Saturday, July 27, 2024

ಎಂ.ಕೆ. ಹುಬ್ಬಳ್ಳಿಯಲ್ಲಿ ವಯಸ್ಕರ ಶಿಕ್ಷಣ ಅಭಿಯಾನ ಕಾರ್ಯಕ್ರಮ ಜರುಗಿತು

ಸುದ್ದಿ ಸದ್ದು ನ್ಯೂಸ್

ಚನ್ನಮ್ಮನ ಕಿತ್ತೂರು: ತಾಲೂಕಿನ ಎಂ.ಕೆ. ಹುಬ್ಬಳ್ಳಿ ಪಟ್ಟ್ಣದಲ್ಲಿ ಇರುವ ಶ್ರೀ ಕಲ್ಮೇಶ್ವರ ದೇವಸ್ಥಾನದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ಮಹಿಳಾ ಜ್ಞಾನ ವಿಕಾಸ, ಸೃಜನಶೀಲ  ಕಾರ್ಯಕ್ರಮದ ಅಡಿಯಲ್ಲಿ ವಯಸ್ಕರ ಶಿಕ್ಷಣ ಅಭಿಯಾನ  ಕಾರ್ಯಕ್ರಮ ಜರುಗಿತು

ಜಿಲ್ಲಾ ನಿರ್ದೇಶಕ ಪ್ರದೀಪ್ ಜಿ ಅತಿಥಿ ಸ್ಥಾನ ವಹಿಸಿ ಮಾತನಾಡಿ ಮಹಿಳೆಯರು ತಮಗಾಗಿ ಬದುಕುವುದಿಲ್ಲ ತಮ್ಮ ಕುಟುಂಬ ಮತ್ತು ತಮ್ಮ ಸಂಸಾರಕ್ಕಾಗಿ ಬದುಕುತ್ತಾರೆ. ಅದಕ್ಕಾಗಿ ಮಹಿಳೆಗೆ ಸಮಾಜದಲ್ಲಿ ಉನ್ನತ ಗೌರವವನ್ನು ನೀಡಲಾಗುತ್ತಿದೆ. ಅವರು ತಮ್ಮ ಕುಟುಂಬಕ್ಕೆ ಯಾವುದೆ ತರಹದ ತೊಂದರೆ ಬರಬಾರದು ಏನೇ ಕಷ್ಟ ಬಂದರು ಅದು ನಮಗೆ ಬರಲಿ ಎಂದು ದೇವರಲ್ಲಿ ಕೇಳಿಕೊಳ್ಳುತ್ತಾರೆ. ಅದಕ್ಕಾಗಿ ಇಂತಹ ತಾಯಿಗೆ ಅಕ್ಷರ ಜ್ಞಾನ ಇರಬೇಕು ಎಂದು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆ ವಯಸ್ಕರ ಶಿಕ್ಷಣ ಅಭಿಯಾನವನ್ನು ಪ್ರಾರಂಭಿಸಿದ್ದಾರೆ.  ಇದರಲ್ಲಿ ಮೂವತ್ತು ಜನ ಅಕ್ಷರ ಜ್ಞಾನ ಪಡೆದು ಸಂತೋಷದ ಹೊಸ್ತಿಲಲ್ಲಿ ಇದ್ದಿರಿ ಇದಕ್ಕಿಂತ ದೊಡ್ಡ ಸಂತೋಷ ಯಾವುದು ಇಲ್ಲ ಎಂದರು.

ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಡಾ ಜಗದೀಶ್ ಹಾರುಗೊಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಮಕ್ಕಳು ಅಕ್ಷರ ಅಭ್ಯಾಸದಲ್ಲಿ ಅಷ್ಟೇ ಅಲ್ಲದೆ ಬೇರೆಯಾವುದೆ ಸಣ್ಣ ತಪ್ಪು ಮಾಡಿದರು ಅದನ್ನು ತಿದ್ದಿ ಬುದ್ದಿ ಹೇಳುವವನೆ ನಿಜವಾದ ಶಿಕ್ಷಕ. ಕಲಿಕೆ ಅನ್ನುವುದು ನಿರಂತರವಾಗಿ ಇರುತ್ತದೆ ಹೆಸರೆ ಸೂಚಿಸುವಂತೆ ಜ್ಞಾನವನ್ನು ವಿಕಾಶಗೊಳಿಸಲು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯವರು ಉತ್ತಮವಾದ ಈ ಯೋಜನೆಯನ್ನು ಕೊಟ್ಟಿದ್ದಾರೆ ನಿಮಗೆ ಕಲಿಯಲು ಶ್ರಮ ವಹಿಸಿದ ರ‍್ವರಿಗೂ ಶುಭವಾಗಲಿ ಎಂದರು.

ಚಿಕ್ಕಬಾಗೇವಾಡಿ ಸರಕಾರಿ ಪ್ರೌಢ ಶಾಲೆ ಮುಖ್ಯಶಿಕ್ಷಕ ಷಣ್ಮುಖ ಗಣಾಚಾರಿ ಸಂಪAನ್ಮೂಲ ವ್ಯಕ್ತಿಗಳಾಗಿ  ಆಗಮಿಸಿ ಅಕ್ಷರ ಅಭ್ಯಾಸ ಪ್ರಾಮುಖ್ಯತೆ ಬಗ್ಗೆ ತಿಳಿಸಿದರು.

ವಾತ್ಸಲ್ಯ ಜ್ಞಾನ ವಿಕಾಸ ಕೇಂದ್ರದ ಅಧ್ಯಕ್ಷೆ ರುದ್ರಮ್ಮ ಕೊಳ್ಳಿ ಕಾರ್ಯಕ್ರಮದ ಅಧ್ಯಕ್ಷೆತೆ ವಹಿಸಿದ್ದರು.

ಈ ವೇಳೆ ಯೋಜನಾಧಿಕಾರಿ ಪ್ರಶಾಂತ ನಾಯ್ಕ್, ಅದೃಶ್ಯಪ್ಪ ಗದ್ದಿಹಳ್ಳಿಶೆಟ್ಟಿ, ಮೇಲ್ವಿಚಾರಕ ಗಣೇಶ್ ನಾಯ್ಕ್, ಸಂತೋಷ್ ಯಲಿಗಾರ,  ಭಾರತಿ ಸುಣಗಾರ, ಶೃತಿ ಯಲಿಗಾರ, ದ್ರೌಪದಿ ಪಾಟೀಲ, ಗೀತಾ ಕತ್ತಿ, ನಿಲಂಬಿಕಾ ನಾಡಗೌಡ್ರ ಅಕ್ಷರ ಫಲಾನುಭವಿಗಳು ಸೇರಿದಂತೆ ರ‍್ವ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಜಿಲ್ಲೆ

ರಾಜ್ಯ

error: Content is protected !!