Saturday, July 27, 2024

“ಕುರಾನ್ ನಲ್ಲಿ ಬಸವಣ್ಣ”-ಮುಂದುವರಿದ ಭಾಗ-2

ಧಾರಾಳವಾಗಿ ಮಾತಾಡಲು ಕೇಳಿಕೊಂಡ ಜೀವ ಸಾಮಾನ್ಯ ಜೀವವಲ್ಲ. ನಾಲ್ಕು ಬ್ರಹತ್ ಕಾದಂಬರಿಗಳನ್ನು 220 ಕಥೆಗಳನ್ನು ಬರೆದು ಕನ್ನಡದ ಮನೆಮಾತಾದ ಶ್ರೇಷ್ಟ ಕಥೆಗಾರ ಮಾತ್ರವಲ್ಲ, ತಮ್ಮ ಸೃಜನ ಶೀಲ ಗದ್ಯ ಬರಹಗಳಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಇತಿಹಾಸದಲ್ಲಿ, ಎರಡು ಬಾರಿ ಪ್ರಶಸ್ತಿ ಪಡೆದು ದಾಖಲೆ ನಿರ್ಮಿಸಿರುವ ದೇಶದ ಏಕೈಕ ಸಾಹಿತಿ. ‘ನಾನು ತೂಕವಾಗಿ ಮಾತಾಡಬೇಕು’ ಎಚ್ಚರಿಸಿತು ಒಳಮನಸ್ಸು.

https://suddisaddu.com/News-ID.997/ ‘ಓದಿರಿ’ ಕುರಾನ್ ನಲ್ಲಿ ಬಸವಣ್ಣ ಭಾಗ-1

“ಸರ್ ನೀವು ಬರೆದ ‘ಓದಿರಿ’ ಕಾದಂಬರಿ ಅಲ್ಲಾನ ನಿಜ ಜೀವನ ಆಧರಿಸಿ ಬರೆದ ಒಂದು ಕಾದಂಬರಿ ಅಲ್ಲವೆ? ” ಹೌದು. ನಿಮಗೇಕೆ ಸಂದೇಹ ಬಂತು ” ಅಂದರು. ‘ನೇರವಾಗಿ ವಿಷಯಕ್ಕೆ ಬಾ’ ಎಂಬ ಅಹ್ವಾನದಂತಿತ್ತು ಅವರ ಧ್ವನಿ.

‘ಕಳಬೇಡ ಕೊಲಬೇಡ ಹುಸಿಯ ನುಡಿಯಲುಬೇಡ’ ಎಂಬ ಬಸವಣ್ಣವರ ಸಪ್ತ ಶೀಲಗಳ ವಚನವನ್ನು ಬಸವಣ್ಣನವರಗಿಂತ ಮುಂಚಿತವಾಗಿ ಅಲ್ಲಾ ಹೇಳಿದ್ದಾ? ಎಂಬ ಪ್ರಶ್ನೆ ಗಂಟಲಲ್ಲಿ ಉಳಿದುಬಿಟ್ಟಿತು . ನೇರವಾಗಿ ಈ ವಿಷಯಕ್ಕೆ ಬರುವದಕ್ಕಿಂತ ಮುಂಚೆ ‘ಓದಿರಿ’ ಪುಸ್ತಕದಲ್ಲಿ ಬರುವ ಅನೇಕ ಸಂದೇಹ ನೀವಾರಿಸಿಕೊಳ್ಳಬೇಕಿತ್ತು ನನಗೆ. ಇದನ್ನೇ ಮೊದಲಿಗೆ ಕೇಳಿ ಮಾತು ಕೊನೆಗೊಳಿಸುವ ಮನಸ್ಸರಲಿಲ್ಲ ನನಗೆ. ಬದಲಾಗಿ ಅದರಲ್ಲಿರುವ ಬಸವಣ್ಣ ಹಾಗೂ ಪ್ರವಾದಿ ಮೊಹಮ್ಮದರ ಸಮಾನ ಚಿಂತನೆಗಳನ್ನು ಅರಿಯಲು ಅನೇಕ ಪ್ರಶ್ನೆಗಳಿದ್ದವು ನನ್ನ ಮನದಲ್ಲಿ .

