Friday, April 19, 2024

ವಚನ ಪ್ರಚಾರ ಧರ್ಮಜಾಗೃತಿ ಮತ್ತು ಧಾರ್ಮಿಕ ಕಾರ್ಯ ಮಾಡಿದ ಕಕ್ಕೇರಿ ಬಿಷ್ಟಮ್ಮ

ಸುದ್ದಿ ಸದ್ದು ನ್ಯೂಸ್
ಚನ್ನಮ್ಮನ ಕಿತ್ತೂರು (ಕಕ್ಕೇರಿ) : ಡೋಹರ ಕಕ್ಕಯ್ಯ ಹಾಗೂ ಬಿಷ್ಟಮ್ಮ ಹಲವಾರು ವರ್ಷಗಳಿಂದ ಖಾನಾಪೂರ ತಾಲೂಕಿನ ಕಕ್ಕೇರಿ ಸನಿಹದಲ್ಲಿ ಎತ್ತರದ ಮಡ್ಡಿಯ (ಬೆಟ್ಟ) ಮೇಲೆ ಬಹಳ ವರ್ಷಗಳಿಂದ ವಾಸವಾಗಿದ್ದರು. ಈಗಲೂ ಅದನ್ನು ಕಕ್ಕಯ್ಯನ ಮಡ್ಡಿ (ಬೆಟ್ಟ) ಯಂದು ಕರೆಯುತ್ತಾರೆ. ಅಲ್ಲಿ ಕಕ್ಕಯ್ಯನ ಸಮಾಧಿ, ವೀರಗಲ್ಲುಗಳು, ವಾಸಮಾಡಿದ ಮನೆ ಸೇರಿದಂತೆ ಇನ್ನೂ ಅನೇಕ ಐತಿಹಾಸಿಕ ಸ್ಮಾರಕಗಳು ನೋಡಲು ಸಿಗುತ್ತವೆ. ಇದರ ಪಕ್ಕದಲ್ಲಿಯೆ ಬೃಹಧಾಕಾರದ ಕೆರೆ ಇದೆ ಅದೆ ಕೆರೆಯಿಂದ ಇಂದಿಗೂ ಸಾವಿರಾರು ಎಕರೆ ಜಮೀನುಗಳಿಗೆ ನೀರು ಸರಬರಾಜು ಮಾಡಿಕೊಂಡು ರೈತರು ವುವಸಾಯ (ಶೇತಕಿ) ಮಾಡುತ್ತಾರೆ.
ಕಲ್ಯಾಣ ಕ್ರಾಂತಿಯ ನಂತರ ಬಿಜ್ಜಳನ ಸೈನಿಕರು ಮತ್ತು ಶರಣರ ಮಧ್ಯೆ ಬೈಲಹೊಂಗಲ ತಾಲೂಕಿನ ಅಂದಿನ ಕಾದಿದವರ ಹಳ್ಳಿ ಅಂದರೆ ಇಂದಿನ ಕಾದರವಳ್ಳಿಯಲ್ಲಿ ಘನಗೋರ ಯುದ್ಧ ನಡೆಯುತ್ತದೆ ಆ ಯುದ್ಧದಲ್ಲಿ ಕಕ್ಕಯ್ಯನವರು ಗಾಯಗೊಂಡು ಕಕ್ಕಯ್ಯನ ಕೆರೆಯಲ್ಲಿ ಲಿಂಗೈಕ್ಯರಾಗುತ್ತಾರೆ ಕಾರಣ ಇದೆ ಮುಂದೆ ಕಕ್ಕೇರಿಯಾಗಿ ಜನರ ಬಾಯಿಯಲ್ಲಿ ಉಳಿಯುತ್ತದೆ.

                   ಕಕ್ಕೇರಿಯಲ್ಲಿ ಇರುವ ಕಕ್ಕಯ್ಯನ ದೇವಾಲಯ

ಕಕ್ಕಯ್ಯನ ಜೊತೆಯಲ್ಲಿ ವಾಸವಿದ್ದ ಬಿಷ್ಟಮ್ಮ ಕಕ್ಕಯ್ಯನವರ ಕಾಲವಾದ ನಂತರ ಶರಣೆ ಬಿಷ್ಟಮ್ಮ ವಚನ ಪ್ರಚಾರ ಧರ್ಮಜಾಗೃತಿ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುತ್ತಾ ಕೆಲ ದಿನಗಳ ನಂತರ ಅವಳು ಕಕ್ಕಯ್ಯನ ಕೆರಿಯಲ್ಲಿ ದೇಹತ್ಯಾಗ ಮಾಡುತ್ತಾಳೆ. ಅವಳ ಹೆಸರಿನ ಮಂದಿರಗಳು ಇಗಲೂ ನೋಡಲು ಇವೆ. ಇಂದು ಬಿಷ್ಟಮ್ಮ ದೇವಿಯ ಜಾತ್ರೆ ಅತಿ ವಿಜ್ರಂಭಣೆಯಿAದ ಆಚರಿಸುತ್ತಾರೆ. ಆ ಜಾತ್ರೆಯಲ್ಲಿ ವಚನ ಸಾಹಿತ್ಯದ ಕುರಿತು ಯಾವುದೇ ತರಹದ ಚರ್ಚೆ, ವಿಮರ್ಶೆಯಂತಹ ಕಾರ್ಯಕ್ರಮಗಳು ನಡೆಯದೆ ಇರುವದು ಖೇದಕರ.
ಇನ್ನಾದರೂ ಜಾತ್ರೆಯ ಕಮೀಟಿಯವರಾಗಲಿ ಜಿಲ್ಲಾಡಲಿತವಾಗಲಿ ಅಥವಾ ಸಂಬAಧಪಟ್ಟ ಯಾವುದೆ ಇಲಾಖೆಯವರಾಗಲಿ ಮುಂಬರುವ ದಿನಗಳಲ್ಲಿ ಬಸವಾದಿ ಶರಣರ ಮತ್ತು ವಚನ ಸಾಹಿತ್ಯದ ಕುರಿತು ಚರ್ಚೆ, ವಿಮರ್ಶೆಯಂತಹ ಕಾರ್ಯಕ್ರಮಗಳು ಜರುಗಲಿ ಎಂಬುವುದು ವಚನ ಸಾಹಿತ್ಯಾಕರ್ಷಕರ ಮತ್ತು ಬಸವಾಭಿಮಾನಿಗಳ ಆಸೆಯಾಗಿದೆ
ಬಸವರಾಜ ಚಿನಗುಡಿ ಚನ್ನಮ್ಮನ ಕಿತ್ತೂರು

ಜಿಲ್ಲೆ

ರಾಜ್ಯ

error: Content is protected !!