Thursday, September 19, 2024

ಕಿತ್ತೂರು ನಾಡಿನ ಅಭಿವೃದ್ಧಿಗೆ ಪಣತೊಟ್ಟ ಏಕಮೇವ ರಾಜಕಾರಣಿ ಎಸ್ ಬಂಗಾರಪ್ಪ

ಸುದ್ದಿ ಸದ್ದು ನ್ಯೂಸ್

ಚನ್ನಮ್ಮನ ಕಿತ್ತೂರು ಸಮಾಜವಾದಿ ಸಾರೆಕೊಪ್ಪ ಬಂಗಾರಪ್ಪ ಅವರು ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು. ಸಮಾಜವಾದಿ ಹಿನ್ನೆಲೆಯಿಂದ ಬಂದ ಅವರು ರೈತ ಪರ ಹಾಗೂ ಸಮಾಜಿಕ ಅಸಮಾನತೆಯ ವಿರುದ್ಧ ಹೋರಾಟಗಳನ್ನು ಮಾಡುತ್ತಲೇ, ಲೋಹಿಯಾ ಹಾಗೂ ಗೋಪಾಲಗೌಡರ ವಿಚಾರಗಳ ಅನುಯಾಯಿಯಾಗಿದ್ದರು.

ಕಿತ್ತೂರು ಮತ್ತು ಎಸ್ ಬಂಗಾರಪ್ಪ: ಕಿತ್ತೂರು ಮತ್ತು ಕಿತ್ತೂರು ಕೋಟೆಯ ಅಭಿವೃದ್ಧಿಗಾಗಿ ಅವರು ಪಣ ತೊಟ್ಟು ನಿಂತಿದ್ದರು. ಕಿತ್ತೂರು ಕೋಟೆ ಉಳುವಿಗಾಗಿ ಇವರಷ್ಟು ಕೆಲಸ ಮಾಡಿದ ರಾಜಕೀಯ ನಾಯಕ ಯಾರು ಇಲ್ಲ ಎಂದರೆ ತಪ್ಪಾಗಲಾರದು. ಇವರು ಮುಖ್ಯ ಮಂತ್ರಿ ಇದ್ದಾಗ ಕಿತ್ತೂರು ಕೋಟೆ ಒಳಗೆ ಅನೇಕ ಬದಲಾವಣೆಗಳು ಕಂಡವು. ಆದರೆ ಕಿತ್ತೂರು ದುರ್ದೈವ ಕೆಲ ಪಟ್ಟಭದ್ರ ಹಿತಾಸಕ್ತಿಗಳಿಂದ ಕಿತ್ತೂರು ಮತ್ತು ಕೋಟೆಯ ಅಭಿವೃದ್ಧಿಗೆ ಅಡ್ಡಗಾಲು ಹಾಕಿದರು. ಇದರಿಂದ ರಾಷ್ಟ್ರೀಯ ಹೆದ್ದಾರಿಯಿಂದ ರಾಣಿ ಚನ್ನಮ್ಮನ ಕೋಟೆವರೆಗೆ ನೇರವಾಗಿ ಆಗಬೇಕಿದ್ದ ದ್ವಿಪದಿ ರಸ್ತೆ ಅಂದು ಅರ್ಧಕ್ಕೆ ನಿಂತಿದ್ದು ಇಂದಿಗೂ ಪುನಃ ಪ್ರಾರಂಭವಾಗಿಲ್ಲ. ಕಿತ್ತೂರು ನಾಡಿನ ಅಭಿವೃದ್ಧಿಗೆ ಇವರಷ್ಟು ಕೆಲಸ ಮಾಡಿದ ರಾಜಕಾರಣಿಯನ್ನು ನಾ ಕಂಡಿಲ್ಲ.

ಇಂದು ಅವರ ಜನ್ಮದಿನ ಅವರು ಕಿತ್ತೂರು ಅಭಿವೃದ್ಧಿ ಹಿತದೃಷ್ಟಿಯಿಂದ ಮತ್ತೆ ಹುಟ್ಟಿ ಬರಲಿ. ಅವರಿಗೆ ಕಿತ್ತೂರು ನಾಡಿನ ಸಮಸ್ತ ನಾಗರಿಕರ ಪರವಾಗಿ ಕೋಟಿ ನಮನಗಳು

ಜಿಲ್ಲೆ

ರಾಜ್ಯ

error: Content is protected !!