Thursday, September 19, 2024

ರಂಜಾನ ಸಾಹೇಬ ನದಾಪ್ :ಏಕೀಕರಣದ ಏಕೈಕ ಹುತಾತ್ಮ

1953ಅಕ್ಟೋಬರ್ 3ರಂದು  ಬಳ್ಳಾರಿ ಜನ ಭಾರಿ ಸಂತೋಷದಿಂದ ವಿಜಯೋತ್ಸವ ಆಚರಣೆಗೆ ಸಿದ್ದತೆ ಮಾಡಿಕೂಂಡಿದ್ದರು ಕಾರಣ ಇಷ್ಟೇ.ಏಕೀಕರಣದ ಸಂದಿಗ್ದ ಸಮಯದಲ್ಲಿ ಬಳ್ಳಾರಿ ಕರ್ನಾಟಕಕ್ಕೆ ಅಧಿಕೃತವಾಗಿ ಸೇರಿತ್ತು.

ಆದರೆ 2ನೇಯ ತಾರೀಖಿನಂದು ದುರಂತವೂಂದು ನಡೆದು ಹೋಗಿತ್ತು .ಅಪ್ಪಟ ಕನ್ನಡ ಪ್ರೇಮಿ ಪೈಲ್ವಾನ ರಂಜಾನ ಸಾಹೇಬ ನದಾಪ್ ನನ್ನು ದುಷ್ಕರ್ಮಿಗಳು  ಆ್ಯಸಿಡ ತುಂಬಿದ ಬಲ್ಬನ್ನು ಆತನ  ಮುಖದಮೇಲೆ ಹಾಕಿ ಜೀವಹಾನಿ ಮಾಡಿದ್ದರು

ಕರ್ನಾಟಕ ಏಕೀಕರಣದ ಸಂದಿಗ್ಧ ಸಮಯದಲ್ಲಿ ಬಳ್ಲಾರಿ ಜಿಲ್ಲಾ ವ್ಯಾಪ್ತಿಯ ಆಲೂರು ಅದವಾನಿ ಮತ್ತು ರಾಯದುರ್ಗ, ಆಂಧ್ರಪ್ರದೇಶಕ್ಕೆ ಸೇರಿದವು.ಇನ್ನುಳಿದ ಏಳು ತಾಲೂಕುಗಳು ಕರ್ನಾಟಕಕ್ಕೆ ಸೇರಿದವು.ಇದು ಕನ್ನಡ ಹೋರಾಟಗಾರ ರಿಗೆ ಸಿಕ್ಕ ಜಯವಾಗಿತ್ತು.ಈ ಕಾರಣ1953 ಅಕ್ಟೋಬರ್ 1ರ  ಮಧ್ಯರಾತ್ರಿ ಬಳ್ಳಾರಿ ಕೋಟೆಯ ಮೇಲೆ 21 ತೋಪುಗಳನ್ನು ಹಾರಿಸಿ ಸಂತಸ ಪಟ್ಟರು ಕನ್ನಡ ಹೋರಾಟಗಾರರು.

ಅಕ್ಟೋಬರ್ 3 ರಂದು ಬಳ್ಳಾರಿ ಕರ್ನಾಟಕಕ್ಕೆ ಸೇರ್ಪಡೆ ಯಾಗಿದ್ದನ್ನು ಅರ್ಥಪೂರ್ಣ ವಾಗಿ ಆಚರಿಸಲು ವಿಚಾರಿಸಿ ಅಂದಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯಾ ಅವರನ್ನು ಕಾರ್ಯಕ್ರಮಕ್ಜೆ ಆಹ್ವಾನಿಸಿದರು.

ಈ ಕಾರ್ಯಕ್ರಮದ ವೇದಿಕೆಯನ್ನು ಸಿದ್ದಪಡಿಸುವ ಜವಾಬ್ದಾರಿಯನ್ನು ಕನ್ನಡ ಕ್ರೀಯಾ ಸಮಿತಿ ಸದಸ್ಯ ಮತ್ತು ಕನ್ನಡವನ್ನೆ ಉಸಿರಾಗಿಸಿಕೂಂಡಿದ್ದ ಪಲ್ವಾನ ರಂಜಾನ ಸಾಹೇಬ್ ಗೆ ನೀಡಲಾಗಿತ್ತು.

ಬಳ್ಳಾರಿ ಕರ್ನಾಟಕ ಕ್ಕೆ ಸೇರಿದ್ದನ್ನು ಸಹಿಸಲಾಗದ ಆಂಧ್ರಪರವಾದ ಗುಂಪು ವೇದಿಕೆಗೆ ಬೆಂಕಿಯನ್ನು ಹಚ್ಚುವ ಕುತಂತ್ರಕ್ಕೆ ಮುಂದಾದದರು. ರಂಜಾನ್ ಸಾಹೇಬ ವೇದಿಕೆಯ ಕಾವಲು ಬೀಗಿಗೊಳಿಸಿದರು.ಕಾವಲು ಕಾಯಲು ತಾವೇ ಮುಂದಾದರು, ರಾತ್ರಿ ಮಲಗಿದಾಗ ದುಷ್ಕರ್ಮಿಗಳು ಮುಖದ ಮೇಲೆ ಆಸಿಡ್ ತುಂಬಿದ ಬಲ್ಬ ಎಸೆದರು.