ಸ್ವಲ್ಪ ವಿಭಿನ್ನವಾಗಿ ಅವರನ್ನು ಮಾತಿಗೆಳೆಯೋಣ ಎಂದು ಅವರ ಕಾದಂಬರಿಯ ಮತ್ತೊಂದು ಪುಟದಲ್ಲಿ (ಸಂಖ್ಯೆ 154) ಬರೆದ
“ನೀವೇಕೆ ನಮ್ಮವರಾಗಬಾರದು” ಎಂದು ಮಕ್ಕಾ ಯಾತ್ರೆಗೆ ಬರುವ ಎಲ್ಲ ವರ್ತಕರಿಗೆ ಕೇಳುವ ಪ್ರಶ್ನೆಯ ಅರ್ಥವು ಸಹ ಬಸವಣ್ಣನವರ “ಇವ ನಮ್ಮವ, ಇವ ನಮ್ಮವ” ಎಂಬ ಸಿದ್ಧಾಂತ ದಂತಿದೆಯಲ್ಲವೆ? ಎಂದೆ.”ಪಾಟೀಲ ಸಾಬ್ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುವೆ, ನಿಮ್ಮ ಎಲ್ಲ ಪ್ರಶೆಗಳು ಮುಗಿದವೆ?” ಎಂದು ಮರು ಪ್ರಶ್ನಿಸಿದರು ಸಂತ ಬೋಳುವಾರು.

“ಅನೇಕ ಪ್ರಶ್ನೆಗಳಿವೆ ಸಾಬ್, ನನ್ನ ಮನಸ್ಸನ್ನು ಕೊರೆಯುವ ಈ ಪ್ರಶ್ನೆಗೆ ಮೊದಲು ಪರಿಹಾರ ಸೂಚಿಸಿ” ಎಂದೆ. ನಿಮ್ಮ ಪ್ರಶ್ನೆಗೆ ಉತ್ತರ 155 ಪುಟದ ಕೊನೆಯ ಪ್ಯಾರಾದಲ್ಲಿದೆಯಲ್ಲ? ಎಂದರು. ಇನ್ನೊಮ್ಮೆ ಪುಟ ತಿರುವಿ ಈಗ ಓದಿ ಎಂದರು.ಅವರ ಅಣತಿಯಂತೆ 155 ಪುಟ ಒದಲಾರಂಬಿಸಿದೆ. ನಿಜ ನೀವು ನಮ್ಮವರಾಗುವುದೂ. ನಾವು ನಿಮ್ಮವರಾಗುವುದೂ ಎರಡು ಒಂದೇ. ನಮ್ಮಿಬ್ಬರನ್ನು ಈ ಭೂಮಿಗೆ ಕಳುಹಿಸಿರುವ ಆರಾಧ್ಯನೂ ಒಬ್ಬನೇ. ಆದರೆ, ಅವನು ಕಳಿಸಿದ ಗ್ರಂಥಗಳೆಲ್ಲವೂ ಒಂದೇ ಅಲ್ಲ. ಅವು ಬೇರೆಬೇರೆ. ಯಾವ ಕಾಲದಲ್ಲಿ ಯಾವ ಗ್ರಂಥ ಅಗತ್ಯವೆಂಬುದನ್ನು ಅವನೊಬ್ಬನೇ ಅರಿತವನು. ಇದೀಗ ಅವನು ತನ್ನ ಅಂತಿಮ ಸತ್ಯವನ್ನು ಕುರ್ ಆನ್ ಗ್ರಂಥದ ಮೂಲಕ ಪ್ರಕಟಿಸಬಯಸಿರುವನು. ಜನರಿಗೆ ಅದನ್ನು ತಿಳಿಸಲು ನನ್ನನ್ನು ಪ್ರವಾದಿಯನ್ನಾಗಿ ಅರಿಸಿರುವನು”

ಉತ್ತರ ಮನಸ್ಸಿಗೆ ಸಮಾಧಾನ ನೀಡಿತು. ತಕ್ಷಣ ಮತ್ತೊಂದು ಪ್ರಶ್ನೆ ಉದ್ಭಭವಿಸಿತು ತಲೆಯಲ್ಲಿ. ‘ಅಂದರೆ ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಇಂತಹದೆ ಪ್ರಶ್ನೆಗಳನ್ನು ಕೇಳಲು ಜನ್ಮ ತಾಳಿದರೆ? ವಿಭಿನ್ನ ಧರ್ಮಗಳ ಸಿದ್ಧಾಂತದಂತೆ ವಚನಗಳನ್ನೂ ರಚಿಸಿದರೆ ? ತಲೆ ಭಾರವಾಗಲಾರಂಭಿಸಿತು.

……..ಮುಂದುವರಿಯುವುದು.

ಲೇಖಕರು: ಜಿ ಬಿ ಪಾಟೀಲ.
ಬೆಂಗಳೂರು. (M)-9448087657

ಜಿಲ್ಲೆ

ರಾಜ್ಯ

error: Content is protected !!