Saturday, July 27, 2024

ಕನ್ನಡ ಕಾಯಕ ವರ್ಷ ‘ಕನ್ನಡಕ್ಕಾಗಿ ನಾವು’ ಅಭಿಯಾನ: ರಾಷ್ಟ್ರಮಟ್ಟದ ಕನ್ನಡ ಕೈಬರಹ ಸ್ಪರ್ಧೆ

ಬೆಂಗಳೂರು(ಅ.25): ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕರ್ನಾಟಕ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ  ಆಚರಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ  “ಕನ್ನಡಕ್ಕಾಗಿ ನಾವು” ಅಭಿಯಾನದ ಅಂಗವಾಗಿ ಸುಂದರ ಕನ್ನಡ ಕೈಬರಹದಲ್ಲಿ ಬರೆಯುವ ಸ್ಪರ್ಧೆಯನ್ನು ಶಾಲಾ ಕಾಲೇಜುಗಳ  ವಿದ್ಯಾರ್ಥಿಗಳಿಗಾಗಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ವತಿಯಿಂದ ಏರ್ಪಡಿಸಲಾಗಿದ್ದು ಆಸಕ್ತ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ಕುವೆಂಪು ಭಾಷಾಭಾರತಿ ಪ್ರಾಧಿಕಾರ ಬೆಂಗಳೂರು ಪ್ರಕಟನೆ ಹೊರಡಿಸಿದ್ದಾರೆ.

ಸೂಚನೆಗಳು:
(1) ದೇಶದ ಯಾವುದೇ ಭಾಗದಲ್ಲಿ ಇರುವ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಬಹುದು.

(2) ಸ್ಪರ್ಧೆಯನ್ನು ಮೂರು ವಿಭಾಗಗಳಲ್ಲಿ ನಡೆಸಲಾಗುವುದು. (ಅ) ಏಳನೆಯ ತರಗತಿವರೆಗಿನ ವಿಭಾಗ. (ಆ) ಎಂಟರಿಂದ ದ್ವಿತೀಯ ಪದವಿಪೂರ್ವ ತರಗತಿಯವರೆಗಿನ ವಿಭಾಗ. (ಇ) ಪದವಿ ಮತ್ತು ಸ್ನಾತಕೋತ್ತರ ಪದವಿಯ ವಿಭಾಗ.

(3) ಪದವಿ ಮತ್ತು ಸ್ನಾತಕೋತ್ತರ ಪದವಿಯ ವಿಭಾಗದಲ್ಲಿ ವೈದ್ಯಕೀಯ, ಇಂಜಿನಿಯರಿಂಗ್ ಇತ್ಯಾದಿ ವಿವಿಧ ವೃತ್ತಿಪರ ಪದವಿಗಳೂ ಸೇರಿದಂತೆ ಎಲ್ಲಾ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಭಾಗವಹಿಸಬಹುದು.

(4) ಪ್ರತಿ ವಿಭಾಗದಲ್ಲೂ ಅತ್ಯುತ್ತಮ ಕನ್ನಡ ಕೈಬರಹದೊಂದಿಗೆ  ವಿಚಾರಗಳನ್ನು ಮಂಡಿಸಿದ ಮೂವರು ವಿದ್ಯಾರ್ಥಿಗಳಿಗೆ, ಅಂದರೆ ಒಟ್ಟು ಒಂಬತ್ತು ವಿದ್ಯಾರ್ಥಿಗಳಿಗೆ ತಲಾ ರೂ. 5,000/- ದಂತೆ ಬಹುಮಾನ ನೀಡಲಾಗುವುದು.
(5) ವಿದ್ಯಾರ್ಥಿಗಳು “ಕನ್ನಡವನ್ನು ಬೆಳೆಸಲು ನಾನೇನು ಮಾಡುತ್ತೇನೆ?” ಎಂಬ ವಿಷಯದ ಬಗ್ಗೆ ಎ4 ಹಾಳೆಯ ಒಂದು ಪುಟದಲ್ಲಿ ಸುಂದರ ಕೈಬರಹದಲ್ಲಿ ಬರೆದು ಕನ್ನಡದಲ್ಲಿ ಸಹಿ ಮಾಡಬೇಕು.

ಅದೇ ಹಾಳೆಯ ಹಿಂದಿನ ಪುಟದಲ್ಲಿ ಸ್ಪರ್ಧಿಗಳು ತಮ್ಮ ಹೆಸರು, ತರಗತಿ ಮತ್ತು ತಾವು ಕಲಿಯುತ್ತಿರುವ ವಿದ್ಯಾಸಂಸ್ಥೆಯ ವಿಳಾಸ ಮತ್ತು ತಮ್ಮ ಅಥವಾ ಹೆತ್ತವರ ದೂರವಾಣಿ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು. ಅದರ ಬಳಿಕ ವಿದ್ಯಾಸಂಸ್ಥೆಯ ಮುಖ್ಯಸ್ಥರ/ವಿಭಾಗ ಮುಖ್ಯಸ್ಥರ ಸಹಿ, ಮೊಹರು ಮತ್ತು ದೂರವಾಣಿ ಸಂಖ್ಯೆ ಇರಬೇಕು.

(6) ಸ್ಪರ್ಧಿಗಳು ತಮ್ಮ ಬರಹವನ್ನು ತ್ವರಿತ ಅಂಚೆ ಅಥವಾ ಕೊರಿಯರ್ ಮೂಲಕ ರಿಜಿಸ್ಟ್ರಾರ್, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಕಲಾಗ್ರಾಮ, ಜ್ಞಾನಭಾರತಿ ಅಂಚೆ, ಬೆಂಗಳೂರು- 560056  ಈ ವಿಳಾಸಕ್ಕೆ ಕಳುಹಿಸಬೇಕು.

(7) ಲಕೋಟೆಯ ಹೊರಭಾಗದಲ್ಲಿ ವಿದ್ಯಾರ್ಥಿಗಳು ತಮ್ಮ ತರಗತಿ ಸಹಿತ ವಿದ್ಯಾಸಂಸ್ಥೆಯ ವಿಳಾಸ ನಮೂದಿಸಬೇಕು.

(8) ಪ್ರವೇಶಿಕೆಗಳು ಮೇಲೆ ನೀಡಲಾದ ವಿಳಾಸಕ್ಕೆ ತಲುಪಲು ಕೊನೆಯ ದಿನಾಂಕ  29-10-2021.ಆಗಿರುತ್ತದೆ. ಹೊರರಾಜ್ಯಗಳಿಂದ ಬರುವ ಪ್ರವೇಶಿಕೆಗಳಿಗೆ ಮಾತ್ರ ಕೊನೆಯ ದಿನಾಂಕ: 30-10-2021.

ಜಿಲ್ಲೆ

ರಾಜ್ಯ

error: Content is protected !!