Monday, April 15, 2024

ಸ್ವಂತ ತಮ್ಮನನ್ನೇ ಬಿಡದವನು, ಕ್ಷೇತ್ರದ ಜನರನ್ನ ಬಿಡ್ತಾನಾ.? ಪ್ರಕಾಶ ಸಜ್ಜನ.

ಹಾನಗಲ್: ಮಾಜಿ ಸಚಿವರು ಶಾಸಕರು ಆದ ಸಿ.ಎಂ.ಉದಾಸಿ ಅವರ ನಿಧನದಿಂದ ತೆರವಾಗಿದ್ದ ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿರುವ ಬೆನ್ನಲ್ಲೆ ಬಿಜೆಪಿ ಅಭ್ಯರ್ಥಿ ಶಿವರಾಜ್​ ಸಜ್ಜನ್​ ವಿರುದ್ಧ ಸ್ವಂತ ಅವರ ಸಹೋದರ ಪ್ರಕಾಶ್​ ಸಜ್ಜನ್​ ಅನ್ಯಾಯದ ಆರೋಪ ಮಾಡುತ್ತಿದ್ದಾರೆ.

ನಾನು ಅವರಿವರಿಗೆ ಮತ ನೀಡಿ ಎಂದು ಹೇಳುವುದಿಲ್ಲ ನಿಮಗೆ ಯಾರಿಗೆ ಬೇಕು ಅವರಿಗೆ ಮತ ನೀಡಿ, ಆದರೆ ದುರ್ಜನನಾದ ಶಿವರಾಜ್ ಸಜ್ಜನ್ ಅವನಿಗೆ ಮಾತ್ರ‌ ಮತ ನೀಡಬೇಡಿ ಎಂದು ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿರುವ ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನ್ ಅವರ ತಮ್ಮ ಪ್ರಕಾಶ್ ಸಜ್ಜನ್
ಸ್ವಂತ ತಮ್ಮ ಎನ್ನದೆ, ನನಗೆ ಬರಬೇಕಾದ ಆಸ್ತಿ ಕೊಡದೆ ದ್ರೋಹ ಮಾಡಿದ್ದಾನೆ. ಒಟ್ಟು 81 ಎಕರೆ ಜಮೀನಿನಲ್ಲಿ ನನಗೆ ಕೇವಲ 9 ಎಕರೆ ಮಾತ್ರ ನೀಡಿದ್ದಾನೆ. ಉಳಿದ ಆಸ್ತಿ ಕೇಳಿದ್ರೆ ನನಗೆ ಜೀವ ಬೆದರಿಕೆ ಹಾಕುತ್ತಾನೆ. ಸ್ವಂತ ಸಹೋದರನಿಗೆ ಅನ್ಯಾಯ ಮಾಡಿದವನು ಕ್ಷೇತ್ರದ ಜನರನ್ನು ಬಿಡುತ್ತಾನಾ ಇಂತಹವರಿಗೆ ಕ್ಷೇತ್ರದ ಜನರು ಮತ ಹಾಕಬೇಡಿ ಎಂದು ಮನವಿ ಮಾಡುತ್ತಾ ಕ್ಷೇತ್ರದಾದ್ಯಂತ ಪ್ರಚಾರ ಮಾಡುತ್ತಿರುವುದು ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನ್ ಅವರಿಗೆ ಇರುಸುಮುರುಸು ಉಂಟಾಗಿದೆ.

“ನನ್ನ ಸಹೋದರ ನನಗೆ ಅನ್ಯಾಯ ಮಾಡಿದ್ದಾನೆ, ಇಂತಹ ವ್ಯಕ್ತಿಗೆ ಮತ ಹಾಕಬೇಡಿ. ಸ್ವಂತ ತಮ್ಮನನ್ನೇ ಬಿಡದವನು, ಕ್ಷೇತ್ರದ ಜನರನ್ನ ಬಿಡ್ತಾನಾ..? ಆದ್ದರಿಂದ ಹಾನಗಲ್ಲ ಮತಕ್ಷೇತ್ರದ ಪ್ರಬುದ್ಧ ಮತದಾರರು ಎಚ್ಚರದಿಂದ ಯೋಚಿಸಿ ಯೋಜಿಸಿ ಮತ ಚಲಾಯಿಸಿ” ಪ್ರಕಾಶ್ ಸಜ್ಜನ್

ಜಿಲ್ಲೆ

ರಾಜ್ಯ

error: Content is protected !!