ಇಂತಹ ವಿಷಮ ಪರಿಸ್ಥಿತಿಯಲ್ಲಿ ದುಷ್ಕರ್ಮಿಗಳನ್ನು ಹಿಡಿಯಲು ಸ್ವತಃ ಬೆನ್ನು ಹತ್ತಿದರು.ಆದರೆ ಸಿಗಲಿಲ್ಲ ನಂತರ ಇವರನ್ನು ಆಸ್ಪತ್ರೆ ಗೆ ಸೇರಿಸಿದರು ಆದರೆ ರಂಜಾನ್ ಸಾಹೇಬರ ಪ್ರಾಣ ಪಕ್ಷಿ ಹಾರಿಹೋಯಿತು.

ಶವವನ್ನು ಆಸ್ಪತ್ರೆ ಯಿಂದ ಮನೆಗೆ ತರಲು ಹೆಣಗಾಡಬೇಕಾದಂತ ಪರಿಸ್ಥಿತಿ ನಿರ್ಮಾಣವಾಯಿತು. ಅಷ್ಟೊಂದು ಅಭಿಮಾನಿಗಳನ್ನು
ಪಲ್ವಾನ ರಂಜಾನ ಸಾಹೇಬ ಹೊಂದಿದ್ದರು.

ರಂಜಾನ ಸಾಹೇಬ ನದಾಪ್ ಬಳ್ಳಾರಿ ನಗರದ ಪಿಂಜಾರವಾಡಿಯ ಹುಡುಗ.ತಂದೆಗೆ ಮಗನನ್ನು ಪೈಲ್ವಾನ್ ಮಾಡುವ ಆಸೆಯಿತ್ತು.ಇನ್ನೇನು ಮಗ ಕೈಗೆ ಬಂದ ಎನ್ನುವಷ್ಟರ ಹೊತ್ತಿಗೆ ವಿಧಿಯಾಟ ಬೇರೆಯದೇ ಆಗಿತ್ತು.ರಂಜಾನ ಸಾಹೇಬ ನದಾಫ ಕನ್ನಡ ಮಾತೆಯ ಮಡಿಲಲ್ಲಿ ಲೀನವಾಗಿದ್ದರು..

ಇವತ್ತು ಕನ್ನಡ ಹೋರಾಟಗಾರರಿಗೆ ರಂಜಾನ ಸಾಹೇಬ ನದಾಪ್ ರ ಹೆಸರು ಗೊತ್ತಿಲ್ಲ.ಆದರೆ ನಾಡು ನುಡಿಯ ಬಗ್ಗೆ ಜೀವ ಸವೆಸಿದ ಮಹನೀಯರ ಬಗೆಗೆ ತಿಳಿಯುವ ಯತ್ನವಾಗಬೇಕು.

ಇದರಿಂದ ಕನ್ನಡದ ಮನ,ಮನೆ,ಮನಸ್ಸುಗಳಲ್ಲವು ಹಿರಿ ಹಿರಿ ಹಿಗ್ಗುವವು.

ಸಮಸ್ತ ಕನ್ನಡ ಅಭಿಮಾನಿಗಳು ಕೇಲವೇ ದಿನಗಳಲ್ಲಿ ಕನ್ನಡ ರಾಜೋತ್ಸವ ಆಚರಿಸುವ ಸಂದರ್ಭ.ಕಾರಣ ಏಕೀಕರಣ ಕ್ಕೆ ತಮ್ಮನ್ನು ಗಂಧದ ಕೊರಡಿನಂತೆ ಸವೆದುಕೊಂಡವರನ್ನು ನೆನೆಯಲಿ ಎಂಬ ಆಶಾಭಾವದಿಂದ ಪೂರ್ವಭಾವಿಯಾಗಿ
ಲೇಖನವನ್ನು ಬರೆದಿರುವೆ.

“” ನಾನು ನವೆಂಬರ್ ಕನ್ನಡಿಗನಲ್ಲ ನಂಬರ ಒನ್ ಕನ್ನಡಿಗ””ಎಂದು ಕಂಗ್ಲಿಷನಲ್ಲಿ ಕನ್ನಡ ರಾಜೋತ್ಸವದ ಹಾರ್ದಿಕ ಶುಭಾಶಯಗಳುನ್ನು ನಾನೆಂದೂ ತಿಳಿಸಲಾರೆ.

ಲೇಖಕರು:ಮಹೇಶ.ನೀಲಕಂಠ.ಚನ್ನಂಗಿ.
ಮುಖ್ಯ ಶಿಕ್ಷಕರು.
ಚೆನ್ನಮ್ಮನ ಕಿತ್ತೂರ.
(M)- 9740313820

ಜಿಲ್ಲೆ

ರಾಜ್ಯ

error: Content is protected !!