Tuesday, September 17, 2024

ಹಿರೇಬಾಗೇವಾಡಿ ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಜಾಗದಲ್ಲಿಯ ಗಿಡಮರಗಳ ದರೋಡೆ

ಬೆಳಗಾವಿ (ಅ.29): ತಾಲೂಕಿನ ಭೂತರಾಮಹಟ್ಟಿಯಲ್ಲಿ ಇರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವನ್ನು ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿಗೆ ಸ್ಥಳಾಂತರಿಸಲಾಗಿದ್ದು, ಈ ನೂತನ ವಿಶ್ವವಿದ್ಯಾಲಯ ನಿರ್ಮಾಣಕ್ಕೆ ಮೀಸಲು ಇಟ್ಟ ನೂರಾರು ಎಕರೆ ಖುಲ್ಲಾ ಜಾಗದಲ್ಲಿ ಸಾಗುವಾನಿ, ನಿಲಗೇರಿ ಸೇರಿದಂತೆ ಇನ್ನೂ ಅನೇಕ ತರಹದ ಮರಗಳು ಇದ್ದು ಆ ಮರಗಳನ್ನು ಅಪರಿಚಿತರು ಲಾರಿಗಟ್ಟಲೆ ಕಡೆದು ಕೊಂಡು ಹೋಗುತ್ತಿದ್ದಾರೆ.

ಪರೀಶೀಲಿಸುತ್ತಿರುವ ಪೋಲಿಸ್ ಸಿಬ್ಬಂದಿ ಹಾಗೂ ಗಿಡ ಕತ್ತರಿಸುತ್ತಿರುವ ವ್ಯಕ್ತಿಗಳು

ಇದನ್ನು ಗಮನಿಸಿದ ಸ್ಥಳೀಯರು ಇಲ್ಲಿರುವ ಮರಗಿಡಗಳನ್ನು  ಯಾಕೆ ಕತ್ತರಿಸುತ್ತಿರುವಿರಿ ಎಂದು ಕಡೆದುಕೊಂಡು ಹೋಗುವವರನ್ನು ಕೇಳಿದರೆ, ನಮಗೆ ಗ್ರಾಮ ಪಂಚಾಯಿತಿಯವರು ಕಡೆದುಕೊಂಡು ಹೋಗಲು ಹೇಳಿದ್ದಾರೆ ಎಂದು ಹೇಳಿದರು.

ಇದಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ಸ್ಥಳೀಯರು ವಿಚಾರಿಸಿದಾಗ ಅದರ ಬಗ್ಗೆ ನನಗೆ ಏನು ಗೊತ್ತಿಲ್ಲ ಎಂದು ಹಾರಿಕೆ ಉತ್ತರ ನೀಡಿದ್ದಾರೆ.

ಲಾರಿ ಹಾಗೂ ಗಿಡ ಕತ್ತರಿಸುತ್ತಿರುವ ವ್ಯಕ್ತಿಗಳು

ಸ್ಥಳೀಯರ ಮೌಖಿಕ ದೂರಿನ ಮೇಲೆ ಹಿರೇಬಾಗೇವಾಡಿ ಪೋಲಿಸ್ ಠಾಣೆಯ ಸಿಬ್ಬಂದಿಗಳು ಸ್ಥಳಕ್ಕೆ ಬೇಟಿ ನೀಡಿ ಪರೀಶೀಲಿಸಿದಾಗ ಅಪರಾಧ ನಡೆದಿರುವುದು ಮೇಲನೋಟಕ್ಕೆ ಕಂಡು ಬಂದ್ರು ಕೂಡಾ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಸಾರ್ವಜನಿಕರಲ್ಲಿ ಸಂಶಯಕ್ಕೆ ಎಡೆ ಮಾಡಿಕೊಟ್ಟಂತ್ತಾಗಿದೆ.

ಗಿಡಗಳನ್ನು ಕತ್ತರಿಸಿದ ಚಿತ್ರ

 

 

ಜಿಲ್ಲೆ

ರಾಜ್ಯ

error: Content is protected !!