Sunday, September 8, 2024

ಅಪ್ಪುವಿನ ಆತ್ಮಕ್ಕೆ ಶಾಂತಿ ಸಿಗಲೆಂದು ಕ್ಯಾಂಡಲ್ ಹಚ್ಚಿದ ಯರಡಾಲದ ಯುವಕರು

ಬೈಲಹೊಂಗಲ ತಾಲೂಕಿನ ಯರಡಾಲ ಗ್ರಾಮದಲ್ಲಿ ಪುನೀತ್ ರಾಜ್ ಕುಮಾರ್ ಅಭಿಮಾನಿ ಬಳಗ ವತಿಯಿಂದ ಅಪ್ಪುವಿನ ಆತ್ಮಕ್ಕೆ ಶಾಂತಿ ಸಿಗಲೆಂದು ಕ್ಯಾಂಡಲ್ ಹಚ್ಚಿ ಮತ್ತು ಎರಡು ನಿಮಿಷ ಮೌನಾಚರಣೆಯನ್ನು ಮಾಡಿದರು…
.
ಈ ಸಂದರ್ಭದಲ್ಲಿ ಪುನಿತ್ ರಾಜಕುಮಾರ ಅಭಿಮಾನಿಗಳಾದ ಅಮೃತ ಖೋದಾನಪೂರ, ಸಂತೋಷ ಕೋಲಕಾರ, ಸಂತೋಷ ಪಾಟೀಲ್, ಬೈಲಪ್ಪನವರ ಸೇರಿದಂತೆ ಅನೇಕರು ಮಾತನಾಡಿದ ಅವರು ಅಪ್ಪು ಒಬ್ಬ ನಟ ಅಷ್ಟೆ ಅಲ್ಲದೆ ಜನ ಸೇವಕರು ಆಗಿದ್ದರು. ಅವರು ಮಾಡಿರುವ ಸೇವೆಗಳು ಇಂದಿನ ಜನ ಮರೆಯಲಾಗದು,ಕರುನಾಡು ಹಾಗೂ ಚಿತ್ರರಂಗ ಇಂದು ಒಂದು ದೊಡ್ಡ ಶಕ್ತಿಯನ್ನು ಕಳೆದುಕೊಂಡಂತಾಗಿದೆ ಎಂದು ಮನದಾಳದ ಮಾತು ತಿಳಿಸಿದರು.

ಸದ್ಯ ನಮ್ಮ ಜೊತೆ ಇಲ್ಲ ಎಂಬ ವಿಷಯ ಅಭಿಮಾನಿಗಳಿಗೆ ದುಃಖ ಸಹಿಸಕ್ಕೆ ಆಗುತ್ತಿಲ್ಲ.ಆದರೆ ದುಃಖ ಸಹಿಸುವ ಶಕ್ತಿ ಅಪ್ಪುವಿನ ಕುಟುಂಬಕ್ಕೆ ಮತ್ತು ಅಭಿಮಾನಿಗಳಿಗೆ ಆ ದೇವರು ನೀಡಲೆಂದು ಆಶಿಸುತ್ತೇನೆ ಹಾಗೆ ಅಪ್ಪು ನಮ್ಮನ್ನು ಬಿಟ್ಟು ಎಲ್ಲಿ ಹೋಗಿಲ್ಲ ಅವರ ಮಾಡಿರುವ ಸಾಮಾಜಿಕ ಸೇವೆಗಳು ಮರೆಯಲಾಗದಂತವು ಆ ನೆನಪುಗಳ ಜೊತೆ ಅವರು ಇಂದಿಗೂ ಮತ್ತು ಮುಂದೆಂದಿಗೂ ನಮ್ಮ ಜೊತೆ ಇರುವದು ಎಂದು ನೆನೆದು ತಮ್ಮ ಆತ್ಮಾಭಿಮಾನ ತೋರಿಕೊಂಡರು…
.
ಈ ಸಂದರ್ಭದಲ್ಲಿ ಯರಡಾಲ ಗ್ರಾಮದ ಯುವಕರು ಅಭಿಮಾನಿಗಳು ಸೇರಿದಂತೆ ಮತ್ತಿತರು ಇದ್ದರು…
.

ಜಿಲ್ಲೆ

ರಾಜ್ಯ

error: Content is protected !!