಪುನೀತ್ ರಾಜ್ ಕುಮಾರ್ ಅವರ ಪಾರ್ಥೀವ ಶರೀರವನ್ನು ಕಂಠೀರವ ಸ್ಟುಡಿಯೋನಲ್ಲಿ ಬೆಳೆಗ್ಗೆ 3.30 ರಿಂದ ಮೆರವಣಿಗೆ ಮೂಲಕ ಅಂತಿಮ ಯಾತ್ರೆ ನಡೆಸಲಾಯಿತು. ಪುಷ್ಪಾಲಂಕಾತವಾದ ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಿದ ನಂತರ ಸರ್ಕಾರದಿಂದ ಗೌರವ ನಮನಗಳನ್ನು ಸಲ್ಲಿಸಲಾಯಿತು. ಮೂರು ಸುತ್ತು ಕುಶಾಲು ತೋಪು ಸಿಡಿಸಿ ಅಪ್ಪು ಪಾರ್ಥೀವ ಶರೀರಕ್ಕೆ ಹೊದಿಸಲಾಗಿದ್ದ ರಾಷ್ಟ್ರಧ್ವಜವನ್ನು ಅವರ ಕುಟುಂಬ ಅಶ್ವಿನಿ ಅವರಿಗೆ ಮಾನ್ಯ ಮುಖ್ಯಮಂತ್ರಿಗಳು ಹಸ್ತಾಂತರಿಸಿದರು. ನಂತರ ಈಡಿಗ ಸಂಪ್ರದಾಯದ ಪ್ರಕಾರ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.

ಅಪ್ಪನನ್ನು ನೆನೆದು ಬಿಕ್ಕುತ್ತಿರುವ ಮಗಳು ದೃತಿ

“‘ಅಭಿ’ಮಾನಿಗಳ ಆಕ್ರಂದನ”
ಕಳೆದ ಮೂರು ದಿನಗಳಿಂದ ಸಾಗರೋಪಾದಿಯಲ್ಲಿ ಹರಿದು ಬರುತ್ತಿರುವ ಅಪ್ಪು ಅಭಿಮಾನಿಗಳು ನೆಚ್ಚಿನ ನಟನ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕುತ್ತಿರುವ ದೃಶ್ಯ ಮನಕಲುಕುವಂತಿತ್ತು. ಹಿರಿಯ ಸಹೋದರ ರಾಘವೇಂದ್ರ ರಾಜಕುಮಾರ ಅವರ ವಿನಂತಿಯ ಮೇರೆಗೆ ಅಭಿಮಾನಿಗಳು ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದೇ ಶಾಂತರೀತಿಯಲ್ಲಿ ಸಹಕರಿಸಿದ್ದು ವಿಶೇಷವಾಗಿತ್ತು.
ತಮಿಳು ತೆಲುಗು ಚಿತ್ರರಂಗದ ಹಲವಾರು ಪ್ರಸಿದ್ದ ನಟ ನಟಿಯರು, ರಾಜ್ಯದ ಮುಖ್ಯಮಂತ್ರಿ ಬೊಮ್ಮಾಯಿ ಸೇರಿದಂತೆ ಇಡೀ ಸರ್ಕಾರ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲಾದವರು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.

ಪತ್ನಿ ಅಶ್ವಿನಿಗೆ ರಾಷ್ಟ್ರಧ್ವಜ ಹಸ್ತಾಂತರಿಸುತ್ತಿರುವ ಮುಖ್ಯಮಂತ್ರಿಗಳು

ಐವರು ಅಭಿಮಾನಿಗಳ ಸಾವು
ನೆಚ್ಚಿನ ನಟನ ಸಾವಿನ ಸುದ್ದಿಯನ್ನು ಸಹಿಸಿಕೊಳ್ಳಲು ಸಾಧ್ಯವಾಗದೇ ರಾಜ್ಯದಲ್ಲಿ ಒಟ್ಟು ಐದು ಜನ ಅಪ್ಪು ಅಭಿಮಾನಿಗಳು ಸಾವನ್ನಪ್ಪಿದ್ದು, ಇನ್ನೂ ನಾಲ್ಕು ಜನ ಸಾವಿನ ದವಡೆಯಿಂದ ಪಾರಾಗಿದ್ದಾರೆ.

