Saturday, July 20, 2024

ಅಕ್ಷರ ಸಂಗಾತ ಕಥಾ ಸ್ಪರ್ಧೆ ಫಲಿತಾಂಶ ಪ್ರಕಟ : 4 ಯುವ ಕಥೆಗಾರರಿಗೆ ಬಹುಮಾನ

ಧಾರವಾಡ. ಅ.27: ಹಿರಿಯ ಪತ್ರಕರ್ತ ಕಥೆಗಾರ ಟಿ.ಎಸ್ ಗೊರವರ ಅವರ ಸಂಪಾದಕತ್ವದಲ್ಲಿ ಮೂಡಿ ಬರುತ್ತಿರುವ ‘ಅಕ್ಷರ ಸಂಗಾತ’ ತ್ರೈಮಾಸಿಕ ಸಾಹಿತ್ಯ ಪತ್ರಿಕೆ ಇತ್ತೀಚೆಗೆ ಆಯೋಜಿಸಿದ್ದ ‘ಯುವ ಕಥಾ ಸ್ಪರ್ಧೆ’ಯಲ್ಲಿ ಕಥಾ ಬಹುಮಾನವನ್ನು ಇಬ್ಬರು ಸಮಾನವಾಗಿ ಹಂಚಿಕೊಂಡಿದ್ದು, ಸುವರ್ಣ ಚೆಳ್ಳೂರು ಅವರ *ಕಂಬದ ಹಕ್ಕಿ* ಮತ್ತು ಪ್ರವೀಣ್ ಕುಮಾರ್ ಜಿ ಅವರ *ಗುಟ್ಟು* ಕಥೆಗಳು ಬಹುಮಾನ ಪಡೆದುಕೊಂಡಿವೆ.
ನಾಗರಾಜ ಕೋರಿ ಅವರ *ಮಲ್ಲಯ್ಯನ ಮೈಕು* ಝಬೈರ್ ಅಹ್ಮದ್ ಪರಪ್ಪು ಅವರ *ಒಂದು ತಿರುವಿನ ಕರಾಮತ್ತು* ಒಪ್ಪಿತ ಕತೆಗಳಾಗಿ ಆಯ್ಕೆಯಾಗಿವೆ. ಆಯ್ಕೆಯಾದ ನಾಲ್ಕೂ ಕಥೆಗಳಿಗೂ ತಲಾ ೫ ಸಾವಿರ ರೂ. ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು. ಮುಂಬರುವ 2022 ರ ಜನವರಿಯಲ್ಲಿ ಧಾರವಾಡದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು.

ಕಥೆಗಳ ತೀರ್ಪುಗಾರರಾಗಿ ಹಿರಿಯ ಕಥೆಗಾರರಾದ ಬಾನು ಮುಷ್ತಾಕ್ ಹಾಗೂ ಜಿ.ವಿ. ಆನಂದಮೂರ್ತಿ ಅವರು ಕಥೆಗಳನ್ನು ಆಯ್ಕೆ ಮಾಡಿದ್ದಾರೆ.

ಜಿಲ್ಲೆ

ರಾಜ್ಯ

error: Content is protected !!