ಮಣ್ಣಲ್ಲಿ ಮಣ್ಣಾದ ‘ನಟಸಾರ್ವಭೌಮ
ಇಡೀ ಚಿತ್ರರಂಗವನ್ನೇ ಸ್ಥಬ್ಧಗೊಳಿಸಿದ ಅಪ್ಪು ಸಾವಿನ ಸುದ್ದಿ ಅಸಂಖ್ಯಾತ ನಟರನ್ನು ದಂಗು ಬಡಿಸಿದೆ. ಅಪ್ಪು ಅವರ ಈ ಅಕಾಲಿಕ ಮರಣದಿಂದ ಕರುನಾಡೇ ಕಂಬನಿ ಇಡುತ್ತಿದ್ದು ಅಪ್ಪು ಅಭಿಮಾನಿಗಳು ಆಪ್ತರು ಕುಟುಂಬವರ್ಗ ದುಃಖ ಸಾಗರದಲ್ಲಿ ಮುಳುಗಿದೆ. ದೂರದ ಅಮೇರಿಕಾದಿಂದ ಆಗಮಿಸಿದ ಅಪ್ಪು ಕಿರಿಯ ಪುತ್ರಿ ದೃತಿ ಅಪ್ಪನ ತಲೆ ನೇವರಿಸಿ ದುಃಖ ತಪ್ತಳಾದ ಆ ಕ್ಷಣ ಸೇರಿದ್ದ ಎಲ್ಲರ ಎದೆಯಲ್ಲೂ ನಡುಕ ಹುಟ್ಟಿಸುವಂತಿತ್ತು. ಕಲ್ಲೂ ಕೂಡ ಕರುಗುವಂತ ಸರಳತೆಯ ನಟಸಾರ್ವಭೌಮ ಮಣ್ಣಲ್ಲಿ ಮಣ್ಣಾದ ಈ ಹೊತ್ತಲ್ಲಿ ಅವರ ಅಪಾರ ಅಭಿಮಾನಿ ವರ್ಗ ಶೋಕಸಾಗರದಲ್ಲಿ ಮಿಂದೆದ್ದಿದೆ.

ಅಂತ್ಯ ಸಂಸ್ಕಾರ ದಲ್ಲಿ ಭಾಗಿಯಾದ ನಟ ಜ್ಯೂ.ಎನ್.ಟಿ.ಆರ್

ಅಂತಿಮ ವಿಧಿವಿಧಾನ ಪೂರೈಸಿದ ನೆಚ್ಚಿನ ಸುಪುತ್ರ
ಅಪ್ಪು ಅವರಿಗೆ ಎರಡು ಹೆಣ್ಣುಮಕ್ಕಳಿದ್ದರೂ ಹಿರಿಯಣ್ಣ ರಾಘವೇಂದ್ರ ರಾಜಕುಮಾರ ಅವರ ಸುಪುತ್ರ ಅಪ್ಪು ಅವರ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು. ಸೋದರಿ ವಂದಿತ ಮತ್ತು ದೃತಿ ಅಪ್ಪು ಪತ್ನಿ ಅಶ್ವಿನಿ ಸಹೋದರರಾದ ರಾಘವೇಂದ್ರ ರಾಜಕುಮಾರ ಶಿವರಾಜಕುಮಾರ ದಂಪತಿಗಳು ಅವರ ಆಪ್ತ ಕುಟುಂಬವರ್ಗ ಈ ಸಂದರ್ಭದಲ್ಲಿ ಅಪ್ಪು ಅಗಲಿಕೆಗೆ ಕಂಬನಿ ಮಿಡಿದರು.

ಅಪ್ಪುವಿನ ಸಮಾಧಿ ಮೇಲಿಟ್ಟ ದೀಪ

ಜಿಲ್ಲೆ

ರಾಜ್ಯ

error: Content is protected !!